India vs Pakistan: 1999 ರ ಕ್ರಿಕೆಟ್ ವಿಶ್ವಕಪ್ ಕ್ರಿಕೆಟ್ ಪಿತಾಮಹ ಎಂದು ಕರೆಯಲ್ಪಡುವ ಇಂಗ್ಲೆಂಡ್‌ನಲ್ಲಿ ನಡೆಯಿತು. ಈ ವಿಶ್ವಕಪ್ ಹಲವು ರೀತಿಯಲ್ಲಿ ವಿಶೇಷವಾಗಿತ್ತು. ಗಡಿಯಲ್ಲಿ ಭಾರತ-ಪಾಕಿಸ್ತಾನ ನಡುವೆ ಯುದ್ಧ ನಡೆಯುತ್ತಿದ್ದ ಸಂದರ್ಭ ಅದು. ಪರ್ವೇಜ್ ಮುಷರಫ್ ಅವರು ಸೇನೆಯ ಅಧಿಕಾರವನ್ನು ವಹಿಸಿಕೊಂಡ ತಕ್ಷಣ ಪಾಕಿಸ್ತಾನದಲ್ಲಿ ಅಧಿಕಾರವನ್ನು ವಶಪಡಿಸಿಕೊಂಡರು. ಅದರ ನಂತರ ಅವರು ಕಾಶ್ಮೀರದ ಎತ್ತರದ ಶಿಖರಗಳನ್ನು ವಶಪಡಿಸಿಕೊಂಡರು. ಗಡಿಯಲ್ಲಿ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿತ್ತು. ಮತ್ತೊಂದೆಡೆ ಕ್ರಿಕೆಟ್ ಮೈದಾನದಲ್ಲಿ ಭಾರತ - ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ನಡೆದಿತ್ತು.
ಇದನ್ನೂ ಓದಿ: Asia Cup 2022: ಕಿಂಗ್ ಕೊಹ್ಲಿಗೆ ಎಬಿ ಡಿವಿಲಿಯರ್ಸ್ ಸ್ಪೆಷಲ್ ವಿಶ್, ಕಾರಣ ಕೂಡ ತುಂಬಾ ವಿಶೇಷ!
ಬ್ಯಾಟ್ಸ್‌ಮನ್‌ಗಳ ಅದ್ಭುತ ಪ್ರದರ್ಶನ :
ವಿಶ್ವಕಪ್ ಸೂಪರ್ ಸಿಕ್ಸ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಪಾಕಿಸ್ತಾನಕ್ಕೆ 227 ರನ್ ಗಳ ಗುರಿ ನೀಡಿತು. ಆ ಸಮಯದಲ್ಲಿ 250 ಕ್ಕಿಂತ ಹೆಚ್ಚಿನ ಗುರಿಯನ್ನು ಅತ್ಯಂತ ಸುರಕ್ಷಿತವೆಂದು ಪರಿಗಣಿಸಲಾಗಿತ್ತು. ಆ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಭಾರತಕ್ಕೆ ಬಿರುಸಿನ ಆರಂಭ ನೀಡಿದರು. ಅವರು 45 ರನ್‌ಗಳ ಇನಿಂಗ್ಸ್ ಆಡಿದರು. ಅದೇ ಸಮಯದಲ್ಲಿ ನಾಯಕ ಮೊಹಮ್ಮದ್ ಅಜರುದ್ದೀನ್ 59 ರನ್ ಗಳಿಸಿದರು. ದಿ ವಾಲ್ ಆಫ್ ಇಂಡಿಯನ್ ಕ್ರಿಕೆಟ್ ಎಂದು ಕರೆಯಲ್ಪಡುವ ರಾಹುಲ್ ದ್ರಾವಿಡ್ ಈ ಪಂದ್ಯದಲ್ಲಿ ಭಾರತದಿಂದ ಅತಿ ಹೆಚ್ಚು ರನ್ ಗಳಿಸಿದರು. ಅವರು 61 ರನ್ ಕೊಡುಗೆ ನೀಡಿದರು. ಈ ಬ್ಯಾಟ್ಸ್‌ಮನ್‌ಗಳ ನೆರವಿನಿಂದ ಭಾರತ ಪಾಕಿಸ್ತಾನಕ್ಕೆ ದೊಡ್ಡ ಗುರಿ ನೀಡಿತು.
ಬೌಲರ್‌ಗಳ ಮಾರಕ ದಾಳಿ :
ಭಾರತದ ಬೌಲರ್‌ಗಳ ಮುಂದೆ ನಿಲ್ಲಲಾರದೆ ಪಾಕ್ ತಂಡವು ಇಸ್ಪೀಟೆಲೆಯಂತೆ ಚದುರಿ ಹೋಗಿತ್ತು. ಪಾಕಿಸ್ತಾನದ ಕಡೆಯಿಂದ ಯಾವುದೇ ಬ್ಯಾಟ್ಸ್‌ಮನ್ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ ಮತ್ತು ಇಡೀ ಪಾಕಿಸ್ತಾನ ತಂಡವು ಕೇವಲ 180 ರನ್‌ಗಳಿಗೆ ಆಲೌಟ್ ಆಯಿತು ಮತ್ತು ಭಾರತವು ಪಂದ್ಯವನ್ನು 47 ರನ್‌ಗಳಿಂದ ಗೆದ್ದು ಬೀಗಿತು.
ವೆಂಕಟೇಶ್ ಪ್ರಸಾದ್ ತಮ್ಮ ಶಕ್ತಿ ಪ್ರದರ್ಶಿಸಿದರು :
ವೆಂಕಟೇಶ್ ಪ್ರಸಾದ್ ಭಾರತಕ್ಕೆ ಕಿಲ್ಲರ್ ಬೌಲಿಂಗ್ ಮಾಡಿದರು. ಈ ಪಂದ್ಯದಲ್ಲಿ ಅವರು 5 ವಿಕೆಟ್ ಪಡೆದರು. ಅವರ ಬೌಲಿಂಗ್ ನೋಡಿದ ಪಾಕಿಸ್ತಾನಿ ಬ್ಯಾಟ್ಸ್‌ಮನ್‌ಗಳು ಉಗುರು ಕಚ್ಚುವಂತಾಯಿತು. ಅವರು ಟೀಮ್ ಇಂಡಿಯಾದಿಂದ ಅತಿದೊಡ್ಡ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದರು. ಇದಲ್ಲದೇ ಜಾವಗಲ್ ಶ್ರೀನಾಥ್ ಮೂರು ವಿಕೆಟ್ ಪಡೆದರು. ಇದೇ ವೇಳೆ ಅನಿಲ್ ಕುಂಬ್ಳೆ ಖಾತೆಗೆ ಎರಡು ವಿಕೆಟ್ ಗಳು ಸೇರಿದ್ದವು. ಈ ಬೌಲರ್‌ಗಳಿಂದ ಭಾರತ ತಂಡ ಗೆಲುವು ಸಾಧಿಸಲು ಸಾಧ್ಯವಾಯಿತು.
ಇದನ್ನೂ ಓದಿ: Pakistan Team : ಭಾರತದ ವಿರುದ್ಧ 'ಕಪ್ಪು ಪಟ್ಟಿ' ಧರಿಸಿ ಆಡಲಿದೆ ಪಾಕ್ ಟೀಂ : ಯಾಕೆ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.