ಅಯ್ಯಯ್ಯೋ…ಇಂಗ್ಲೆಂಡ್ ನಲ್ಲಿ ಕಳ್ಳತನವಾಯ್ತು ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಬ್ಯಾಗ್, ನಗದು!

ಸಾಮಾಜಿಕ ಮಾಧ್ಯಮದಲ್ಲಿ ಆ ಚರ್ಚೆ ಮುಂದುವರೆಯುತ್ತಿರುವಾಗಲೇ ಭಾರತೀಯ ತಂಡದ ಸದಸ್ಯೆ ತಾನಿಯಾ ಭಾಟಿಯಾ ಸೋಮವಾರ ಟ್ವಿಟ್ಟರ್‌ನಲ್ಲಿ ‘ಲಂಡನ್‌ನಲ್ಲಿರುವ ತನ್ನ ಹೋಟೆಲ್ ಕೊಠಡಿಯಿಂದ ಬ್ಯಾಗ್ ಅನ್ನು ಯಾರೋ ಕದ್ದಿದ್ದಾರೆ’ ಎಂದು ಹೇಳಿದ್ದಾರೆ.

Written by - Bhavishya Shetty | Last Updated : Sep 26, 2022, 07:59 PM IST
    • ಇಂಗ್ಲೆಂಡ್ ನಲ್ಲಿ ಕಳ್ಳತನವಾಯ್ತು ಟೀಂ ಇಂಡಿಯಾದ ಸ್ಟಾರ್ ಆಟಗಾರ್ತಿಯ ಬ್ಯಾಗ್

    • ಹೊಟೇಲ್ ನಲ್ಲಿದ್ದ ಬ್ಯಾಗ್, ಚಿನ್ನ ಕಳ್ಳತನವಾಗಿದೆ

    • ಟ್ವೀಟ್ ಮೂಲಕ ಮಾಹಿತಿ ನೀಡಿದ ತಾನಿಯಾ ಭಾಟಿಯಾ

ಅಯ್ಯಯ್ಯೋ…ಇಂಗ್ಲೆಂಡ್ ನಲ್ಲಿ ಕಳ್ಳತನವಾಯ್ತು ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಬ್ಯಾಗ್, ನಗದು! title=
Tania Bhatia

ಏಕದಿನ ಸರಣಿಯಲ್ಲಿ ಆತಿಥೇಯ ಇಂಗ್ಲೆಂಡ್ ನ್ನು 3-0 ಅಂತರದಿಂದ ಸೋಲಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡವು ತನ್ನ ಇಂಗ್ಲೆಂಡ್ ಪ್ರವಾಸವನ್ನು ವಿಜಯೋತ್ಸವದ ಟಿಪ್ಪಣಿಯಲ್ಲಿ ಕೊನೆಗೊಳಿಸಿದೆ. ಲಾರ್ಡ್ಸ್‌ನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಭಾರತದ ದೀಪ್ತಿ ಶರ್ಮಾ ಅವರು ಇಂಗ್ಲೆಂಡ್‌ನ ಚಾರ್ಲೆಟ್ ಡೀನ್ ಅವರನ್ನು ನಾನ್‌ಸ್ಟ್ರೈಕರ್‌ನ ಕೊನೆಯಲ್ಲಿ ರನೌಟ್ ಮಾಡಿದ ನಂತರ ಸಾಕಷ್ಟು ವಿವಾದಗಳು ಉಂಟಾಗಿವೆ.

ಇದನ್ನೂ ಓದಿ: IND vs AUS: ಆಸ್ಟ್ರೇಲಿಯವನ್ನು ಮಣಿಸಿ ಪಾಕಿಸ್ತಾನವನ್ನು ಹಿಂದಿಕ್ಕಿ ವಿಶ್ವದಾಖಲೆ ಬರೆದ ಭಾರತ

ಆದರೆ ಸಾಮಾಜಿಕ ಮಾಧ್ಯಮದಲ್ಲಿ ಆ ಚರ್ಚೆ ಮುಂದುವರೆಯುತ್ತಿರುವಾಗಲೇ ಭಾರತೀಯ ತಂಡದ ಸದಸ್ಯೆ ತಾನಿಯಾ ಭಾಟಿಯಾ ಸೋಮವಾರ ಟ್ವಿಟ್ಟರ್‌ನಲ್ಲಿ ‘ಲಂಡನ್‌ನಲ್ಲಿರುವ ತನ್ನ ಹೋಟೆಲ್ ಕೊಠಡಿಯಿಂದ ಬ್ಯಾಗ್ ಅನ್ನು ಯಾರೋ ಕದ್ದಿದ್ದಾರೆ’ ಎಂದು ಹೇಳಿದ್ದಾರೆ.

"ಮ್ಯಾರಿಯಟ್ ಹೋಟೆಲ್ ಲಂಡನ್ ಮೈಡಾ ವೇಲ್ ಮ್ಯಾನೇಜ್‌ಮೆಂಟ್‌ನಲ್ಲಿ ಆಘಾತಕ್ಕೊಳಗಾಗಿದ್ದೇನೆ.  ಜೊತೆಗೆ ನಿರಾಶೆಗೊಂಡಿದ್ದೇನೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಭಾಗವಾಗಿ ನಾನು ಇತ್ತೀಚೆಗೆ ಉಳಿದುಕೊಂಡಿದ್ದಾಗ ಯಾರೋ ನನ್ನ ವೈಯಕ್ತಿಕ ಕೋಣೆಗೆ ನುಗ್ಗಿ ನಗದು, ಕಾರ್ಡ್‌ಗಳು, ವಾಚ್ ಮತ್ತು ಆಭರಣಗಳಿರುವ ನನ್ನ ಬ್ಯಾಗ್ ಅನ್ನು ಕದ್ದಿದ್ದಾರೆ. ಅಸುರಕ್ಷಿತ ಭಾವನೆ ಮೂಡಿದೆ" ಎಂದು ಟ್ವೀಟ್ ಮಾಡಿದ್ದಾರೆ.

"ಈ ವಿಷಯದ ತ್ವರಿತ ತನಿಖೆ ಮತ್ತು ಪರಿಹಾರಕ್ಕಾಗಿ ಆಶಿಸುತ್ತಿದ್ದೇನೆ. ಹೋಟೆಲ್ ನಲ್ಲಿ ಇಂತಹ ಭದ್ರತೆಯ ಕೊರತೆಯು ಕಂಡಿರುವುದು ನನಗೆ ಆಶ್ಚರ್ಯಕರವಾಗಿದೆ" ಎಂದು ಅವರು ಹೇಳಿದರು. ಸದ್ಯ ಆಟಗಾರ್ತಿಯ ಟ್ವೀಟ್‌ಗೆ ಹೋಟೆಲ್ ಪ್ರತಿಕ್ರಿಯಿಸಿದ್ದು, ಆಕೆಯ ವಿವರಗಳನ್ನು ಕೇಳಿದೆ.

ಇದನ್ನೂ ಓದಿ: ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ತಂತ್ರದ ಬಗ್ಗೆ ಕೊಹ್ಲಿ ಎನ್ ಹೇಳಿದ್ರು ಗೊತ್ತಾ?

ತಾನಿಯಾ ಅವರು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಭಾಗವಾಗಿದ್ದರು. ಆದರೆ ODI ಸರಣಿಯಲ್ಲಿನ ಯಾವುದೇ ಪಂದ್ಯಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಅವರು ಸೆಪ್ಟೆಂಬರ್ 6 ರಂದು T20I ಆಡಿದ್ದರು. ವಿಕೆಟ್ ಕೀಪರ್-ಬ್ಯಾಟರ್ ಆಗಿ 19 ODI ಮತ್ತು 53 T20I ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News