India Vs New Zealand 3rd ODI : ಸರಣಿಯ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡ 90 ರನ್‌ಗಳಿಂದ ನ್ಯೂಜಿಲೆಂಡ್ ಅನ್ನು ಸೋಲಿಸಿತು. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 3-0 ಕ್ಲೀನ್ ಸ್ವೀಪ್ ಮಾಡಿದೆ. ಇಂದೋರ್‌ನಲ್ಲಿ ಮಂಗಳವಾರ ನಡೆದ ಈ ಪಂದ್ಯದಲ್ಲಿ ಟೀಂ ಇಂಡಿಯಾ 9 ವಿಕೆಟ್‌ಗೆ 385 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಇದಾದ ಬಳಿಕ ಕಿವೀಸ್ ತಂಡ 41.2 ಓವರ್ ಗಳಲ್ಲಿ 295 ರನ್ ಗಳಿಗೆ ಆಲೌಟ್ ಆಯಿತು. ಭಾರತ ಪರ ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಶತಕ ಬಾರಿಸಿದರೆ, ಆರಂಭಿಕ ಆಟಗಾರ ಡೆವೊನ್ ಕಾನ್ವೆ ಪ್ರವಾಸಿ ತಂಡದ ಪರ 138 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ಅದೇ ಸಮಯದಲ್ಲಿ ಶಾರ್ದೂಲ್ ಠಾಕೂರ್ ಮತ್ತು ಕುಲದೀಪ್ ಯಾದವ್ 3-3 ವಿಕೆಟ್ ಪಡೆದರು. ವೇಗಿ ಶಾರ್ದೂಲ್ ಠಾಕೂರ್ ಉತ್ತಮ ಪ್ರದರ್ಶನ ನೀಡಿ 3 ವಿಕೆಟ್ ಪಡೆದರು. ಇನಿಂಗ್ಸ್ ನ 26ನೇ ಓವರ್ ನಲ್ಲಿ ಸತತ ಎಸೆತಗಳಲ್ಲಿ 2 ವಿಕೆಟ್ ಪಡೆದರು. 


COMMERCIAL BREAK
SCROLL TO CONTINUE READING

386 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡಕ್ಕೆ ಡೆವೊನ್ ಕಾನ್ವೆ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಕಾನ್ವೆ 100 ಎಸೆತಗಳಲ್ಲಿ 12 ಬೌಂಡರಿ ಹಾಗೂ 8 ಸಿಕ್ಸರ್‌ಗಳ ನೆರವಿನಿಂದ 138 ರನ್ ಗಳಿಸಿದರು. ಅವರು ಔಟಾದಾಗ ತಂಡದ ಸ್ಕೋರ್ 230 ರನ್ ಆಗಿತ್ತು. ಹೆನ್ರಿ ನಿಕೋಲ್ಸ್ 40 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಜೊತೆ  42 ರನ್‌ ಬಾರಿಸಿದರು.  


ಇದನ್ನೂ ಓದಿ : IND vs NZ 3rd ODI : ಅಬ್ಬರಿಸಿ ಬೊಬ್ಬಿರಿದ ರೋಹಿತ್- ಗಿಲ್‌... ನ್ಯೂಜಿಲೆಂಡ್‌ಗೆ 386 ರನ್‌ಗಳ ಗುರಿ..!


ಇದಕ್ಕೂ ಮೊದಲು, ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಅವರ ಶತಕಗಳ ನೆರವಿನಿಂದ ಭಾರತ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 385 ರನ್‌ಗಳ ಬೃಹತ್ ಸ್ಕೋರ್ ಮಾಡಿತು. ರೋಹಿತ್ 3 ವರ್ಷಗಳ ಬಳಿಕ ಮೊದಲ ಏಕದಿನ ಶತಕ ದಾಖಲಿಸಿದರು. ಅದೇ ಸಮಯದಲ್ಲಿ, ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ತಮ್ಮ ODI ವೃತ್ತಿಜೀವನದ ನಾಲ್ಕನೇ ಶತಕವನ್ನು ಗಳಿಸಿದರು. ರೋಹಿತ್ 85 ಎಸೆತಗಳಲ್ಲಿ 9 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ 101 ರನ್ ಗಳಿಸಿದರು, ಇದು ಜನವರಿ 2020 ರಿಂದ ಅವರ ಮೊದಲ ODI ಶತಕವಾಗಿದೆ. ಗಿಲ್ 78 ಎಸೆತಗಳಲ್ಲಿ 13 ಬೌಂಡರಿ ಮತ್ತು 5 ಸಿಕ್ಸರ್‌ಗಳೊಂದಿಗೆ 112 ರನ್ ಗಳಿಸಿದರು. ಇಬ್ಬರೂ ಮೊದಲ ವಿಕೆಟ್‌ಗೆ 212 ರನ್‌ಗಳ ಬಿರುಸಿನ ಜೊತೆಯಾಟವನ್ನು ನೀಡಿದರು.


ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕೊನೆಯ ಓವರ್ ಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅವರು 38 ಎಸೆತಗಳಲ್ಲಿ 54 ರನ್ ಗಳಿಸಿದರು ಮತ್ತು ತಂಡದ ಸ್ಕೋರ್ ಅನ್ನು 380 ಕ್ಕಿಂತ ಹೆಚ್ಚು ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.  


ಇದನ್ನೂ ಓದಿ : Rohit Sharma Century : 17 ತಿಂಗಳ ನಂತರ ಮೊದಲ ಶತಕ ಭಾರಿಸಿದ ಹಿಟ್‌ಮ್ಯಾನ್‌ ರೋಹಿತ್‌..!


ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ನಿರಾಸೆ ಮೂಡಿಸಿದೆ. ಇಶಾನ್ ಕಿಶನ್ (17) ಖಾತೆ ತೆರೆಯಲು 9 ಎಸೆತಗಳನ್ನು ಆಡಿದರು. ಅವರು ಸ್ವಲ್ಪವೂ ಆರಾಮದಾಯಕವಾಗಿ ಕಾಣಲಿಲ್ಲ ಮತ್ತು ಅಂತಿಮವಾಗಿ ವಿರಾಟ್ ಕೊಹ್ಲಿ (36) ಅವರೊಂದಿಗಿನ ತಪ್ಪು ತಿಳುವಳಿಕೆಯ ನಂತರ ರನ್ ಔಟ್ ಆದರು. ಮಿಡ್ ಆಫ್‌ನಲ್ಲಿ ಫಿನ್ ಅಲೆನ್ ಅವರ ಎಸೆತದಲ್ಲಿ ಜಾಕೋಬ್ ಡಫಿಗೆ ಕ್ಯಾಚ್ ನೀಡಿ ಕೊಹ್ಲಿ ಔಟಾದರು. ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ನಿರಾಸೆ ಮೂಡಿಸಿ ಕೇವಲ 14 ರನ್ ಗಳಿಸಿ ಔಟಾದರು. ಪಾಂಡ್ಯ ಮತ್ತು ಶಾರ್ದೂಲ್ ಠಾಕೂರ್ (25) ಏಳನೇ ವಿಕೆಟ್‌ಗೆ 54 ರನ್ ಸೇರಿಸಿದರು. ನ್ಯೂಜಿಲೆಂಡ್ ಪರ ಡಫಿ ಮತ್ತು ಬ್ಲೇರ್ ಟಿಕ್ನರ್ 3-3 ವಿಕೆಟ್ ಪಡೆದರು.


ನ್ಯೂಜಿಲೆಂಡ್​ ವಿರುದ್ಧದ ಮೂರನೇ ಪಂದ್ಯದಲ್ಲಿ ಗೆದ್ದು, ಭಾರತ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿದೆ. ರ್‍ಯಾಕಿಂಗ್​ ಭಾರತ ಮತ್ತೆ ನಂಬರ್​ 1 ಆಗಿದೆ. ಭಾರತ ಇಂಗ್ಲೆಂಡ್‌ನ್ನು ಕೆಳಕ್ಕೆ ತಳ್ಳಿ ಮೊದಲ ಸ್ಥಾನಕ್ಕೆ ಏರಿದೆ. ಟೀಂ ಇಂಡಿಯಾ ತವರಿನಲ್ಲಿ ಈ ವರ್ಷದ ಎರಡನೇಕ್ಲೀನ್‌ ಸ್ವೀಪ್‌ ಸಾಧಿಸಿ, ನಂ.1 ಪಟ್ಟ ಮುಡಿಗೇರಿಸಿಕೊಂಡಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.