India vs Pakistan, Reserve Day: ಏಷ್ಯಾ ಕಪ್-2023 ರ ಸೂಪರ್-4 ಸುತ್ತಿನಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುತ್ತಿದೆ. ಮಳೆ ಮತ್ತು ಕೆಟ್ಟ ಹವಾಮಾನದಿಂದಾಗಿ ಈ ಪಂದ್ಯವನ್ನು ಸೆಪ್ಟೆಂಬರ್ 10 ಭಾನುವಾರ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಮೀಸಲು ದಿನವನ್ನು ಇಂದು ಅಂದರೆ ಸೆಪ್ಟೆಂಬರ್ 11 ರಂದು ಇರಿಸಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಭಾರತ vs ಪಾಕಿಸ್ತಾನ ಸೂಪರ್ 4 ಫೈಟ್’ಗೆ ಪ್ಲೇಯಿಂಗ್ 11 ರೆಡಿ: ಸ್ಟಾರ್ ವೇಗಿ ಸೇರಿ ಇಬ್ಬರು ಔಟ್


ಇನ್ನು ಈ ಸಂದರ್ಭದಲ್ಲಿ ಟೀಂ ಇಂಡಿಯಾದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಇದರಿಂದಾಗಿ ಭಾರತ ತಂಡದ ಕೋಟ್ಯಂತರ ಅಭಿಮಾನಿಗಳ ಹೃದಯ ಬಡಿತ ಹೆಚ್ಚಾಗಿದೆ.


ಏಷ್ಯಾಕಪ್‌’ನ ಸೂಪರ್-4 ಸುತ್ತಿನ ಪಂದ್ಯ ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಇಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿವೆ. ಸೆಪ್ಟೆಂಬರ್ 10 ರಂದು ಎರಡೂ ತಂಡಗಳು ಮುಖಾಮುಖಿಯಾಗುತ್ತಿದ್ದವು ಆದರೆ ನಿರಂತರ ಮಳೆಯಿಂದಾಗಿ ಪಂದ್ಯವನ್ನು ಮೀಸಲು ದಿನಕ್ಕೆ ವಿಸ್ತರಿಸಲಾಯಿತು.


ಈ ಪಂದ್ಯ ಮಳೆಯಿಂದ ಸ್ಥಗಿತಗೊಂಡ ಸ್ಥಳದಲ್ಲೇ ಆರಂಭವಾಗಲಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 24.1 ಓವರ್‌ಗಳಲ್ಲಿ 2 ವಿಕೆಟ್‌’ಗೆ 147 ರನ್ ಗಳಿಸಿತು. ಇದೀಗ ಮೀಸಲು ದಿನದಲ್ಲೂ ಭಾರತ ತಂಡ ಈ ಸ್ಕೋರ್’ನೊಂದಿಗೆ ಆಟ ಆರಂಭಿಸಲಿದೆ. ಆಟ ಸ್ಥಗಿತಗೊಂಡಾಗ ವಿರಾಟ್ ಕೊಹ್ಲಿ 8 ರನ್ ಹಾಗೂ ಕೆಎಲ್ ರಾಹುಲ್ 17 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಈ ಇಬ್ಬರೂ ಬಲಿಷ್ಠ ಬ್ಯಾಟ್ಸ್‌ಮನ್‌ಗಳು ಸೆಪ್ಟೆಂಬರ್ 11 ರಂದು ಅಂದರೆ ಮೀಸಲು ದಿನದಂದು ಬ್ಯಾಟಿಂಗ್‌ ಮಾಡಲಿದ್ದಾರೆ.


ಇದನ್ನೂ ಓದಿ: ICC ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಯಾರು? ಟಾಪ್ 5ರಲ್ಲಿ ಈ ಭಾರತೀಯನೇ ಅಗ್ರ...


1524 ದಿನಗಳ ನಂತರ ಸಂಭವಿಸಿದ ಘಟನೆ:


ಭಾರತ ತಂಡವು 1524 ದಿನಗಳ ನಂತರ ಮೀಸಲು ದಿನದಂದು ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಿದೆ. ಈ ಬಾರಿ ಪಾಕಿಸ್ತಾನವನ್ನು ಎದುರಿಸುತ್ತಿದೆ. ಇದಕ್ಕೂ ಮೊದಲು 2019 ರಲ್ಲಿ ಮೀಸಲು ದಿನದಂದು ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ವನ್ನು ವಿಶ್ವಕಪ್ ಸೆಮಿಫೈನಲ್‌’ನಲ್ಲಿ 18 ರನ್‌’ಗಳಿಂದ ನ್ಯೂಜಿಲೆಂಡ್‌ ಸೋಲಿಸಿತ್ತು. ಈ ಬಾರಿ ಮತ್ತೆ ಅಂತಹದ್ದೇ ದಿನ ಬಂದಿದ್ದು, ಫ್ಯಾನ್ಸ್ ಮನದಲ್ಲಿ ಭಯದ ವಾತಾವರಣ ಮನೆ ಮಾಡಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ