IND vs SA 2nd T20: ಗುವಾಹಾಟಿಯಲ್ಲಿ ಲೈವ್ ಪಂದ್ಯ ವೀಕ್ಷಿಸಲು ಮೈದಾನಕ್ಕೆ ಬಂದ ವಿಷಕಾರಿ ಹಾವು... ವಿಡಿಯೋ ನೋಡಿ
IND vs SA 2nd T20: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಎರಡನೇ ಟಿ20 ಪಂದ್ಯದಲ್ಲಿ ವಿಷಕಾರಿ ಹಾವೊಂದು ಮೈದಾನಕ್ಕೆ ನುಗ್ಗಿದೆ. ಇದರಿಂದಾಗಿ ಪಂದ್ಯ ಸ್ವಲ್ಪಕಾಲ ಸ್ಥಗಿತಗೊಂಡಿತ್ತು.
India vs South Africa: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಗುವಾಹಟಿಯಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಭಾರತಕ್ಕೆ ಉತ್ತಮ ಆರಂಭ ನೀಡಿ ಮೊದಲ ವಿಕೆಟ್‌ಗೆ 96 ರನ್ ಜೊತೆಯಾಟ ನಡೆಸಿದ್ದಾರೆ. ಅವರ ಬಿರುಸಿನ ಬ್ಯಾಟಿಂಗ್ ಮಧ್ಯೆಯೇ 8ನೇ ಓವರ್ ನಲ್ಲಿ ಕೆಲಕಾಲ ಪಂದ್ಯವನ್ನು ನಿಲ್ಲಿಸಬೇಕಾಯಿತು. ಏಕೆಂದರೆ, 8 ನೇ ಓವರ್‌ನಲ್ಲಿ ವಿಷಕಾರಿ ಹಾವೊಂದು ಮೈದಾನವನ್ನು ಪ್ರವೇಶಿಸಿತ್ತು. ಕ್ರಿಕೆಟ್ ಮೈದಾನದಲ್ಲಿ ನಾಯಿ, ಬೆಕ್ಕು, ಜೇನುನೊಣಗಳಿಂದಾಗಿ ಪಂದ್ಯ ನಿಲ್ಲುವುದನ್ನು ನೀವು ಆಗಾಗ ನೋಡಿರಬಹುದು, ಆದರೆ ಲೈವ್ ಪಂದ್ಯದ ವೇಳೆ ಮೈದಾನದಲ್ಲಿ ವಿಷಕಾರಿ ಹಾವು ಕಾಣಿಸಿಕೊಂಡಿದ್ದರಿಂದ ಪಂದ್ಯ ಸ್ಥಗಿತಗೊಂಡಿದ್ದು ಇದೆ ಮೊದಲಾಗಿರಬಹುದು.
ಇದನ್ನೂ ಓದಿ-IND vs SA 2nd T20I: ದ.ಆಫ್ರಿಕಾ-ಭಾರತ ಹೈವೋಲ್ಟೇಜ್ ಪಂದ್ಯ: ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಹರಿಣಗಳು
ಪಂದ್ಯಕ್ಕೆ ಕೆಲಕಾಲ ಬ್ರೇಕ್ ಹಾಕಿದ ಹಾವು
ವಾಸ್ತವದಲ್ಲಿ, ಗುವಾಹಟಿಯಲ್ಲಿ ನಡೆಯುತ್ತಿರುವ ಎರಡನೇ ಟಿ20 ಪಂದ್ಯದ ವೇಳೆ, ಇದ್ದಕ್ಕಿದ್ದಂತೆ ವಿಷಕಾರಿ ಹಾವು ಮೈದಾನಕ್ಕೆ ಪ್ರವೇಶಿಸಿದೆ. ಇದರಿಂದಾಗಿ ಪಂದ್ಯ ಕೆಲಕಾಲ ಸ್ಥಗಿತಗೊಂಡಿತ್ತು. ಈ ಇಡೀ ಘಟನೆಯು ಪಂದ್ಯದ 8 ನೇ ಓವರ್‌ನಲ್ಲಿ ನಡೆದಿದೆ, ಎಂಟನೇ ಓವರ್ ಪ್ರಾರಂಭವಾಗುತ್ತಿದ್ದಂತೆ, ಎಲ್ಲಾ ಆಟಗಾರರು ಮೈದಾನದಲ್ಲಿ ನಿಂತಿದ್ದರು. ಅದೇ ಸಮಯದಲ್ಲಿ ದೊಡ್ಡ ಹಾವೊಂದು ಮೈದಾನದಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಾಣಿಸಿತು. ಅದನ್ನು ನೆಲದ ಸಿಬ್ಬಂದಿ ಯಶಸ್ವಿಯಾಗಿ ಹಿಡಿದಿದ್ದಾರೆ. ಈ ಘಟನೆಯಲ್ಲಿ ಎಲ್ಲಾ ಆಟಗಾರರು ಮತ್ತು ಪ್ರೇಕ್ಷಕರು ಸುರಕ್ಷಿತವಾಗಿದ್ದು, ಯಾರಿಗೂ ಹಾನಿಯಾಗಿಲ್ಲ ಎಂಬುದು ಸಮಾಧಾನಕರ ಸಂಗತಿ ಎಂದರೆ ತಪ್ಪಾಗಲಾರದು.
IND vs SA : ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ, ರೋಹಿತ್ ಬದಲಿಗೆ ಈ ಆಟಗಾರ ಕ್ಯಾಪ್ಟನ್!
237 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿದ ಟೀಂ ಇಂಡಿಯಾ
ಪ್ರಸ್ತುತ ಈ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಬ್ಯಾಟಿಂಗ್ ಅನ್ನು ಮುಗಿಸಿದ್ದು, ನಿಗದಿತ 20 ಓವರ್ಗಳಲ್ಲಿ ತಂಡ 3 ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿದೆ. ಅರ್ಥಾತ್ ಈ ಪಂದ್ಯವನ್ನು ಗೆಲ್ಲಲು ದಕ್ಷಿಣ ಆಫ್ರಿಕಾಕ್ಕೆ 238 ರನ್ ಗಳ ಅವಶ್ಯಕತೆ ಇದೆ. ಟೀಂ ಇಂಡಿಯಾ ಪರ ಸೂರ್ಯಕುಮಾರ್ ಯಾದವ್ ಅತಿ ಹೆಚ್ಚು ಅಂದರೆ 61 ರನ್ ಗಳಿಸಿದರೆ, ಕೆ.ಎಲ್ ರಾಹುಲ್ 57 ಮತ್ತು ಕಿಂಗ್ ಕೊಹ್ಲಿ 49 ರನ್ ಗಳಿಸಿದ್ದಾರೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.