IND vs SL: ಸರಣಿ ಗೆದ್ದು, ಪಾಕ್ ಹಿಂದಿಕ್ಕಿ ದಾಖಲೆ ಸೃಷ್ಟಿಸಿದ ಭಾರತ: ಇಂಗ್ಲೆಂಡ್ ರೆಕಾರ್ಡ್ ಸರಿಗಟ್ಟಿದ ಟೀಂ ಇಂಡಿಯಾ
Team India New Record: ಮೂರನೇ ಟಿ20 ಗೆಲುವಿನೊಂದಿಗೆ ಭಾರತ ಶ್ರೀಲಂಕಾ ವಿರುದ್ಧ ಒಟ್ಟು 19ನೇ ಟಿ20ಯಲ್ಲಿ ಜಯಭೇರಿ ಬಾರಿಸಿದೆ. ಇಲ್ಲಿಯವರೆಗೆ ಇಂತಹ ದಾಖಲೆಯನ್ನು ಮಾಡಿಲ್ಲ. ಒಂದು ಎದುರಾಳಿ ತಂಡದ ವಿರುದ್ಧ ಇದು ಹೆಚ್ಚು ಗೆಲುವು ಸಾಧಿಸಿದ ದಾಖಲೆಯಾಗಿದೆ. ಭಾರತ ಪಾಕಿಸ್ತಾನದ ದಾಖಲೆಯನ್ನು ಮುರಿದು ಇಂಗ್ಲೆಂಡ್‌ನ ದಾಖಲೆಯನ್ನು ಸರಿಗಟ್ಟಿದೆ.
Team India New Record: ಶ್ರೀಲಂಕಾ ವಿರುದ್ಧದ ಮೂರನೇ ಟಿ-20 ಪಂದ್ಯವನ್ನು ಗೆಲ್ಲುವ ಮೂಲಕ ಭಾರತ 2023ರ ವರ್ಷಕ್ಕೆ ಉತ್ತಮ ಆರಂಭವನ್ನು ಮಾಡಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಟೀಂ ಇಂಡಿಯಾ ಮೂರನೇ ಟಿ20 ಪಂದ್ಯದಲ್ಲಿ ಶ್ರೀಲಂಕಾವನ್ನು 91 ರನ್‌ಗಳಿಂದ ಸೋಲಿಸಿ ಸರಣಿಯನ್ನು 2-1ರಿಂದ ವಶಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಭಾರತ ತಂಡ ದೊಡ್ಡ ದಾಖಲೆ ಮಾಡಿದೆ. ಭಾರತ ಪಾಕಿಸ್ತಾನವನ್ನು ಹಿಂದೆ ಸರಿಸಿ ಇಂಗ್ಲೆಂಡ್ ದಾಖಲೆಯನ್ನು ಸರಿಗಟ್ಟಿದೆ.
ಇದನ್ನೂ ಓದಿ: Suryakumar Yadav: ಶತಕದ ಜೊತೆ 3 ವಿಶ್ವದಾಖಲೆ ಬರೆದ ‘ಮಿ.360’: ಈ ಸಾಧನೆ ಮಾಡಿದ ಜಗತ್ತಿನ ಮೊದಲ ಬ್ಯಾಟ್ಸ್ ಮನ್ ‘SKY’
ಮೂರನೇ ಟಿ20 ಗೆಲುವಿನೊಂದಿಗೆ ಭಾರತ ಶ್ರೀಲಂಕಾ ವಿರುದ್ಧ ಒಟ್ಟು 19ನೇ ಟಿ20ಯಲ್ಲಿ ಜಯಭೇರಿ ಬಾರಿಸಿದೆ. ಇಲ್ಲಿಯವರೆಗೆ ಇಂತಹ ದಾಖಲೆಯನ್ನು ಮಾಡಿಲ್ಲ. ಒಂದು ಎದುರಾಳಿ ತಂಡದ ವಿರುದ್ಧ ಇದು ಹೆಚ್ಚು ಗೆಲುವು ಸಾಧಿಸಿದ ದಾಖಲೆಯಾಗಿದೆ. ಭಾರತ ಪಾಕಿಸ್ತಾನದ ದಾಖಲೆಯನ್ನು ಮುರಿದು ಇಂಗ್ಲೆಂಡ್‌ನ ದಾಖಲೆಯನ್ನು ಸರಿಗಟ್ಟಿದೆ. ಇಂಗ್ಲೆಂಡ್ ತಂಡ ಪಾಕಿಸ್ತಾನ ವಿರುದ್ಧ ಆಡಿರುವ 29 ಟಿ20 ಪಂದ್ಯಗಳಲ್ಲಿ 19 ರಲ್ಲಿ ಗೆಲುವು ಸಾಧಿಸಿದೆ. ಪಾಕಿಸ್ತಾನವು ನ್ಯೂಜಿಲೆಂಡ್ ವಿರುದ್ಧ 18 ಪಂದ್ಯಗಳನ್ನು ಗೆದ್ದಿದೆ.
ಟಿ20ಯಲ್ಲಿ ಎದುರಾಳಿ ವಿರುದ್ಧ ಅತಿ ಹೆಚ್ಚು ಗೆಲುವು:
ಭಾರತ - ಶ್ರೀಲಂಕಾ ವಿರುದ್ಧ 19 ಗೆಲುವುಗಳು (29 ಪಂದ್ಯಗಳು)
ಇಂಗ್ಲೆಂಡ್ - ಪಾಕಿಸ್ತಾನ ವಿರುದ್ಧ 19 ಗೆಲುವುಗಳು (29 ಪಂದ್ಯಗಳು)
ಪಾಕಿಸ್ತಾನ - ನ್ಯೂಜಿಲೆಂಡ್ ವಿರುದ್ಧ 18 ಗೆಲುವುಗಳು (29 ಪಂದ್ಯಗಳು)
ಭಾರತ - ವೆಸ್ಟ್ ಇಂಡೀಸ್ ವಿರುದ್ಧ 17 ಗೆಲುವುಗಳು (25 ಪಂದ್ಯಗಳು)
ಇದನ್ನೂ ಓದಿ: ಈ ಆಟಗಾರನಿಗೆ ತಂಡದಲ್ಲಿ ಒಂದೇ ಒಂದು ಅವಕಾಶ ನೀಡದ ಹಾರ್ದಿಕ್: ಕಾರಣ ಏನು?
ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ 2 ರನ್‌ಗಳ ಜಯ ಸಾಧಿಸಿದೆ. ಎರಡನೇ ಟಿ20 ಪಂದ್ಯದಲ್ಲಿ ಭಾರತ 16 ರನ್‌ಗಳಿಂದ ಸೋಲನುಭವಿಸಿತ್ತು. ಇನ್ನು ಮೂರನೇ ಟಿ20 ಪಂದ್ಯದಲ್ಲಿ ಭಾರತ 91 ರನ್‌ಗಳ ಜಯ ಸಾಧಿಸಿತ್ತು. ಇದರೊಂದಿಗೆ ಭಾರತ 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ. ಮೂರನೇ ಪಂದ್ಯದಲ್ಲಿ ಭಾರತದ ಪರ ಸೂರ್ಯಕುಮಾರ್ ಯಾದವ್ ಬಿರುಸಿನ ಶತಕ ಬಾರಿಸಿದರು. ಅವರಿಂದಲೇ ಭಾರತ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.