IND VS ZIM: ಜಿಂಬಾಬ್ವೆ ಪ್ರವಾಸವನ್ನು ಭಾರತ ತಂಡ ಭಾರಿ ಸೋಲಿನೊಂದಿಗೆ ಆರಂಭಿಸಿದೆ. 24 ಗಂಟೆಯೊಳಗೆ ಮತ್ತೊಂದು ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗಿದೆ. ಭಾನುವಾರ ಹರಾರೆಯಲ್ಲಿ ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ತಂಡವನ್ನು ಶುಭ್‌ಮನ್‌ ಗಿಲ್‌ ಪಡೆ ಎದುರಿಸಲಿದೆ. ಇದೇ ಮೈದಾನದಲ್ಲಿ ಶನಿವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ 13 ರನ್‌ಗಳ ಹೀನಾಯ ಸೋಲು ಅನುಭವಿಸತು.


COMMERCIAL BREAK
SCROLL TO CONTINUE READING

ಟಿ20 ಮಾದರಿಯಲ್ಲಿ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿರುವ ಟೀ ಇಂಡಿಯಾ, ಜಿಂಬಾಬ್ವೆ ಎದುರು ಸೋತಿದ್ದನ್ನು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು  ಸಾಧ್ಯವಾಗುತ್ತಿಲ್ಲ. ಜಿಂಬಾಬ್ವೆ ಕೇವಲ ಒಂದು ತಂಡವಷ್ಟೆ ಅದು ಭಾರತೀಯ ಹುಡುಗರನ್ನು ಎದುರಿಸಿ ಗೆಲ್ಲುಲು ಸಾಧ್ಯವೇ ಇಲ್ಲ ಎಂದು ಎಲ್ಲರೂ ಊಹಿಸಿದ್ದರು, ಆದರೆ ಭಾರತ ತಂಡ ಈ ಊಹೆಯನ್ನು ಉಸಿ ಮಾಡಿದೆ. ಇದೇ ಕಾರಣದಿಂದ ಭಾರತೀಯ ಆಟಗಾರರೂ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಕ್ರಮದಲ್ಲಿ ಮೊದಲ ಪಂದ್ಯದ ತಪ್ಪುಗಳನ್ನು ಸರಿಪಡಿಸಿಕೊಂಡು ಎರಡನೇ ಟಿ20ಯಲ್ಲಿ ಮುನ್ನುಗ್ಗಲು ಟೀಂ ಇಂಡಿಯಾ ಉತ್ಸುಕರಾಗಿದ್ದಾರೆ.


ಇದನ್ನೂ ಓದಿ: IND vs ZIM: ಇತಿಹಾಸ ಸೃಷ್ಟಿಸಿದ ರಿಯಾನ್‌ ಪರಾಗ್‌..!


ಮೊದಲ ಸೋಲಿನ ಹಿನ್ನಲೆಯಲ್ಲಿ ಟೀಂ ಇಂಡಿಯಾ ಕಾಂಬಿನೇಷನ್ ನಲ್ಲಿ ವಿವಿಎಸ್ ಲಕ್ಷ್ಮಣ್ ನೇತೃತ್ವದ ನಿರ್ವಹಣೆಯಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಅದರಲ್ಲೂ ಬೌಲಿಂಗ್ ವಿಭಾಗದಲ್ಲಿ ಹೀನಾಯವಾಗಿ ವಿಫಲವಾಗಿರುವ ಖಲೀಲ್ ಅಹ್ಮದ್ ಅವರನ್ನು ಪಂದ್ಯದಿಂದ ಹೊರಗಿಡುವ ಸಾಧ್ಯತೆಯಿದೆ.


ಶನಿವಾರ ನಡೆದ ಪಂದ್ಯದಲ್ಲಿ ಖಲೀಲ್ ಅಹ್ಮದ್ ಪ್ರತಿ ಓವರ್‌ಗೆ 9ಕ್ಕೂ ಹೆಚ್ಚು ರನ್ ನೀಡಿದರು. ಈ ಕ್ರಮದಲ್ಲಿ ಅವರನ್ನು ಬಿಟ್ಟು ಯುವ ವೇಗಿ ಹರ್ಷಿತ್ ರಾಣಾ ಅಥವಾ ತುಷಾರ್ ದೇಶಪಾಂಡೆ ಅವರನ್ನು ಅಂತಿಮ ತಂಡಕ್ಕೆ ಸೇರಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. 


ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆ ಮಾಡಬೇಕೆಂದರೆ ಸಾಯಿ ಸುದರ್ಶನ್ ಅವರಿಗೆ ತಂಡದಲ್ಲಿ ಸ್ಥಾನ ಕೊಡುಬಹುದಾದ ಸಾಧ್ಯತೆಯಿದೆ. ಇನ್ನೂ ರುತುರಾಜ್ ಗಾಯಕ್ವಾಡ್ ಅಥವಾ ರಿಯಾನ್ ಪರಾಗ್ ಅವರಲ್ಲಿ ಒಬ್ಬರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಈ ಎರಡು ಬದಲಾವಣೆಗಳನ್ನು ಹೊರತುಪಡಿಸಿ, ಇತರ ಸಂಯೋಜನೆಗಳಲ್ಲಿ ಯಾವುದೇ ಬದಲಾವಣೆಗಳ ಸಾಧ್ಯತೆಯಿಲ್ಲ. ಗಿಲ್, ಅಭಿಷೇಕ್ ಶರ್ಮಾ ಆರಂಭಿಕರಾಗಿ ಕ್ರೀಸ್‌ಗೆ ಎಂಟ್ರಿ ಕೊಡಲಿದ್ದಾರೆ,  ಮಧ್ಯಮ ಕ್ರಮಾಂಕದಲ್ಲಿ ರಯಾನ್ ಪರಾಗ್ ಬ್ಯಾಟ್‌ ಬೀಸಲಿದ್ದಾರೆ.


ಇದನ್ನೂ ಓದಿ: ಕೆಕೆಆರ್‌ ಗೆ ಗುಡ್‌ ಬೈ ಹೇಳಿದ ಗೌತಮ್‌ ಗಂಭೀರ್‌..!


ರಿಂಕು ಸಿಂಗ್ ಫಿನಿಶರ್ ಆಗಿದ್ದು, ಧ್ರುವ್ ಜುರೆಲ್ ವಿಕೆಟ್ ಕೀಪರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ವಾಷಿಂಗ್ಟನ್ ಸುಂದರ್ ಮತ್ತು ಸ್ಪೆಷಲಿಸ್ಟ್ ಸ್ಪಿನ್ನರ್ ರವಿ ಬಿಷ್ಣೋಯ್ ಸ್ಪಿನ್ ಆಲ್ ರೌಂಡರ್ ಗಳಾಗಿ ಮುಂದುವರಿದರೆ, ಅವೇಶ್ ಖಾನ್ ಮತ್ತು ಮುಖೇಶ್ ಕುಮಾರ್ ವೇಗಿಗಳಾಗಿ ಕಣಕ್ಕಿಳಿಯಲಿದ್ದಾರೆ. 


ಟೀಂ ಇಂಡಿಯಾ ಪ್ಲೇಯಿಂಗ್‌ XI: 
ಶುಭಮನ್ ಗಿಲ್ (ನಾಯಕ), ರುತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಧ್ರುವ್ ಜುರೆಲ್, ರಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ತುಷಾರ್ ದೇಶ್ ಸುದರ್ಶನ್, ಜಿತೇಶ್ ಶರ್ಮಾ (ಕೀಪರ್), ಹರ್ಷಿತ್ ರಾಣಾ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ