IPL 2022: ಅನ್ ಸೋಲ್ಡ್ ಆದ ಬಳಿಕ ಧೋನಿ ಕುರಿತು ಸುರೇಶ್ ರೈನಾ ಮಾತನಾಡಿದ ವಿಡಿಯೋ ವೈರಲ್.!

IPL 2022: ಸಿಎಸ್‌ಕೆ ನಾಯಕ ಎಂಎಸ್ ಧೋನಿ ಅವರ ಉತ್ತಮ ಗೆಳೆಯನೆಂದೆ ಹೆಸರುವಾಸಿಯಾದ ರೈನಾ ಹರಾಜಿನಲ್ಲಿ ಅನ್ ಸೋಲ್ಡ್ ಆಗಿದ್ದಾರೆ. ಧೋನಿ ಕುರಿತು ಸುರೇಶ್ ರೈನಾ  ಮಾತನಾಡಿದ ವಿಡಿಯೋ ವೈರಲ್ ಆಗಿದೆ. 

Edited by - Chetana Devarmani | Last Updated : Feb 14, 2022, 06:35 PM IST
  • ಸಿಎಸ್‌ಕೆ ನಾಯಕ ಎಂಎಸ್ ಧೋನಿ
  • ಹರಾಜಿನಲ್ಲಿ ಅನ್ ಸೋಲ್ಡ್ ಆದ ರೈನಾ
  • ಧೋನಿ ಕುರಿತು ಸುರೇಶ್ ರೈನಾ ಮಾತನಾಡಿದ ವಿಡಿಯೋ ವೈರಲ್
IPL 2022: ಅನ್ ಸೋಲ್ಡ್ ಆದ ಬಳಿಕ ಧೋನಿ ಕುರಿತು ಸುರೇಶ್ ರೈನಾ ಮಾತನಾಡಿದ ವಿಡಿಯೋ ವೈರಲ್.!  title=
ಧೋನಿ-ರೈನಾ

ನವದೆಹಲಿ: ಭಾನುವಾರ ಬೆಂಗಳೂರಿನಲ್ಲಿ ನಡೆದ ಐಪಿಎಲ್ 2022 ಮೆಗಾ (IPL 2022 mega auction) ಹರಾಜಿನಲ್ಲಿ ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಮಾರಾಟವಾಗದೆ ಹೋದರು.

ರೈನಾ (Suresh Raina) ಐಪಿಎಲ್ ಹರಾಜಿನಲ್ಲಿ ಮೊದಲ ಬಾರಿಗೆ ಮಾರಾಟವಾಗದೆ ಹೋಗಿದ್ದಾರೆ.  ಏತನ್ಮಧ್ಯೆ, ರೈನಾ ಅವರ ಹಳೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಈ ವಿಡಿಯೋದಲ್ಲಿ ಅವರು, ಸಿಎಸ್‌ಕೆ ನಾಯಕ ಎಂಎಸ್ ಧೋನಿ (MS Dhoni) ಅವರ ಬಗ್ಗೆ ಹೇಳಿದ್ದಾರೆ.

ಇದನ್ನೂ ಓದಿ: IPL Mega Auction 2022: ಅನ್ ಸೋಲ್ಡ್ ಆಗದೇ ಉಳಿದ ಪ್ರಮುಖ 10 ಆಟಗಾರರಿವರು

ಧೋನಿ ಇಲ್ಲದಿದ್ದರೆ ಐಪಿಎಲ್ 2022 ರಲ್ಲಿ ಆಡುವುದಿಲ್ಲ ಎಂದು ರೈನಾ ಹೇಳಿದ್ದಾರೆ. 2021 ರಲ್ಲಿ CSK ಐಪಿಎಲ್ ಗೆದ್ದರೆ 2022 ರಲ್ಲಿ ಆಡಲು ಧೋನಿಗೆ ಮನವರಿಕೆ ಮಾಡುವುದಾಗಿ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು.

 

 

"ಧೋನಿ ಭಾಯ್ ಮುಂದಿನ ಸೀಸನ್ ನಲ್ಲಿ ಆಡದಿದ್ದರೆ, ನಾನು ಕೂಡ ಆಡುವುದಿಲ್ಲ. ನಾವು 2008 ರಿಂದ CSK ಗಾಗಿ ಆಡುತ್ತಿದ್ದೇವೆ. ಈ ವರ್ಷ ನಾವು ಗೆದ್ದರೆ ಮುಂದಿನ ವರ್ಷವೂ ಆಡಲು ಅವರನ್ನು ಮನವೊಲಿಸುವೆ. ನಾನು ನನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತೇನೆ" ಎಂದು ರೈನಾ ನ್ಯೂಸ್ 24 ಸ್ಪೋರ್ಟ್ಸ್‌ಗೆ ತಿಳಿಸಿದರು. ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. 

ಇದನ್ನೂ ಓದಿ:IPL 2022 RCB Team: ಈ ಬಾರಿ ಐಪಿಎಲ್ ನಲ್ಲಿ ಕಣಕ್ಕಿಳಿಯಲಿದೆ RCB ಬಲಿಷ್ಠ ಪ್ಲೇಯಿಂಗ್ XI

ಕುತೂಹಲಕಾರಿಯಾಗಿ, ರೈನಾ ಮತ್ತು ಧೋನಿ 2008 ರಲ್ಲಿ IPL ಪ್ರಾರಂಭವಾದಾಗಿನಿಂದ CSK ನ ಪ್ರಮುಖ ಆಟಗಾರರಾಗಿದ್ದರು. 'Mr.IPL'ರೈನಾ 2021 ರಲ್ಲಿ ಕಳಪೆ  ಪ್ರದರ್ಶನ ನೀಡಿದರು. 17.77 ರ ಸರಾಸರಿಯಲ್ಲಿ ಕೇವಲ 160 ರನ್ಗಳನ್ನು ಗಳಿಸಿದರು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News