IND vs SL T20: ಜಡೇಜಾ ಬದಲಿಗೆ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟ ಈ ಸ್ಟಾರ್ ಆಟಗಾರ: ಮೈದಾನದಲ್ಲಿ ಅಬ್ಬರವೋ ಅಬ್ಬರ!

Axar Patel: ಇನ್ನೊಂದೆಡೆ ಶ್ರೀಲಂಕಾ ವಿರುದ್ಧ ಸ್ಟಾರ್ ಆಲ್ ರೌಂಡರ್ ಬಾಲ್ ಹಾಗೂ ಬ್ಯಾಟಿಂಗ್ ಮೂಲಕ ಅದ್ಭುತ ಆಟ ಪ್ರದರ್ಶಿಸಿದ್ದಾರೆ. ರವೀಂದ್ರ ಜಡೇಜಾ ಗಾಯಗೊಂಡ ನಂತರ ಈ ಆಟಗಾರನಿಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಕ್ಕಿತ್ತು. ಈ ಆಟಗಾರನು ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡಿದ್ದಾರೆ.

Written by - Bhavishya Shetty | Last Updated : Jan 8, 2023, 10:37 AM IST
    • ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಅಕ್ಷರ್ ಪಟೇಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ
    • ಭಾರತ ತವರಿನಲ್ಲಿ ಲಂಕಾ ತಂಡದ ವಿರುದ್ಧ ಸರಣಿ ಗೆಲುವಿನ ಅಜೇಯ ಅಭಿಯಾನವನ್ನು ಮುಂದುವರಿಸಿದೆ
    • ಜಡೇಜಾ ಗಾಯಗೊಂಡ ನಂತರ ಈ ಆಟಗಾರನಿಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಕ್ಕಿತ್ತು
IND vs SL T20: ಜಡೇಜಾ ಬದಲಿಗೆ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟ ಈ ಸ್ಟಾರ್ ಆಟಗಾರ: ಮೈದಾನದಲ್ಲಿ ಅಬ್ಬರವೋ ಅಬ್ಬರ! title=
ravindra jadeja

Axar Patel: ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾವನ್ನು 91 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿದೆ. ಇದರೊಂದಿಗೆ ಭಾರತ ತವರಿನಲ್ಲಿ ಲಂಕಾ ತಂಡದ ವಿರುದ್ಧ ಸರಣಿ ಗೆಲುವಿನ ಅಜೇಯ ಅಭಿಯಾನವನ್ನು ಮುಂದುವರಿಸಿದೆ. ಟೀಂ ಇಂಡಿಯಾ 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ.

ಇನ್ನೊಂದೆಡೆ ಶ್ರೀಲಂಕಾ ವಿರುದ್ಧ ಸ್ಟಾರ್ ಆಲ್ ರೌಂಡರ್ ಬಾಲ್ ಹಾಗೂ ಬ್ಯಾಟಿಂಗ್ ಮೂಲಕ ಅದ್ಭುತ ಆಟ ಪ್ರದರ್ಶಿಸಿದ್ದಾರೆ. ರವೀಂದ್ರ ಜಡೇಜಾ ಗಾಯಗೊಂಡ ನಂತರ ಈ ಆಟಗಾರನಿಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಕ್ಕಿತ್ತು. ಈ ಆಟಗಾರನು ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡಿದ್ದಾರೆ.

ಇದನ್ನೂ ಓದಿ: Suryakumar Yadav: ಶತಕದ ಜೊತೆ 3 ವಿಶ್ವದಾಖಲೆ ಬರೆದ ‘ಮಿ.360’: ಈ ಸಾಧನೆ ಮಾಡಿದ ಜಗತ್ತಿನ ಮೊದಲ ಬ್ಯಾಟ್ಸ್ ಮನ್ ‘SKY’

ಶ್ರೀಲಂಕಾ ವಿರುದ್ಧ ಅಕ್ಷರ್ ಪಟೇಲ್ ಅದ್ಭುತ ಆಟ ಪ್ರದರ್ಶಿಸಿದ್ದಾರೆ. ಚೆಂಡು ಹಾಗೂ ಬ್ಯಾಟಿಂಗ್ ಮೂಲಕ ಉತ್ತಮ ಪ್ರದರ್ಶನ ನೀಡಿ ಎಲ್ಲರ ಮನ ಗೆದ್ದಿದ್ದಾರೆ. ಅಷ್ಟೇ ಅಲ್ಲದೆ ಟೀಮ್ ಇಂಡಿಯಾದ ದೊಡ್ಡ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಕಿಲ್ಲರ್ ಬೌಲಿಂಗ್ ಮತ್ತು ಡ್ಯಾಶಿಂಗ್ ಬ್ಯಾಟಿಂಗ್‌ನಲ್ಲಿ ಪರಿಣಿತ ಆಟಗಾರ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇದರ ಜೊತೆಗೆ ಫೀಲ್ಡಿಂಗ್‌ನಲ್ಲಿ ಅದ್ಭುತ ಪಟುವಾಗಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ ಇವರ ಅದ್ಭುತ ಆಟಕ್ಕೆ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿನ 'ಸರಣಿ ಶ್ರೇಷ್ಠ' ಪ್ರಶಸ್ತಿ ನೀಡಲಾಯಿತು.

ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಅಕ್ಷರ್ ಪಟೇಲ್ ಮೂರು ಪಂದ್ಯಗಳಲ್ಲಿ ಒಟ್ಟು 3 ವಿಕೆಟ್ ಪಡೆದು ಮಿತವ್ಯಯ ಸಾಧಿಸಿದ್ದಾರೆ. ತನ್ನ ಓವರ್ ಅನ್ನು ತ್ವರಿತವಾಗಿ ಪೂರ್ಣಗೊಳಿಸಿದ್ದಾರೆ. ಮಧ್ಯಮ ಓವರ್‌ಗಳಲ್ಲಿ ನಾಯಕ ಹಾರ್ದಿಕ್‌ಗೆ ವಿಕೆಟ್‌ ಬೇಕು ಎಂದಾದದರೆ, ಅಲ್ಲಿ ಅಕ್ಷರ್ ಪಟೇಲ್ ಅವರ ಸಂಖ್ಯೆಯನ್ನು ಬದಲಾಯಿಸುತ್ತಾರೆ. ಬೌಲಿಂಗ್ ಜೊತೆಗೆ ಟಿ20 ಸರಣಿಯಲ್ಲಿ ಬ್ಯಾಟ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅಕ್ಷರ್ ಮೊದಲ ಟಿ20 ಪಂದ್ಯದಲ್ಲಿ 31 ರನ್, ಎರಡನೇ ಟಿ20 ಪಂದ್ಯದಲ್ಲಿ 65 ರನ್ ಮತ್ತು ಮೂರನೇ ಟಿ20 ಪಂದ್ಯದಲ್ಲಿ 21 ರನ್ ಗಳಿಸಿದ್ದಾರೆ. ಟಿ20 ಸರಣಿಯಲ್ಲಿ ರವೀಂದ್ರ ಜಡೇಜಾ ಅನುಪಸ್ಥಿತಿ ಕಾಡುವಂತೆ ಅಕ್ಷರ್ ಮಾಡಿಲ್ಲ.

ಇದನ್ನೂ ಓದಿ: IND vs SL T20: ಈ ಆಟಗಾರನಿಗೆ ತಂಡದಲ್ಲಿ ಒಂದೇ ಒಂದು ಅವಕಾಶ ನೀಡದ ಹಾರ್ದಿಕ್: ಕಾರಣ ಏನು?

ಅಕ್ಷರ್ ಪಟೇಲ್ ಭಾರತ ತಂಡಕ್ಕಾಗಿ ಎಲ್ಲಾ ಮೂರು ಮಾದರಿಗಳಲ್ಲಿ ಕ್ರಿಕೆಟ್ ಆಡಿದ್ದಾರೆ. ಟೀಂ ಇಂಡಿಯಾ ಪರ ಹಲವು ಪಂದ್ಯಗಳನ್ನು ಸ್ವಂತ ಬಲದಿಂದ ಗೆದ್ದಿದ್ದಾರೆ. 8 ಟೆಸ್ಟ್ ಪಂದ್ಯಗಳು, 46 ODIಗಳು ಮತ್ತು 40 T20 ಪಂದ್ಯಗಳನ್ನು ಆಡಿದ್ದಾರೆ. 2022ರ ಟಿ-20 ವಿಶ್ವಕಪ್‌ನಲ್ಲಿ ಭಾರತದ ಪರವಾಗಿ ಆಟವಾಡಿದ್ದರು. ಇವರಿಂದಾಗಿಯೇ ಭಾರತ ತಂಡ ಶ್ರೀಲಂಕಾ ವಿರುದ್ಧದ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News