IND vs NZ: ಟೀಂ ಇಂಡಿಯಾ ಎದುರು ಆ ವ್ಯಕ್ತಿ ದೊಣ್ಣೆ ಹಿಡಿದು ನಿಂತಾಗ ಪರಿಸ್ಥಿತಿ ಹೀಗಿತ್ತು!
ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ತಂಡವು ಮೌಂಟ್ ಮೌಂಗನುಯಿಯಲ್ಲಿ ಸರಣಿಯ 2ನೇ T20 ಪಂದ್ಯ ಆಡಬೇಕಿದೆ. ಇದಕ್ಕಾಗಿ ತೌರಂಗ ನಗರಕ್ಕೆ ಆಗಮಿಸಿದ ತಂಡವನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿದೆ.
ನವದೆಹಲಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸರಣಿಯ 2ನೇ T20 ಪಂದ್ಯವು ಇಂದು(ನ.20) ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ತೌರಂಗ ನಗರಕ್ಕೆ ಆಗಮಿಸಿದ ಆಟಗಾರರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಈ ವೇಳೆ ತಂಡಕ್ಕೆ ವಿಶೇಷ ಸ್ವಾಗತ ಸಮಾರಂಭವನ್ನೂ ಆಯೋಜಿಸಲಾಗಿತ್ತು. ಬಿಸಿಸಿಐನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಇದರ ಕೆಲವು ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ.
ಮಳೆ ಅಡ್ಡಿ ಸಾಧ್ಯತೆ?
ಸರಣಿಯ ಮೊದಲ ಟಿ-20 ಪಂದ್ಯ ಟಾಸ್ ಆಗದೆ ಮಳೆಯಿಂದಾಗಿ ರದ್ದಾಗಿತ್ತು. ಬೇ-ಓವಲ್ ಮೈದಾನದಲ್ಲಿ ನಡೆಯಲಿರುವ 2ನೇ ಟಿ-20 ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಪ್ರೇಮಿಗಳು ಕಾಯುತ್ತಿದ್ದಾರೆ. ಆದರೆ ಈ ಪಂದ್ಯವೂ ರದ್ದಾಗುವ ಸಾಧ್ಯತೆ ಇದೆ. ಮೌಂಟ್ ಮೌಂಗನುಯಿಯಲ್ಲಿ ನಡೆಯುವ ಪಂದ್ಯದ ವೇಳೆ ಮಳೆಯಾಗಲಿದೆ ಎನ್ನಲಾಗುತ್ತಿದೆ. ನ್ಯೂಜಿಲೆಂಡ್‌ನಲ್ಲಿ ಸ್ಥಳೀಯ ಕಾಲಮಾನ ರಾತ್ರಿ 7:30ಕ್ಕೆ ಪಂದ್ಯ ಆರಂಭವಾಗಲಿದ್ದು, ಭಾರತದಲ್ಲಿ ಆ ವೇಳೆಗೆ ಮಧ್ಯಾಹ್ನ 12 ಗಂಟೆಯಾಗಲಿದೆ.
ಇದನ್ನೂ ಓದಿ: IND vs NZ 2nd T20: ಕ್ರಿಕೆಟ್ ಪ್ರಿಯರಿಗೆ ಬ್ಯಾಡ್ ನ್ಯೂಸ್: IND vs NZ ಎರಡನೇ T20 ಪಂದ್ಯ ನಡೆಯುವುದಿಲ್ಲ!
ಭಾರತ ತಂಡಕ್ಕೆ ಸ್ವಾಗತ ಸಮಾರಂಭ
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಇದನ್ನೂ ಓದಿ: Dhoni 'ಗೌರವ' ನೀಡಲಿಲ್ಲ ಎಂದು ತಂಡ ತೊರೆದ Virat Kohli ದಾಖಲೆ ಸರಿಗಟ್ಟಲಿರುವ ಸ್ಟಾರ್ ಆಟಗಾರ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.