ಭಾರತ vs ಪಾಕಿಸ್ತಾನ ಏಷ್ಯಾ ಕಪ್ 2022:  ಭಾರತ ತಂಡವು ತನ್ನ ಅಬ್ಬರದ ಪ್ರದರ್ಶನದಿಂದ ಏಷ್ಯಾ ಕಪ್‌ನಲ್ಲಿ5 ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿತು. ಈ ಪಂದ್ಯದಲ್ಲಿ ಭಾರತದ ಪರ ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ಅದ್ಭುತ ಆಟವಾಡುವ ಮೂಲಕ ಅಭಿಮಾನಿಗಳ ಮನ ಗೆದ್ದರು. ಹಾರ್ದಿಕ್ ಪಾಂಡ್ಯ ಸುದೀರ್ಘ ಸಿಕ್ಸರ್ ಬಾರಿಸುವ ಮೂಲಕ ಭಾರತ ತಂಡಕ್ಕೆ ಜಯ ತಂದುಕೊಟ್ಟರು. ಪಾಕ್ ವಿರುದ್ಧದ ಪಂದ್ಯದ ಗೆಲುವಿನೊಂದಿಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಿ-20 ಪಂದ್ಯದಲ್ಲಿ ದೊಡ್ಡ ದಾಖಲೆ ನಿರ್ಮಿಸಿದ್ದು ವಿರಾಟ್ ಕೊಹ್ಲಿಯನ್ನು ಸರಿಗಟ್ಟಿದರು. 


COMMERCIAL BREAK
SCROLL TO CONTINUE READING

ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ :
ಭಾರತದ ನಾಯಕ ಮತ್ತು ಸೂಪರ್‌ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ವಿಶ್ವದಾದ್ಯಂತ ಪ್ರಸಿದ್ಧರಾಗಿದ್ದಾರೆ. ಪಾಕಿಸ್ತಾನದ ವಿರುದ್ಧ ರೋಹಿತ್ ಶರ್ಮಾ ದೊಡ್ಡ ಇನ್ನಿಂಗ್ಸ್ ಆಡಲಾಗಲಿಲ್ಲ. ಅವರು ಒಂದು ಸಿಕ್ಸರ್ ಸೇರಿದಂತೆ 12 ರನ್ ಗಳಿಸಿದರು. ಆದರೆ ಅವರು 12 ರನ್ ಗಳಿಸಿದ ತಕ್ಷಣ, ಅವರು  ಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಮೂಲಕ ಅವರು ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ ಅವರನ್ನು ಹಿಂದಿಕ್ಕಿದರು. ರೋಹಿತ್ ಶರ್ಮಾ 133 ಪಂದ್ಯಗಳಲ್ಲಿ 3499 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಮಾರ್ಟಿನ್ ಗಪ್ಟಿಲ್ 121 ಪಂದ್ಯಗಳಲ್ಲಿ 3497 ರನ್ ಗಳಿಸಿದ್ದಾರೆ. 


ಇದನ್ನೂ ಓದಿ- T20 Asia Cup 2022: ಮಿಂಚಿದ ಹಾರ್ದಿಕ್ ಪಾಂಡ್ಯ, ಪಾಕ್ ವಿರುದ್ಧ ಭಾರತಕ್ಕೆ ರೋಚಕ ಗೆಲುವು


ಹಿಟ್ ಮ್ಯಾನ್ ದಾಖಲೆ: 
ವಿರಾಟ್ ಕೊಹ್ಲಿ ನಾಯಕನಾಗಿ 50 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದರು, ಇದರಲ್ಲಿ ಟೀಂ ಇಂಡಿಯಾ 30 ಪಂದ್ಯಗಳನ್ನು ಗೆದ್ದಿದೆ. ಪಾಕಿಸ್ತಾನ ವಿರುದ್ಧ ಗೆಲುವು ದಾಖಲಿಸಿದ ತಕ್ಷಣ ರೋಹಿತ್ ಶರ್ಮಾ ಕೊಹ್ಲಿಯನ್ನು ಸರಿಗಟ್ಟಿದ್ದಾರೆ. ರೋಹಿತ್ ಶರ್ಮಾ ಅವರು 36 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ, ಇದರಲ್ಲಿ ಅವರು 30 ಪಂದ್ಯಗಳಲ್ಲಿ ಗೆದ್ದಿದ್ದಾರೆ ಮತ್ತು 6 ಪಂದ್ಯಗಳಲ್ಲಿ ಸೋತಿದ್ದಾರೆ. ರೋಹಿತ್ ಶರ್ಮಾ ಈಗ ವಿರಾಟ್ ಕೊಹ್ಲಿ ಜೊತೆಗೆ ಟಿ-20 ಕ್ರಿಕೆಟ್‌ನಲ್ಲಿ ಜಂಟಿ ಎರಡನೇ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ. ಭಾರತಕ್ಕೆ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ, ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾ 41 ಟಿ20 ಪಂದ್ಯಗಳನ್ನು ಗೆದ್ದಿದೆ. 


ಇದನ್ನೂ ಓದಿ- IND vs PAK: ಕಾರ್ಗಿಲ್ ಯುದ್ಧದ ವೇಳೆ ಭಾರತ - ಪಾಕ್ ಪಂದ್ಯ ನಡೆದಾಗ..!


ಏಷ್ಯಾಕಪ್ ಪಂದ್ಯದಲ್ಲಿ ಭಾರತ ತಂಡದ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಅದ್ಭುತ ಆಟ ಪ್ರದರ್ಶಿಸಿದರು. ಪಂದ್ಯವನ್ನು ಗೆಲ್ಲಲು ಪಾಕಿಸ್ತಾನ ಭಾರತಕ್ಕೆ 148 ರನ್‌ಗಳ ಗುರಿಯನ್ನು ನೀಡಿತು,  5 ವಿಕೆಟ್ ನಷ್ಟಕ್ಕೆ ಭಾರತ ಸುಲಭವಾಗಿ ಈ ಗೆಲುವನ್ನು ತನ್ನದಾಗಿಸಿತು. 


ಟೀಂ ಇಂಡಿಯಾ ಪರ ಭುವನೇಶ್ವರ್ ಕುಮಾರ್ 4, ಹಾರ್ದಿಕ್ ಪಾಂಡ್ಯ 3 ವಿಕೆಟ್ ಪಡೆದರು. ಇದೇ ವೇಳೆ ಅರ್ಷದೀಪ್ ಸಿಂಗ್ 2 ವಿಕೆಟ್ ಪಡೆದು ಒಂದು ವಿಕೆಟ್ ಅವೇಶ್ ಖಾನ್ ಖಾತೆಗೆ ಹೋಯಿತು. ಭಾರತದ ಪರ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ 35-35 ರನ್ ಗಳಿಸಿದರು. ಅಂತಿಮವಾಗಿ ಹಾರ್ದಿಕ್ ಪಾಂಡ್ಯ ಸಿಕ್ಸರ್ ಬಾರಿಸಿ ಭಾರತಕ್ಕೆ ಜಯ ತಂದುಕೊಟ್ಟರು. ಒಟ್ಟಾರೆಯಾಗಿ ಭಾರತವು ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿ ಟೀಂ ಇಂಡಿಯಾ  ತನ್ನ ಅಭಿಮಾನಿಗಳಿಗೆ ಗೌರಿ-ಗಣೇಶ ಹಬ್ಬದ ಉಡುಗೊರೆ ನೀಡಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.