Ishan Kishan:ಆರಂಭಿಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಆಸ್ಪತ್ರೆಗೆ ದಾಖಲು.. ಏನಾಯ್ತು? ಇಲ್ಲಿದೆ ಮಾಹಿತಿ
Ishan Kishan: ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಸರಣಿ ವಶಪಡಿಸಕೊಂಡ ಖುಷಿಯಲ್ಲಿದ್ದ ಭಾರತ ತಂಡಕ್ಕೆ ದೊಡ್ಡ ಆಘಾತ ತಂದಿದೆ.
ನವದೆಹಲಿ: ಧರ್ಮಶಾಲಾದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಎರಡನೇ ಟಿ20 (T20 series) ಪಂದ್ಯದ ವೇಳೆ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್ (Ishan Kishan) ತಲೆಗೆ ಪೆಟ್ಟು ಬಿದ್ದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಬ್ರೈನ್ ಸ್ಕ್ಯಾನ್ ಮಾಡಲಾಗಿದೆ. ಇದು ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಸರಣಿ ವಶಪಡಿಸಕೊಂಡ ಖುಷಿಯಲ್ಲಿದ್ದ ಭಾರತ ತಂಡಕ್ಕೆ ದೊಡ್ಡ ಆಘಾತ ತಂದಿದೆ.
ಶನಿವಾರದಂದು 15 ಎಸೆತಗಳಲ್ಲಿ 16 ರನ್ ಗಳಿಸಿದ ಕಿಶನ್ ತಲೆಗೆ ನಾಲ್ಕನೇ ಓವರ್‌ನಲ್ಲಿ ಲಹಿರು ಕುಮಾರ ಬೌನ್ಸರ್‌ನಿಂದ ಪೆಟ್ಟಾಯಿತು. ಇದರಿಂದಾಗಿ ತಂಡದ ಪ್ರಮುಖ ಬ್ಯಾಟ್ಸ್‌ಮನ್, ವಿಕೆಟ್ ಕೀಪರ್ ಇಶಾನ್ ಕಿಶನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ: Russia-Ukraine Crisis: ವಿಶ್ವಕಪ್ ನಲ್ಲಿ ರಷ್ಯಾ ಜೊತೆ ಪುಟ್ಬಾಲ್ ಆಡುವುದಿಲ್ಲವೆಂದ ಪೋಲ್ಯಾಂಡ್..!
ಎರಡನೇ ಟಿ20 (India vs Sri Lanka) ಪಂದ್ಯ ನಡೆಯುವ ಸಂದರ್ಭ ಬ್ಯಾಟಿಂಗ್ ಮಾಡುವಾಗ ಬೌನ್ಸರ್ ಚೆಂಡು ಇವರ ತಲೆಗೆ ಬಡಿದ ಕಾರಣ ಪೆಟ್ಟಾಗಿದ್ದು ಹಿಮಾಚಲ ಪ್ರದೇಶದಲ್ಲಿರುವ ಆಸ್ಪತ್ರೆಗೆ ಸೇರಿಲಾಗಿದೆ ಎಂದು ವರದಿಯಾಗಿದೆ.
"ಲಹಿರು ಕುಮಾರ ಬೌನ್ಸರ್‌ನಿಂದ ತಲೆಗೆ ಪೆಟ್ಟಾದ ನಂತರ ಇಶಾನ್ ಕಿಶನ್ ಅವರನ್ನು ಬ್ರೈನ್ ಸ್ಕ್ಯಾನ್‌ಗಾಗಿ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಬಿಸಿಸಿಐ (BCCI) ಮೂಲಗಳು ಪಿಟಿಐಗೆ ತಿಳಿಸಿವೆ ಎಂದು ವರದಿಯಾಗಿದೆ.
ಶ್ರೀಲಂಕಾದ ಬೌಲರ್ ಲಹಿರು ಕುಮಾರ (Lahiru Kumara) ಅವರ ಬೌನ್ಸರ್ ಬಾಲ್ ಅನ್ನು ಸರಿಯಾಗಿ ಅರಿಯುವಲ್ಲಿ ಕಿಶನ್ ವಿಫಲರಾದರು. ಪರಿಣಾಮ ರಭಸವಾದ ಚೆಂಡು ನೇರವಾಗಿ ಅವರ ಹೆಲ್ಮೆಟ್ಗೆ ಬಡಿಯಿತು. ಆಗ ಅವರೇ ಅರೆಕ್ಷಣ ದಂಗಾಗಿ ಹೋದರು. ಈ ವೇಳೆಗೆ ಇಶಾನ್ ಕಿಶನ್ 14 ರನ್ ಹೊಡೆದಿದ್ದರು.
ಪೆಟ್ಟಾದ ತಕ್ಷಣ ಮೈದಾನಕ್ಕೆ ಭಾರತದ ಫಿಸಿಯೋ ಬಂದು ಪರೀಕ್ಷಿಸಿದರು. ಸ್ವಲ್ಪ ಸಮಯ ಬಿಟ್ಟು ಬ್ಯಾಟಿಂಗ್ ಮುಂದುವರೆಸಿದ ಕಿಶನ್ ಹೆಚ್ಚು ರನ್ ಗಳಿಸಲು ಸಾಧ್ಯವಾಗದೆ 16 ರನ್ಗೆ ಕೀಪರ್ಗೆ ಸುಲಭ ಕ್ಯಾಚಿತ್ತು ನಿರ್ಗಮಿಸಿದರು. ಆ ಬಳಿಕ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ: Ind Vs SL : ಕ್ರಿಕೆಟ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ : 2ನೇ T20 ಪಂದ್ಯಕ್ಕೆ ಅಡೆತಡೆ, ಪಂದ್ಯ ರದ್ದಾಗಬಹುದು!
ನಾಯಕ ರೋಹಿತ್ ಶರ್ಮಾ (Rohit Sharma) ಜೊತೆಗೆ ಮಯಾಂಕ್ ಅಗರ್ವಾಲ್ (Mayank Agarwal) ಅಥವಾ ವೆಂಕಟೇಶ್ ಅಯ್ಯರ್ ಬ್ಯಾಟಿಂಗ್ ತೆರೆಯಬಹುದು. ಬ್ಯಾಟರ್‌ಗಳಾದ ರುತುರಾಜ್ ಗಾಯಕ್‌ವಾಡ್ ಮತ್ತು ಸೂರ್ಯಕುಮಾರ್ ಯಾದವ್ (Suryakumar Yadav) ಮತ್ತು ವೇಗಿ ದೀಪಕ್ ಚಹಾರ್ ಈಗಾಗಲೇ ಗಾಯದಿಂದ ಸರಣಿಯಿಂದ ಹೊರಗುಳಿದಿದ್ದಾರೆ.
ಭಾರತ ಈಗಾಗಲೇ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಮತ್ತು ಎರಡನೇ ಪಂದ್ಯಗಳನ್ನು ಕ್ರಮವಾಗಿ ಏಳು ವಿಕೆಟ್ ಮತ್ತು 62 ರನ್‌ಗಳಿಂದ ಗೆದ್ದುಕೊಂಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.