Ind vs SL Asia Cup 2022: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಶ್ರೀಲಂಕಾ, ರೋಹಿತ್ ಶರ್ಮಾ ಈ ನಿರ್ಣಯ ಆಶ್ಚರ್ಯ ಹುಟ್ಟಿಸುವಂತಿದೆ

Asia Cup 2022: ಏಷ್ಯಾ ಕಪ್ 2022 ನಲ್ಲಿ ಟೀಂ ಇಂಡಿಯಾ ಸೂಪರ್ -4 ಹಂತದ ತನ್ನ ಎರಡನೇ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಆಡುತ್ತಿದೆ. ಈ ಪಂದ್ಯ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ.  

Written by - Nitin Tabib | Last Updated : Sep 6, 2022, 07:37 PM IST
  • ಸೂಪರ್ 4 ಹಂತದ ಎರಡನೇ ಪಂದ್ಯ ಇದೀಗ ಆರಂಭಗೊಂಡಿದೆ.
  • ಈ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ದುಕೊಂಡಿದೆ.
  • ಅರ್ಥಾತ್ ಟೀಂ ಇಂಡಿಯಾ ಮೊದಲು ಬ್ಯಾಟ್ ಬೀಸಲಿದೆ.
Ind vs SL Asia Cup 2022: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಶ್ರೀಲಂಕಾ, ರೋಹಿತ್ ಶರ್ಮಾ ಈ ನಿರ್ಣಯ ಆಶ್ಚರ್ಯ ಹುಟ್ಟಿಸುವಂತಿದೆ title=
Asia Cup 2022 Ind Vs SL

India vs Sri Lanka, Asia Cup 2022: ಭಾರತ ಮತ್ತು ಶ್ರೀಲಂಕಾ ತಂಡಗಳು ಏಷ್ಯಾ ಕಪ್ 2022 ಟೂರ್ನಿಯಲ್ಲಿ ಇದೆ ಮೊದಲ ಬಾರಿಗೆ ಮುಖಾಮುಖಿಯಾಗಿವೆ. ಏಷ್ಯಾ ಕಪ್ 2022 ರ ಫೈನಲ್ ನಲ್ಲಿ ಸ್ಥಾನಗಿಟ್ಟಿಸಲು ಟೀಂ ಇಂಡಿಯಾಗೆ ಇದು ನಿರ್ಣಾಯಕ ಪಂದ್ಯವಾಗಿದೆ. ಅರ್ಥಾತ್ ಈ ಪಂದ್ಯ ರೋಹಿತ್ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ ಎಂದರೆ ತಪ್ಪಾಗಲಾರದು. ಇನ್ನೊಂದೆಡೆ ಎದುರಾಳಿ ಶ್ರೀಲಂಕಾ ಕೂಡ ಸೂಪರ್ 4 ಹಂತದ ತನ್ನ ಮೊದಲ ಪಂದ್ಯವನ್ನು ಗೆದ್ದುಕೊಂಡಿದೆ. ಅದೂ ಕೂಡ ತನ್ನ ಎರಡನೇ ಪಂದ್ಯವನ್ನು ಗೆದ್ದು, ಫೈನಲ್ ನಲ್ಲಿ ಸ್ಥಾನ ಪಡೆಯುವ ತವಕತಲ್ಲಿದೆ. ಸೂಪರ್ 4 ಹಂತದ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಅಫ್ಘಾನಿಸ್ಥಾನ ತಂಡವನ್ನು ಮಣ್ಣುಮುಕ್ಕಿಸಿದೆ. 

ಸೂಪರ್ 4 ಹಂತದ ಎರಡನೇ ಪಂದ್ಯ ಇದೀಗ ಆರಂಭಗೊಂಡಿದೆ. ಈ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ದುಕೊಂಡಿದೆ. ಅರ್ಥಾತ್ ಟೀಂ ಇಂಡಿಯಾ ಮೊದಲು ಬ್ಯಾಟ್ ಬೀಸಲಿದೆ. 

ರೋಹಿತ್ ಶರ್ಮಾ ಈ ನಿರ್ಣಯ ಆಶ್ಚರ್ಯ ಹುಟ್ಟಿಸುವಂತಿದೆ
ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯುತ್ತಿದ್ದು, ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪ್ಲೇಯಿಂಗ್ 11 ಆಯ್ಕೆಯಲ್ಲಿ ಹಲವು ಮಹತ್ವದ ನಿರ್ಣಯವನ್ನು ಕೈಗೊಂಡಿದ್ದಾರೆ. 

ಟೀಂ ಇಂಡಿಯಾ ರಣತಂತ್ರ ಈ ರೀತಿ ಇರಲಿದೆ
ಶ್ರೀಲಂಕಾ ವಿರುದ್ಧ ರೋಹಿತ್ ಶರ್ಮಾ ಜೊತೆ ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಇದುವರೆಗೆ ರಾಹುಲ್ ಸಂಪೂರ್ಣ ಫ್ಲಾಪ್ ಆಗಿದ್ದಾರೆ. ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಫಾರ್ಮ್‌ಗೆ ಮರಳಲು ಬಯಸುತ್ತಿದ್ದಾರೆ. ಇನ್ನೊಂದೆಡೆ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಏಷ್ಯಾಕಪ್ 2022 ರಲ್ಲಿ ವಿರಾಟ್ ಕೊಹ್ಲಿ ಅವರ ಪ್ರದರ್ಶನವು ಇದುವರೆಗೆ ಅತ್ಯುತ್ತಮವಾಗಿದೆ. ಇನ್ನೊಂದೆಡೆ ಸೂರ್ಯಕುಮಾರ್ ಯಾದವ್ ನಾಲ್ಕನೇ ಕ್ರಮಾಂಕದಲ್ಲಿ ಸ್ಥಾನ ಪಡೆದಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆದವರು ಯಾರು?
ಟೀಂ ಇಂಡಿಯಾದ ಪ್ಲೇಯಿಂಗ್ XI ನ ಮಧ್ಯಮ ಕ್ರಮಾಂಕವು ಈ ಬಾರಿಯೂ ತುಂಬಾ ಪ್ರಬಲವಾಗಿದೆ. ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ರೋಹಿತ್ ಶರ್ಮಾ ಮಧ್ಯಮ ಕ್ರಮಾಂಕದ ಜವಾಬ್ದಾರಿಯನ್ನು ರಿಷಬ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಅವರಿಗೆ ನೀಡಿದ್ದಾರೆ. ಇದೇ ವೇಳೆ , ದೀಪಕ್ ಹೂಡಾ ಅವರಂತಹ ಆಲ್ ರೌಂಡರ್ ಫಿನಿಶರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ-IND vs SL: ಲಂಕಾ ವಿರುದ್ಧ ಭಾರತಕ್ಕೆ ಗೆಲ್ಲಲೇಬೇಕಾದ ಅನಿವಾರ್ಯತೆ: ಪ್ಲೇಯಿಂಗ್ XIನಲ್ಲಿ ಭಾರೀ ಬದಲಾವಣೆ!

ಮತ್ತೆ ಬೌಲಿಂಗ್ ನಲ್ಲಿ ಬದಲಾವಣೆ
ರೋಹಿತ್ ಈ ಪಂದ್ಯದಲ್ಲಿ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಜೊತೆಗೆ ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್ ಮತ್ತು ಆರ್ ಅಶ್ವಿನ್ ಅವರನ್ನು ಪ್ಲೇಯಿಂಗ್ 11 ನಲ್ಲಿ ಸೇರಿಸಿದ್ದಾರೆ. ಕಳೆದ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳು ದುಬಾರಿಸಾಬೀತಾಗಿದ್ದರು , ಹೀಗಾಗಿ ಈ ಪಂದ್ಯದಲ್ಲಿ ಎಲ್ಲರ ಕಣ್ಣು ಬೌಲರ್‌ಗಳ ಮೇಲೆ ನೆಟ್ಟಿದೆ. 2022ರ ಏಷ್ಯಾಕಪ್‌ನ ಫೈನಲ್‌ ರೇಸ್‌ನಲ್ಲಿ ಉಳಿಯಲು ಟೀಂ ಇಂಡಿಯಾ ಯಾವುದೇ ಬೆಲೆ ತೆತ್ತಾದರೂ ಈ ಪಂದ್ಯವನ್ನು ಗೆಲ್ಲಲೇಬೇಕಿದೆ.

ಇದನ್ನೂ ಓದಿ-Suresh Raina Retirement: ಎಲ್ಲಾ ಮಾದರಿಯ ಕ್ರಿಕೆಟ್ ಗೆ ಸುರೇಶ್ ರೈನಾ ನಿವೃತ್ತಿ: ಇನ್ಮುಂದೆ ಚಿನ್ನತಾಲಾ ಆಟ ನೋಡೋಕಾಗಲ್ಲ!

ಶ್ರೀಲಂಕಾ ವಿರುದ್ಧ ಭಾರತ ಪ್ಲೇಯಿಂಗ್ 11 ಇಂತಿದೆ
ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ದೀಪಕ್ ಹೂಡಾ, ಭುವನೇಶ್ವರ್ ಕುಮಾರ್, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್ ಮತ್ತು ಅರ್ಷದೀಪ್ ಸಿಂಗ್. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News