India vs West Indies:  ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3 ಪಂದ್ಯಗಳ ಟಿ20 ಸರಣಿ ನಾಳೆಯಿಂದ ಅಂದರೆ ಫೆಬ್ರವರಿ 16 ರಿಂದ ಕೋಲ್ಕತ್ತಾದಲ್ಲಿ ಆರಂಭವಾಗಲಿದೆ. ಟಿ20 ಸರಣಿಯ ಪಂದ್ಯಗಳು ಫೆಬ್ರವರಿ 16, 18 ಮತ್ತು 20 ರಂದು ನಡೆಯಲಿದೆ. ಈ ಹಿಂದೆ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವೆಸ್ಟ್ ಇಂಡೀಸ್ ಅನ್ನು 3-0 ಅಂತರದಿಂದ ಸೋಲಿಸಿತ್ತು. ಇದೀಗ ಟಿ20 ಸರಣಿಯಲ್ಲೂ ವೆಸ್ಟ್ ಇಂಡೀಸ್ ತಂಡವನ್ನು 3-0 ಅಂತರದಿಂದ ಕ್ಲೀನ್ ಮಾಡಲು ಟೀಂ ಇಂಡಿಯಾ ಸಜ್ಜಾಗಿದೆ.


COMMERCIAL BREAK
SCROLL TO CONTINUE READING

ಈ ಆಟಗಾರ ರೋಹಿತ್ ಶರ್ಮಾ ಅವರ ಹೊಸ ಆರಂಭಿಕ ಪಾಲುದಾರರಾಗಲಿದ್ದಾರೆ:
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ (Rohit Sharma) ಜೊತೆ ಮಾರಣಾಂತಿಕ ಆಟಗಾರನೊಬ್ಬ ಓಪನಿಂಗ್ ಮಾಡಲಿದ್ದಾನೆ. ದೊಡ್ಡ ತಂತ್ರವನ್ನು ಆಡುವ ಬಿಸಿಸಿಐ, ರೋಹಿತ್ ಶರ್ಮಾ ಅವರ ಹೊಸ ಆರಂಭಿಕ ಪಾಲುದಾರರಾಗಿ ರಿತುರಾಜ್ ಗಾಯಕ್ವಾಡ್ (Ruturaj Gaikwad) ಅವರನ್ನು ಕಣಕ್ಕಿಳಿಸುತ್ತದೆ.  ರಿತುರಾಜ್ ಗಾಯಕ್ವಾಡ್ ಉತ್ತಮ ಫಾರ್ಮ್‌ನಲ್ಲಿದ್ದು ಅವರು ಭಾರತಕ್ಕಾಗಿ ಟಿ20 ಸರಣಿಯಲ್ಲಿ ಉತ್ತಮ ಕೊಡುಗೆ ನೀಡಬಹುದು ಎಂದು ಅಭಿಪ್ರಾಯವ್ಯಕ್ತವಾಗುತ್ತಿದೆ.


ಇದನ್ನೂ ಓದಿ- ಟಿ20 ಸರಣಿಗೆ ಗಾಯಾಳು ವಾಷಿಂಗ್ಟನ್ ಸುಂದರ್ ಔಟ್, ಕುಲದೀಪ್ ಯಾದವ್ ಇನ್


ಈ ಬ್ಯಾಟ್ಸ್‌ಮನ್ ತುಂಬಾ ಅಪಾಯಕಾರಿ:
ಕೆಎಲ್ ರಾಹುಲ್ ತಂಡದಿಂದ ಹೊರಗುಳಿದಿದ್ದಾರೆ. ಈ ಸಂದರ್ಭದಲ್ಲಿ ನಮಗೆ ಪರ್ಯಾಯವಾಗಿ ರಿತುರಾಜ್ ಗಾಯಕ್ವಾಡ್ (Ruturaj Gaikwad) ಇದ್ದಾರೆ ಎಂದು ಟೀಂ ಇಂಡಿಯಾದ (Team India) ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಹೇಳಿದ್ದಾರೆ. ರಿತುರಾಜ್ ಗಾಯಕ್ವಾಡ್ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ. ರಿತುರಾಜ್ ಗಾಯಕ್ವಾಡ್ ಕಳೆದ ವರ್ಷ ಐಪಿಎಲ್‌ನಲ್ಲಿ ಗರಿಷ್ಠ 635 ರನ್ ಗಳಿಸಿ ಆರೆಂಜ್ ಕ್ಯಾಪ್ ಪ್ರಶಸ್ತಿ ಗೆದ್ದಿದ್ದರು. ಈ ಅವಧಿಯಲ್ಲಿ ಅವರು 1 ಶತಕ ಮತ್ತು 4 ಅರ್ಧ ಶತಕಗಳನ್ನು ಗಳಿಸಿದರು. 


ಸತತ 4 ಪಂದ್ಯಗಳಲ್ಲಿ 4 ಶತಕ:
ಕಳೆದ ವರ್ಷ ವಿಜಯ್ ಹಜಾರೆ ಟೂರ್ನಿಯಲ್ಲಿ ರಿತುಜರಾಜ್ ಗಾಯಕ್ವಾಡ್ ಸತತ 4 ಪಂದ್ಯಗಳಲ್ಲಿ 4 ಶತಕ ಬಾರಿಸುವ ಮೂಲಕ ಉತ್ತಮ ಫಾರ್ಮ್‌ನಲ್ಲಿರುವ ಸೂಚನೆ ನೀಡಿದ್ದರು. ರಿತುಜ್ರಾಜ್ ಗಾಯಕ್ವಾಡ್ ಅವರ ಈ ಸಾಮರ್ಥ್ಯವನ್ನು ನೋಡಿ, ನಾಳೆ ಅಂದರೆ ಫೆಬ್ರವರಿ 16 ರಂದು ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ 20 ಪಂದ್ಯದಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಆರಂಭಿಕ ಪ್ಲೇಯರ್ ಆಗಿ ಇವರನ್ನು ಕಣಕ್ಕಿಳಿಸುತ್ತಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹೆಚ್ಚಿದೆ.


ಇದನ್ನೂ ಓದಿ- IPL 2022: ಅನ್ ಸೋಲ್ಡ್ ಆದ ಬಳಿಕ ಧೋನಿ ಕುರಿತು ಸುರೇಶ್ ರೈನಾ ಮಾತನಾಡಿದ ವಿಡಿಯೋ ವೈರಲ್.!


ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ T20 ಸರಣಿಯ ಸಂಪೂರ್ಣ ವೇಳಾಪಟ್ಟಿ :
16 ಫೆಬ್ರವರಿ: ಮೊದಲ T20 (ಕೋಲ್ಕತ್ತಾ)
18 ಫೆಬ್ರವರಿ: ಎರಡನೇ T20 (ಕೋಲ್ಕತ್ತಾ)
20 ಫೆಬ್ರವರಿ: ಮೂರನೇ T20 (ಕೋಲ್ಕತ್ತಾ) 


ಭಾರತ T20I ತಂಡ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (WK), ವೆಂಕಟೇಶ್ ಅಯ್ಯರ್, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಭುವನೇಶ್ವರ್ ಕುಮಾರ್ ಖಾನ್, ಹರ್ಷಲ್ ಪಟೇಲ್, ರಿತುರಾಜ್ ಗಾಯಕ್ವಾಡ್, ದೀಪಕ್ ಹೂಡಾ, ಕುಲದೀಪ್ ಯಾದವ್.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.