Team India Announced for ODI series : ಭಾರತ ಮತ್ತು ದಕ್ಷಿಣ ಆಫ್ರಿಕಾ (IND v SA) ನಡುವೆ ನಡೆಯಲಿರುವ ಏಕದಿನ ಸರಣಿಗೆ (ODI) ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ಈ ಸರಣಿಗೆ ರೋಹಿತ್ ಶರ್ಮಾ ಬದಲಿಗೆ ಶಿಖರ್ ಧವನ್ ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿದೆ.
ಉಭಯ ತಂಡಗಳ ನಡುವಿನ ಸರಣಿ ಅಕ್ಟೋಬರ್ 6ರಿಂದ ಆರಂಭವಾಗಲಿದೆ. 2022ರ ಟಿ20 ವಿಶ್ವಕಪ್‌ನಲ್ಲಿ ಆಡಿದ ಆಟಗಾರನನ್ನು ಈ ಸರಣಿಯಿಂದ ಕೈಬಿಡಲಾಗಿದೆ. ಈ ಸರಣಿಯಲ್ಲಿ ಹಲವು ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ : IND vs SA : ಎರಡನೇ ಟಿ20 ಪಂದ್ಯದಲ್ಲಿ ಹಿಸ್ಟರಿ ನಿರ್ಮಿಸಲಿದ್ದಾರೆ ಕಿಂಗ್ ಕೊಹ್ಲಿ!
ಈ ಬಲಿಷ್ಠ ಆಟಗಾರರಿಗೆ ಸಿಕ್ಕಿದೆ ಅವಕಾಶ
ಈ ಬಾರಿಯ ಏಕದಿನ ಸರಣಿಗೆ ಟೀಂ ಇಂಡಿಯಾದಲ್ಲಿ ಶಿಖರ್ ಧವನ್‌ಗೆ ನಾಯಕನ ಜವಾಬ್ದಾರಿಯನ್ನು ನೀಡಲಾಗಿದ್ದು, ಶ್ರೇಯಸ್ ಅಯ್ಯರ್‌ಗೆ ಉಪನಾಯಕನ ಜವಾಬ್ದಾರಿಯನ್ನು ನೀಡಲಾಗಿದೆ. ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಕೂಡ ಟೀಂ ಇಂಡಿಯಾದ ಭಾಗವಾಗಿದ್ದಾರೆ. ರಿತುರಾಜ್ ಗಾಯಕ್ವಾಡ್ ಮತ್ತು ಇಶಾನ್ ಕಿಶನ್ ಕೂಡ ತಂಡಕ್ಕೆ ಮರಳಿದ್ದಾರೆ. ಈ ಇಬ್ಬರೂ ಆಟಗಾರರು ಕೆಲ ಕಾಲ ಟೀಂ ಇಂಡಿಯಾದಲ್ಲಿ ಆಡಿರಲಿಲ್ಲ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
🚨 NEWS 🚨: India’s squad for ODI series against South Africa announced. #TeamIndia | #INDvSA | @mastercardindia
— BCCI (@BCCI) October 2, 2022
ಏಕದಿನ ಸರಣಿಗೆ ಟೀಂ ಇಂಡಿಯಾ ಹೀಗಿದೆ
ಶಿಖರ್ ಧವನ್ (ನಾಯಕ), ಶ್ರೇಯಸ್ ಅಯ್ಯರ್ (ಉಪನಾಯಕ), ರಿತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ರಜತ್ ಪಾಟಿದಾರ್, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (WK), ಸಂಜು ಸ್ಯಾಮ್ಸನ್ (WK), ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಮುಖೇಶ್ ಕುಮಾರ್ ಅವೇಶ್ ಖಾನ್, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್.
Shikhar Dhawan (C), Shreyas Iyer (VC), Ruturaj Gaikwad, Shubhman Gill, Rajat Patidar, Rahul Tripathi, Ishan Kishan (WK), Sanju Samson (WK), Shahbaz Ahmed, Shardul Thakur, Kuldeep Yadav, Ravi Bishnoi, Mukesh Kumar, Avesh Khan, Mohd. Siraj, Deepak Chahar.#TeamIndia | #INDvSA
— BCCI (@BCCI) October 2, 2022
ಇದನ್ನೂ ಓದಿ : Team India : ಭುವನೇಶ್ವರ್ಗಿಂತ ಸಖತ್ ಟ್ಯಾಲೆಂಟ್ ಈ 3 ಬೌಲರ್‌ಗಳು, ಆದ್ರೂ ಚಾನ್ಸ್ ನೀಡ್ತಿಲ್ಲ ರೋಹಿತ್-ದ್ರಾವಿಡ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.