ನವದೆಹಲಿ: ಏಷ್ಯಾಕಪ್‍ ಟೂರ್ನಿಯಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ ಮತ್ತೊಮ್ಮೆ ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳ ನಡುವೆ ಪಂದ್ಯ ನಡೆದಾಗಲೆಲ್ಲಾ ಕ್ರಿಕೆಟ್ ಪ್ರೇಮಿಗಳು ಸಖತ್ ಥ್ರಿಲ್ ಆಗಿರುತ್ತಾರೆ. ಭಾರತ ಮತ್ತು ಪಾಕಿಸ್ತಾನ ಎರಡರಲ್ಲೂ ಕ್ರಿಕೆಟ್ ಬಹಳ ಜನಪ್ರಿಯವಾಗಿದೆ. ಏಷ್ಯಾಕಪ್‌ನ ಮೊದಲ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳಿಂದ ಪಾಕಿಸ್ತಾನ ತಂಡವನ್ನು ಸೋಲಿಸುವ ಮೂಲಕ ಟಿ-20 ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಂಡಿತ್ತು.


COMMERCIAL BREAK
SCROLL TO CONTINUE READING

ಇಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಸೂಪರ್-4ರಲ್ಲಿ ಮುಖಾಮುಖಿಯಾಗುತ್ತಿವೆ. ಟೀಂ ಇಂಡಿಯಾವೇ ಈ ಪಂದ್ಯ ಗೆಲ್ಲುವ ಫೆವರಿಟ್ ಆಗಿದೆ. ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಲು ನಾಯಕ ರೋಹಿತ್ ಶರ್ಮಾ ಮಾಸ್ಟರ್ ಪ್ಲಾನ್ ಮಾಡಿದ್ದು, ಆಡುವ XI ನಲ್ಲಿ ಬದಲಾವಣೆ ಮಾಡಬಹುದು.


ಇದನ್ನೂ ಓದಿ: IND vs PAK : ಪಂದ್ಯದ ಮೊದಲೆ ಪಾಕ್ ಟೀಂಗೆ ಬಿಗ್ ಶಾಕ್ : ತಂಡದಿಂದ ಈ ವೇಗದ ಬೌಲರ್ ಔಟ್


ಅವೇಶ್ ಖಾನ್ ಬದಲಿಗೆ ಈ ಆಟಗಾರನಿಗೆ ಅವಕಾಶ?


ಏಷ್ಯಾಕಪ್‌ನಲ್ಲಿ ಅವೇಶ್ ಖಾನ್ ಕಳಪೆ ಪ್ರದರ್ಶನ ನೀಡಿದ್ದಾರೆ. ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳು ಇವರ ಬೌಲಿಂಗ್‍ನಲ್ಲಿ ಸಾಕಷ್ಟು ರನ್ ಬಾರಿಸಿದ್ದಾರೆ. ಪಾಕಿಸ್ತಾನದ ವಿರುದ್ಧ ತಮ್ಮ 2 ಓವರ್‌ಗಳಲ್ಲಿ 19 ರನ್‌ ಬಿಟ್ಟುಕೊಟ್ಟಿದ್ದ ಅವೇಶ್ ಕೇವಲ 1 ವಿಕೆಟ್ ಮಾತ್ರ ಪಡೆದಿದ್ದರು. ಹಾಂಗ್ ಕಾಂಗ್ ವಿರುದ್ಧವೂ ಅವರು ಸಾಕಷ್ಟು ರನ್ ಬಿಟ್ಟುಕೊಟ್ಟಿದ್ದರು. ಹಾಂಗ್ ಕಾಂಗ್ ವಿರುದ್ಧ 4 ಓವರ್‌ಗಳಲ್ಲಿ 53 ರನ್ ನೀಡಿ ದುಬಾರಿ ಎನಿಸಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾಯಕ ರೋಹಿತ್ ಶರ್ಮಾ ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೆ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲ. ಹೀಗಾಗಿ ಅವೇಶ್ ಸ್ಥಾನಕ್ಕೆ ರವಿ ಬಿಷ್ಣೋಯ್‍ಗೆ ಅವಕಾಶ ನೀಡುವ ಸಾಧ್ಯತೆ ಇದೆ.   


ಜಡೇಜಾ ಬದಲು ಈ ಆಟಗಾರ ಆಡಬಹುದು


ಗಾಯದ ಸಮಸ್ಯೆಯಿಂದ ರವೀಂದ್ರ ಜಡೇಜಾ ಏಷ್ಯಾಕಪ್‌ನಿಂದ ಹೊರಗುಳಿದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆಲ್‌ರೌಂಡರ್ ದೀಪಕ್ ಹೂಡಾ ಪಾಕಿಸ್ತಾನದ ವಿರುದ್ಧ ಆಡುವ XIನಲ್ಲಿ ಅವಕಾಶ ಪಡೆಯಬಹುದು. ದೀಪಕ್ ಹೂಡಾ ಕಿಲ್ಲರ್ ಬೌಲಿಂಗ್ ಮತ್ತು ಡ್ಯಾಶಿಂಗ್ ಬ್ಯಾಟಿಂಗ್‌ನಲ್ಲಿ ಪರಿಣತಿ ಹೊಂದಿದ್ದಾರೆ. ಕೆಲವೇ ಎಸೆತಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಅವರಲ್ಲಿದೆ. ಐರ್ಲೆಂಡ್ ಪ್ರವಾಸದಲ್ಲಿ ದೀಪಕ್ ಹೂಡಾ ಬಿರುಸಿನ ಶತಕ ಬಾರಿಸಿದ್ದರು. ಅವರು ಬೌಲಿಂಗ್‌ನಲ್ಲಿ ತುಂಬಾ ಮಿತವ್ಯಯಕಾರಿ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ.


ಇದನ್ನೂ ಓದಿ: Video : IND vs Pak ಪಂದ್ಯಕ್ಕೂ ಮುನ್ನ ವಿಶೇಷ ತಯಾರಿ ನಡೆಸಿದ ವಿರಾಟ್!


ಭಾರತವೇ ಮೇಲುಗೈ ಹೊಂದಿದೆ


ಭಾರತ ಮತ್ತು ಪಾಕಿಸ್ತಾನ ನಡುವೆ ಏಷ್ಯಾಕಪ್‌ನಲ್ಲಿ ಇದುವರೆಗೆ 15 ಪಂದ್ಯಗಳು ನಡೆದಿವೆ. ಈ ಪೈಕಿ ಭಾರತ ತಂಡ 9 ಪಂದ್ಯ ಗೆದ್ದರೆ, ಪಾಕಿಸ್ತಾನ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಟೀಂ ಇಂಡಿಯಾ ಅತಿಹೆಚ್ಚು ಅಂದರೆ 7 ಬಾರಿ ಏಷ್ಯಾಕಪ್ ಪ್ರಶಸ್ತಿ ಗೆದ್ದಿದೆ. ಆದರೆ, ಪಾಕಿಸ್ತಾನ ಕೇವಲ 2 ಬಾರಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.