India vs Sri Lanka, Asia Cup 2022: ಭಾರತ ಮತ್ತು ಶ್ರೀಲಂಕಾ ತಂಡಗಳು ಏಷ್ಯಾ ಕಪ್ 2022 ಟೂರ್ನಿಯಲ್ಲಿ ಇದೆ ಮೊದಲ ಬಾರಿಗೆ ಮುಖಾಮುಖಿಯಾಗಿವೆ. ಏಷ್ಯಾ ಕಪ್ 2022 ರ ಫೈನಲ್ ನಲ್ಲಿ ಸ್ಥಾನಗಿಟ್ಟಿಸಲು ಟೀಂ ಇಂಡಿಯಾಗೆ ಇದು ನಿರ್ಣಾಯಕ ಪಂದ್ಯವಾಗಿದೆ. ಅರ್ಥಾತ್ ಈ ಪಂದ್ಯ ರೋಹಿತ್ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ ಎಂದರೆ ತಪ್ಪಾಗಲಾರದು. ಇನ್ನೊಂದೆಡೆ ಎದುರಾಳಿ ಶ್ರೀಲಂಕಾ ಕೂಡ ಸೂಪರ್ 4 ಹಂತದ ತನ್ನ ಮೊದಲ ಪಂದ್ಯವನ್ನು ಗೆದ್ದುಕೊಂಡಿದೆ. ಅದೂ ಕೂಡ ತನ್ನ ಎರಡನೇ ಪಂದ್ಯವನ್ನು ಗೆದ್ದು, ಫೈನಲ್ ನಲ್ಲಿ ಸ್ಥಾನ ಪಡೆಯುವ ತವಕತಲ್ಲಿದೆ. ಸೂಪರ್ 4 ಹಂತದ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಅಫ್ಘಾನಿಸ್ಥಾನ ತಂಡವನ್ನು ಮಣ್ಣುಮುಕ್ಕಿಸಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ-Ind vs SL Asia Cup 2022: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಶ್ರೀಲಂಕಾ, ರೋಹಿತ್ ಶರ್ಮಾ ಈ ನಿರ್ಣಯ ಆಶ್ಚರ್ಯ ಹುಟ್ಟಿಸುವಂತಿದೆ


ಸೂಪರ್ 4 ಹಂತದ ಎರಡನೇ ಪಂದ್ಯ ಇದೀಗ ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಮೊದಲ ಬ್ಯಾಟ ಬೀಸಿದ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಗಳನ್ನು ಕಳೆದುಕೊಂಡು 173 ರನ್ ಗಳಿಸಿದೆ. ಅಂದರೆ ಈ ಪಂದ್ಯವನ್ನು ಗೆಲ್ಲಲು ಶ್ರೀಲಂಕಾ ತಂಡ 174 ರನ್ ಗಳನ್ನು ಗಳಿಸಬೇಕಿದೆ.


Suresh Raina Retirement: ಎಲ್ಲಾ ಮಾದರಿಯ ಕ್ರಿಕೆಟ್ ಗೆ ಸುರೇಶ್ ರೈನಾ ನಿವೃತ್ತಿ: ಇನ್ಮುಂದೆ ಚಿನ್ನತಾಲಾ ಆಟ ನೋಡೋಕಾಗಲ್ಲ!


ನಾಯಕ ರೋಹಿತ್ ಶರ್ಮಾ ಟೀಂ ಇಂಡಿಯಾ ಪರ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಅವರು 72 ರನ್‌ಗಳ ಇನಿಂಗ್ಸ್‌ ಆಡಿದ್ದಾರೆ. ಇನ್ನೊಂದೆಡೆ ಸೂರ್ಯಕುಮಾರ್ ಯಾದವ್ 34 ರನ್ ಗಳಿಸಿ ದ್ರೋಹಿತ್ ಅವರಿಗೆ ಉತ್ತಮ ಸಾಥ್ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ ಮತ್ತು ರಿಷಬ್ ಪಂತ್ 17-17 ರನ್ ಕೊಡುಗೆ ನೀಡಿದ್ದಾರೆ. ಶ್ರೀಲಂಕಾ ಪರ ದಿಲ್ಶನ್ ಮಧುಶಂಕ 3 ವಿಕೆಟ್ ಪಡೆದಿದ್ದಾರೆ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.