2022ರ ಟಿ20 ವಿಶ್ವಕಪ್‌ಗೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಟಿ20 ಸರಣಿಯು ಟೀಂ ಇಂಡಿಯಾಕ್ಕೆ ಅತ್ಯಂತ ಮಹತ್ವದ್ದಾಗಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾದ ಕಣ್ಣು ಕೂಡ ದಕ್ಷಿಣ ಆಫ್ರಿಕಾ ವಿರುದ್ಧ ಇತಿಹಾಸ ಬದಲಿಸುವತ್ತ ನೆಟ್ಟಿದೆ. ಉಭಯ ತಂಡಗಳ ನಡುವಿನ ಸರಣಿಯ ಮೊದಲ ಪಂದ್ಯ ಸೆಪ್ಟೆಂಬರ್ 28 ರಂದು ತಿರುವನಂತಪುರದಲ್ಲಿ ನಡೆಯಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Team India: T20 ವಿಶ್ವಕಪ್‌ಗೂ ಮುನ್ನ ಭಾರತೀಯ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್..!


ಟೀಂ ಇಂಡಿಯಾ ಭಾರತದಲ್ಲಿ ಕಳೆದ ನಡೆದ ಹತ್ತು ಟಿ20 ಸರಣಿಗಳಲ್ಲಿ ಸಂಪೂರ್ಣವಾಗಿ ಗೆದ್ದಿದೆ. ಆದರೆ ದಕ್ಷಿಣ ಆಫ್ರಿಕಾವನ್ನು ಸೋಲಿಸುವುದು ಅವರಿಗೆ ಸುಲಭದ ಮಾತಲ್ಲ. ತವರಿನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಒಮ್ಮೆಯೂ ಸೋಲಿಸಿಲ್ಲ. ಒಂದು ವೇಳೆ ಟೀಂ ಇಂಡಿಯಾ ಈ ಸರಣಿಯನ್ನು ಗೆಲ್ಲಬೇಕಾದರೆ ಇತಿಹಾಸವೇ ಬದಲಾಗಬೇಕು. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾಗೆ ಈ ಸರಣಿ ಅತ್ಯಂತ ಮಹತ್ವದ್ದಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿದ್ದು, ಅದೇ ಆಟವನ್ನು ಪುನರಾವರ್ತಿಸಲು ತಂಡ ಬಯಸುತ್ತದೆ.


ಎರಡು ತಂಡಗಳ ನಡುವೆ ಮುಖಾಮುಖಿ ದಾಖಲೆ: ಟೀಂ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಇದುವರೆಗೆ ಒಟ್ಟು 20 ಟಿ20 ಪಂದ್ಯಗಳು ನಡೆದಿದ್ದು, ಅದರಲ್ಲಿ ಟೀಂ ಇಂಡಿಯಾ 11 ಪಂದ್ಯಗಳನ್ನು ಗೆದ್ದಿದ್ದರೆ, ದಕ್ಷಿಣ ಆಫ್ರಿಕಾ 9 ಪಂದ್ಯಗಳನ್ನು ಗೆದ್ದಿದೆ. ಭಾರತದಲ್ಲಿ ಉಭಯ ತಂಡಗಳ ನಡುವೆ ಮೂರು ಟಿ20 ಸರಣಿಗಳು ನಡೆದಿದ್ದು, ಇದರಲ್ಲಿ ದಕ್ಷಿಣ ಆಫ್ರಿಕಾ ಒಂದನ್ನು ಗೆದ್ದು ಎರಡು ಸರಣಿಗಳನ್ನು ಡ್ರಾದಲ್ಲಿ ಅಂತ್ಯಗೊಳಿಸಿದೆ. ಮೊದಲ T20 ಸರಣಿಯನ್ನು 2015 ರಲ್ಲಿ ಆಡಲಾಗಿತ್ತು. ಇದನ್ನು ದಕ್ಷಿಣ ಆಫ್ರಿಕಾ ಗೆದ್ದಿತ್ತು. ನಂತರ 2019 ಮತ್ತು 2022 ರಲ್ಲಿ ಟೈ ಆಗಿತ್ತು.


ಟಿ20 ಸರಣಿಗೆ ಭಾರತ ತಂಡ:


ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿ.ಕೀ), ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್ (ವಿ.ಕೀ), ಆರ್ ಅಶ್ವಿನ್, ಅಕ್ಷರ್ ಪಟೇಲ್, ಶಹಬಾಜ್ ಅಹ್ಮದ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಉಮೇಶ್ ಯಾದವ್, ಹರ್ಷಲ್ ಪಟೇಲ್ , ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ.


ಇದನ್ನೂ ಓದಿ: ಪಂದ್ಯ ಗೆದ್ದ ಕೊಹ್ಲಿ ಮಾಡಿದ್ದೇನು ಗೊತ್ತಾ? ವಿರಾಟ್ ಅವತಾರ ಕಂಡು ಬಿದ್ದು ಬಿದ್ದು ನಕ್ಕ ಜನರು


ಟಿ20 ಸರಣಿಗಾಗಿ ಆಫ್ರಿಕನ್ ತಂಡ


ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ರೆಜಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಏಡನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಎನ್ರಿಕ್ ನಾರ್ಸಿಯಾ, ವೇಯ್ನ್ ಪಾರ್ನೆಲ್, ಡ್ವೇನ್ ಪ್ರಿಟೋರಿಯಸ್, ಕಗಿಸೊ ರಬಾಡ, ರಿಲೆ ಸ್ಹಮ್ಸ್ಸಿ, ಟ್ರಿಸ್ಟನ್ ರೊಸ್ಸೊ ಫಾರ್ಚೂನ್, ಮಾರ್ಕೊ ಯೆನ್ಸನ್, ಎ ಫೆಲುಕ್ವಾಯೊ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.