Ind Vs WI ODI: ಭಾರತ ರತ್ನ ಲತಾ ಮಂಗೇಶ್ಕರ್ (Bharat Ratna Lata Mangeshkar) ಗೌರವಾರ್ಥವಾಗಿ ಇಂದು ಟೀಂ ಇಂಡಿಯಾ ಕಪ್ಪು ಪಟ್ಟಿಯೊಂದಿಗೆ ಮೈದಾನಕ್ಕೆ ಇಳಿದಿದೆ. ಭಾರತೀಯ ಆಟಗಾರರ ಜೊತೆಗೆ ಸಹಾಯಕ ಸಿಬ್ಬಂದಿ ಕೂಡ ಕಪ್ಪು ಬ್ಯಾಂಡ್ ಧರಿಸಿದ್ದಾರೆ. BCCI ಟ್ವೀಟ್ ಮಾಡುವ ಮೂಲಕ ಶ್ರೇಷ್ಠ ಗಾಯಕಿಗೆ ಗೌರವ ಸಲ್ಲಿಸಿದೆ ಮತ್ತು ಅವರ ಹಾಡುಗಳನ್ನು ಅಮರ ಎಂದು ಬಣ್ಣಿಸಿದೆ. ಅಲ್ಲದೆ, ಅವರ ಕ್ರಿಕೆಟ್ ಮೇಲಿನ ಪ್ರೀತಿಯನ್ನು ಸಹ ಉಲ್ಲೇಖಿಸಲಾಗಿದೆ.


COMMERCIAL BREAK
SCROLL TO CONTINUE READING

ಟ್ವೀಟ್ ಮಾಡಿ ಗೌರವ ಸಲ್ಲಿಸಿದ ಬಿಸಿಸಿಐ
ಬಿಸಿಸಿಐನ ಅಧಿಕೃತ ಟ್ವಿಟರ್ ಹ್ಯಾಂಡಲ್ ಟ್ವೀಟ್ ಮಾಡಿದ್ದು, 'ಭಾರತ ರತ್ನ ಲತಾ ಮಂಗೇಶ್ಕರ್ ಜಿ ಅವರ ಗೌರವಾರ್ಥ ಕಪ್ಪು ಬ್ಯಾಂಡ್ ಧರಿಸಿ ಭಾರತ ಕ್ರಿಕೆಟ್ ತಂಡ ಇಂದು ಮೈದಾನಕ್ಕೆ ಪ್ರವೇಶಿಸಿದೆ. ಲತಾ ಜೀ ಭಾನುವಾರ ಬೆಳಗ್ಗೆ ನಮ್ಮನ್ನೆಲ್ಲ ಬಿಟ್ಟು ಸ್ವರ್ಗಕ್ಕೆ ಪ್ರಯಾಣ ಬೆಳೆಸಿದ್ದಾರೆ. ಸ್ವರಗಳ ರಾಣಿ (Queen Of Melody) ಲತಾ ದೀದಿ ಕ್ರಿಕೆಟ್‌ನ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಅವರು ಯಾವಾಗಲೂ ಆಟ ಮತ್ತು ಟೀಮ್ ಇಂಡಿಯಾಗೆ ತನ್ನ ಬೆಂಬಲವನ್ನು ನೀಡಿದ್ದಾರೆ. ಪಂದ್ಯ ಆರಂಭಕ್ಕೂ ಮುನ್ನ ಆಟಗಾರರು ಹಾಗೂ ಸಿಬ್ಬಂದಿ ಒಂದು ನಿಮಿಷ ಮೌನ  ಕೂಡ ಆಚರಿಸಿದರು.


ಇದನ್ನೂ ಓದಿ-Lata Mangeshkar: ಗಾಯನ ನಿಲ್ಲಿಸಿದ ಭಾರತ ರತ್ನ ಲತಾ ಮಂಗೇಶ್ಕರ್


ಕ್ರಿಕೆಟ್ ಅಭಿಮಾನಿಯಾಗಿದ್ದರು ಲತಾ ಮಂಗೇಶ್ಕರ್
ಲತಾ ಮಂಗೇಶ್ಕರ್ ಕ್ರಿಕೆಟ್ ನೋಡುವುದನ್ನು ಇಷ್ಟಪಡುತ್ತಿದ್ದರು. ಟೀಂ ಇಂಡಿಯಾದ ಗೆಲುವಿನ ಬಗ್ಗೆ ಆಗಾಗ್ಗೆ ಟ್ವೀಟ್ ಮಾಡುವ ಮೂಲಕ ಅಭಿನಂದಿಸುತ್ತಿದ್ದರು. ಭಾರತೀಯ ಆಟಗಾರರಲ್ಲಿ ಅವರು ಸಚಿನ್ ತೆಂಡೂಲ್ಕರ್ ಅವರನ್ನು ತುಂಬಾ ಇಷ್ಟಪಡುತ್ತಿದ್ದರು. ಟಿವಿ ಸಂದರ್ಶನವೊಂದರಲ್ಲಿ, ಸಚಿನ್ ತನಗೆ ಮಗನಿದ್ದಂತೆ ಹಾಗೂ ಅವನು ತನ್ನನ್ನು ಆಯಿ (ತಾಯಿ) ಎಂದು ಕರೆಯುತ್ತಾನೆ ಎಂದಿದ್ದರು. ಅವರ ನಿಧನಕ್ಕೆ ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.


ಲತಾ ಮಂಗೇಶ್ಕರ್ ನಿಧನಕ್ಕೆ ಎರಡು ದಿನಗಳ ರಾಷ್ಟ್ರೀಯ ಶೋಕ


ವರ್ಲ್ಡ್ ಕಪ್ ಗೆಲುವಿನ ಬಳಿಕ ಕಾನ್ಸರ್ಟ್ ನಡೆಸಿಕೊಟ್ಟಿದ್ದರು
1983 ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದ ನಂತರ ಲತಾ ಮಂಗೇಶ್ಕರ್ ವಿಶೇಷ ಕಾನ್ಸರ್ಟ್ ನಡೆಸಿಕೊಟ್ಟಿದ್ದರು. ಆ ಸಮಯದಲ್ಲಿ ಆಡಳಿತ ಮಂಡಳಿ ಹಣದ ಕೊರತೆಯಿಂದ ಪರದಾಡುತ್ತಿತ್ತು ಮತ್ತು ಆಟಗಾರರನ್ನು ಗೌರವಿಸಲು ಹಣವಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಲತಾ ಅವರು ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣದಲ್ಲಿ ಎರಡು ಗಂಟೆಗಳ ಕಾರ್ಯಕ್ರಮ ನಡೆಸಿದ್ದರು. ಬಿಸಿಸಿಐ ಆ ಕಾನ್ಸರ್ಟ್ ನಿಂದ ಸಾಕಷ್ಟು ಹಣ ಸಂಗ್ರಹಿಸಿ ಪ್ರತಿ ಆಟಗಾರನಿಗೆ ತಲಾ ಒಂದು ಲಕ್ಷ ರೂಪಾಯಿ ನೀಡಿತ್ತು.


ಇದನ್ನೂ ಓದಿ-Lata Mangeshkar ಜೀವನಕ್ಕೆ ಸಂಬಂಧಿಸಿದ ಕೆಲ ಕೇಳರಿಯದ ಸಂಗತಿಗಳು ಇಲ್ಲಿವೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.