IND vs ZIM: ಮೊದಲ ಪಂದ್ಯದಲ್ಲಿ ಸೋತಿದ್ದ ಟೀಂ ಇಂಡಿಯಾ, ಜಿಂಬಾಬ್ವೆ ತಂಡದ ವಿರುದ್ಧ ಪುಟಿದೆದ್ದಿದೆ. ಮೊದಲನೇ ಪಂದ್ಯದಲ್ಲಿ ಭಾರತ ತಂಡ ಭಾರಿ ಹೀನಾಯ ಸೋಲು ಕಂಡಿತ್ತು, ಇದೇ ಕಾರಣದಿಂದ ಭಾರತ ಅಭಿಮಾನಿಗಳ ಕೆಂಗಣ್ಣಿಗೆ ಟೀಂ ಇಂಡಿಯಾ ಆಟಗಾರರು ಗುರಿಯಾಗಿದ್ದರು. ಇದೀಗ ಮೊದಲನೇ ಪಂದ್ಯ ಸೋತ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ಹುಡುಗರು ಪುಟಿದೆದ್ದಿದ್ದಾರೆ. ಒಂದಾಂದ ಮೇಲೊಂದರಂತೆ ಎರಡು ಪಂದ್ಯಗಳನ್ನು ಗೆದ್ದು 2-1 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಜಿಂಬಾಬ್ವೆ ಪ್ರವಾಸದಲ್ಲಿ ಟೀಂ ಇಂಡಿಯಾದ ಅಬ್ಬರ ಮುಂದುವರಿದಿದೆ. ಬುಧವಾರ ನಡೆದ ಐದು ಟಿ20 ಸರಣಿಯ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 23 ರನ್‌ಗಳಿಂದ ಜಿಂಬಾಬ್ವೆ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಯಿತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಐದು ಪಂದ್ಯಗಳ ಸರಣಿಯಲ್ಲಿ 2-1 ಅಂಕಗಳಿಂದ ಮುನ್ನಡೆ ಕಾಯ್ದುಕೊಂಡಿದೆ.


ಇದನ್ನೂ ಓದಿ: ಬೌಲಿಂಗ್‌ ಕೋಚ್‌ ರೇಸ್‌ನಲ್ಲಿ ಟೀಂ ಇಂಡಿಯಾದ ದಿಗ್ಗಜ ವೇಗಿಗಳು


ಬುಧವಾರ, ಜಲೈ 10ರಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 182 ರನ್ ಗಳಿಸಿತು. ಶುಭಮನ್ ಗಿಲ್ 49 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಸಿಡಿಸಿ 66 ರನ್‌ ಕಲೆಹಾಕಿ ಅರ್ಧ ಶತಕ ಭಾರಿಸುವಲ್ಲಿ ಯಶಸ್ವಿಯಾದರು. 


183 ರನ್ ಗಳ ಬೃಹತ್ ಗುರಿ ಬೆನ್ನತ್ತಿದ ಜಿಂಬಾಬ್ವೆ ಹುಡುಗರಿಗೆ ಆರಂಭದಲ್ಲೇ ಆಘಾತ ಎದುರಾಯಿತು. ಅವೇಶ್ ಖಾನ್ ಬೀಸಿದ ಬಾಲ್‌ಗೆ ಬ್ಯಾಟ್‌ ಬೀಸಿದ ಜಿಂಬಾಬ್ವೆ ಬ್ಯಾಟ್ಸ್‌ಮೆನ್‌ ಕ್ಯಾಚ್‌ ನೀಡಿ ಫೀಲ್ಡ್‌ನಿಂದ ಹೊರ ನಡೆದಿದ್ದರು. ಮುಂದಿನ ಓವರ್‌ನಲ್ಲಿಯೇ ಖಲೀಲ್ ಅಹ್ಮದ್ ಮತ್ತೊಬ್ಬ ಆರಂಭಿಕ ಆಟಗಾರ ಮರುಮಣಿ ಪೆವಿಲಿಯನ್‌ಗೆ ಕ್ಯಾಚ್ ನೀಡಿ ಔಟಾದರು. ನಂತರ ಕ್ರೀಸ್‌ಗೆ ಎಂಟ್ರಿ ಕೊಟ್ಟ ಬ್ರಿಯಾನ್ ಬೆನೆಟ್ ಅವರನ್ನು ಅವೇಶ್ ಖಾನ್ ಔಟ್ ಮಾಡಿದ್ದರಿಂದ ಜಿಂಬಾಬ್ವೆ 19 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಈ ಸಂದರ್ಭದಲ್ಲಿ ಕ್ರೀಸ್‌ಗೆ ಬಂದ ಡಿಯೋನ್ ಮೈಯರ್ಸ್ ಹಾಗೂ ನಾಯಕ ಸಿಕಂದರ್ ರಾಜಾ ತಂಡಕ್ಕೆ ಆಸರೆಯಾಗುವ ಪ್ರಯತ್ನ ಮಾಡಿದರು. ಇದರೊಂದಿಗೆ ಪವರ್ ಪ್ಲೇನಲ್ಲಿ ಜಿಂಬಾಬ್ವೆ 3 ವಿಕೆಟ್‌ಗೆ 37 ರನ್ ಗಳಿಸಿತು.


ಇದನ್ನೂ ಓದಿ: "ನನ್ನ ಬಹುಮಾನದ ಹಣವನ್ನು ಅವರಿಗೆ ಕೊಡಿ" ಬಿಸಿಸಿಐಗೆ ರಾಹುಲ್‌ ದ್ರಾವಿಡ್‌ ಮನವಿ


ಚೆಂಡನ್ನು ಸ್ವೀಕರಿಸಿದ ವಾಷಿಂಗ್ಟನ್ ಸುಂದರ್ ಅದೇ ಓವರ್‌ನಲ್ಲಿ ಸಿಕಂದರ್ ರಾಜಾ ಮತ್ತು ಜೊನಾಥನ್ ಕ್ಯಾಂಪ್‌ಬೆಲ್ ಅವರನ್ನು ಪೆವಿಲಿಯನ್ ಸೇರಿಸಿದರು. ಇದರಿಂದಾಗಿ ಜಿಂಬಾಬ್ವೆ 39 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭಗಳಲ್ಲಿ ಡಿಯೋನ್ ಮೈಯರ್ಸ್ ಕ್ಲೈವ್ ಮದಂಡೆ ಜೊತೆಗೆ ತಂಡವನ್ನು ಬೆಂಬಲಿಸಿದರು. ವಾಷಿಂಗ್ಟನ್ ಸುಂದರ್ ಆರನೇ ವಿಕೆಟ್‌ಗೆ 77 ರನ್ ಸೇರಿಸಿದ ನಂತರ ಕ್ಲೈವ್ ಮದಂಡೆ ಅವರನ್ನು ಪೆವಿಲಿಯನ್ ಸೇರಿಸಿದರು. ಮತ್ತೊಂದೆಡೆ ಡಿಯೋನ್ ಮೈಯರ್ಸ್ 45 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಡಿಯೋನ್ ಮೈಯರ್ಸ್ ಹೋರಾಟದ ಹೊರತಾಗಿಯೂ ಜಿಂಬಾಬ್ವೆ ಗುರಿ ಹೆಚ್ಚಿದ್ದರಿಂದ ಸೋಲನುಭವಿಸಬೇಕಾಯಿತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ