India vs Pakistan Women's T20 World Cup: 2024ರ T20 ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಗೆಲುವಿನ ಆರಂಭವನ್ನು ಮಾಡಲು ಸಾಧ್ಯವಾಗಲಿಲ್ಲ. ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 58 ರನ್‌ಗಳ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಇದೀಗ 2ನೇ ಪಂದ್ಯದಲ್ಲಿ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಸವಾಲನ್ನು ಎದುರಿಸಲಿದೆ. ಶ್ರೀಲಂಕಾವನ್ನು ಸೋಲಿಸುವ ಮೂಲಕ ಪಾಕಿಸ್ತಾನ ಪಂದ್ಯಾವಳಿಯಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಸತತ ಎರಡನೇ ಗೆಲುವಿನತ್ತ ಪಾಕ್‌ನ ಕಣ್ಣು ನೆಟ್ಟಿದೆ.


COMMERCIAL BREAK
SCROLL TO CONTINUE READING

ಇದೇ ವೇಳೆ ಗೆಲುವಿನ ಖಾತೆ ತೆರೆಯಲು ಭಾರತಕ್ಕೆ ಕಠಿಣ ಸವಾಲು ಎದುರಾಗಲಿದೆ. ಭಾರತ ತಂಡ ತನ್ನ ಮೊದಲ ಸೋಲಿನ ನಂತರ ಪಾಕಿಸ್ತಾನ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ದುಬೈನಲ್ಲಿ ಭಾನುವಾರ ನಡೆಯಲಿದ್ದು, ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಶುರುವಾಗಲಿದೆ. ಟಾಸ್ ಅರ್ಧ ಗಂಟೆ ಮೊದಲು ನಡೆಯಲಿದೆ. ವಿಶ್ವದಾದ್ಯಂತ ಇರುವ ಕ್ರಿಕೆಟ್ ಅಭಿಮಾನಿಗಳ ಕಣ್ಣು ಈ ಪಂದ್ಯದ ಮೇಲಿರುತ್ತದೆ. 


ಇದನ್ನೂ ಓದಿ: ಒಂದೇ ಪಂದ್ಯದಲ್ಲಿ 8 ರನೌಟ್...‌ ಏಕದಿನದಲ್ಲಿ ಅತಿ ಹೆಚ್ಚು ರನ್ ಔಟ್ ದಾಖಲೆ ಹೊಂದಿರುವ ಪಂದ್ಯ ಇದುವೇ!! 25 ವರ್ಷಗಳಿಂದ ಹಾಗೇ ಇದೆ ಈ ರೆಕಾರ್ಡ್‌


ಭಾರತ vs ಪಾಕಿಸ್ತಾನ ಮುಖಾಮುಖಿ


ಒಟ್ಟು ಪಂದ್ಯಗಳು- 15 ಪಂದ್ಯಗಳು 
ಭಾರತಕ್ಕೆ ಗೆಲುವು- 12 ಪಂದ್ಯಗಳು 
ಪಾಕಿಸ್ತಾನಕ್ಕೆ ಗೆಲುವು- 3 ಪಂದ್ಯಗಳು


IND W vs PAK W ಪಂದ್ಯದ ಲೈವ್ ಟೆಲಿಕಾಸ್ಟ್: ಭಾರತ vs ಪಾಕಿಸ್ತಾನ ಮಹಿಳಾ T20 ವಿಶ್ವಕಪ್ 2024 ಪಂದ್ಯ ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ 1 SD, ಸ್ಟಾರ್ ಸ್ಪೋರ್ಟ್ಸ್ 1 HD, ಸ್ಟಾರ್ ಸ್ಪೋರ್ಟ್ಸ್ 2 SD, ಸ್ಟಾರ್ ಸ್ಪೋರ್ಟ್ಸ್ 2 HD, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ SD, ನಲ್ಲಿ ಭಾರತದಲ್ಲಿ ನೇರ ಪ್ರಸಾರ ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ ಎಚ್‌ಡಿ, ಸ್ಟಾರ್ ಸ್ಪೋರ್ಟ್ಸ್ 3, ಸ್ಟಾರ್ ಸ್ಪೋರ್ಟ್ಸ್ ಫಸ್ಟ್, ಸ್ಟಾರ್ ಸ್ಪೋರ್ಟ್ಸ್ 1 ತಮಿಳು ಎಸ್‌ಡಿ, ಸ್ಟಾರ್ ಸ್ಪೋರ್ಟ್ಸ್ 1 ತಮಿಳು ಎಚ್‌ಡಿ, ಸ್ಟಾರ್ ಸ್ಪೋರ್ಟ್ಸ್ 1 ತೆಲುಗು ಎಸ್‌ಡಿ, ಸ್ಟಾರ್ ಸ್ಪೋರ್ಟ್ಸ್ 1 ತೆಲುಗು ಎಚ್‌ಡಿ, ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ ಮತ್ತು ಡಿಡಿ ಸ್ಪೋರ್ಟ್ಸ್ ಟಿವಿ ಚಾನೆಲ್‌ಗಳು.


IND W vs PAK W ಪಂದ್ಯದ ಲೈವ್ ಸ್ಟ್ರೀಮಿಂಗ್: ಭಾರತ ಮತ್ತು ಪಾಕಿಸ್ತಾನ ಮಹಿಳಾ T20 ವಿಶ್ವಕಪ್ 2024 ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ. 
ಉಭಯ ತಂಡಗಳ ಸ್ಕ್ವಾಡ್‌ ಈ ರೀತಿ ಇದೆ


ಇದನ್ನೂ ಓದಿ: ಅದ್ಭುತ ಸಾಧನೆ ಮಾಡಲಿದ್ದಾರೆ ಹಾರ್ದಿಕ್ ಪಾಂಡ್ಯ; ಒಂದೇ ಸ್ಟ್ರೋಕ್‌ನಲ್ಲಿ ಧೂಳಿಪಟವಾಗಲಿದೆ ಬುಮ್ರಾ ಮತ್ತು ಭುವಿಯ ದಾಖಲೆ!


ಭಾರತ ಮಹಿಳಾ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್, ಯಾಸ್ತಿಕಾ ಭಾಟಿಯಾ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ದಯಾಲನ್ ಹೇಮಲತಾ, ಆಶಾ ಶೋಭನಾ, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್, ಸಜ್ನಾ ಸಜೀವನ್. 


ಪಾಕಿಸ್ತಾನ ಮಹಿಳಾ ತಂಡ: ಫಾತಿಮಾ ಸನಾ (ನಾಯಕಿ), ಅಲಿಯಾ ರಿಯಾಜ್, ಡಯಾನಾ ಬೇಗ್, ಗುಲ್ ಫಿರೋಜ್, ಇರಾಮ್ ಜಾವೇದ್, ಮುನಿಬಾ ಅಲಿ, ನಶ್ರಾ ಸುಂಧು, ನಿದಾ ದಾರ್, ಒಮೈಮಾ ಸೊಹೈಲ್, ಸದಾಫ್ ಶಮಾಸ್, ಸಾದಿಯಾ ಇಕ್ಬಾಲ್ (ಫಿಟ್‌ನೆಸ್‌ಗೆ ಒಳಪಟ್ಟಿರುತ್ತದೆ), ಸಿದ್ರಾ ಅಮೀನ್, ಸೈಯದಾ ಅರುಬ್ ಶಾ, ತಸ್ಮಿಯಾ ರುಬಾಬ್, ತುಬಾ ಹಸನ್.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.