ನವದೆಹಲಿ: ಮೌಂಟ್ ಮೌಂಗನುಯಿಯ ಬೇ ಓವಲ್‌ನಲ್ಲಿ ಭಾನುವಾರ ನಡೆದ ಐದನೇ ಮತ್ತು ಅಂತಿಮ ಟ್ವೆಂಟಿ -20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ನ್ಯೂಜಿಲೆಂಡ್‌ನ್ನು ಏಳು ರನ್‌ಗಳಿಂದ ಸೋಲಿಸಿ ಈಗ ಭಾರತ ಇತಿಹಾಸವನ್ನು ಬರೆದಿದೆ.


COMMERCIAL BREAK
SCROLL TO CONTINUE READING

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡವು ಕೆ.ಎಲ್.ರಾಹುಲ್ 45 ಹಾಗೂ ರೋಹಿತ್ ಶರ್ಮಾ 60 ರನ್ ಗಳ ನೆರವಿನಿಂದ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 163 ರನ್ ಗಳಿಸಿತು.ಇನ್ನೊಂದೆಡೆ ಈ ಗೆಲುವಿನ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡವು 9 ವಿಕೆಟ್ ನಷ್ಟಕ್ಕೆ 156 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ಭಾರತ ತಂಡವು 7 ರನ್ ಗಳ ಗೆಲುವು ಸಾಧಿಸಿತು.



ನ್ಯೂಜಿಲೆಂಡ್ ತಂಡದ ಟಿಮ್ ಸೈಫೆರ್ಟ್ 50 ಹಾಗೂ ರಾಸ್ ಟೇಲರ್  53 ರನ್ ಗಳಿಸಿದರೂ ಕೂಡ ಕೀವಿಸ್ ತಂಡವು ಕೊನೆ ಕ್ಷಣದಲ್ಲಿನ ವಿಕೆಟ್ ಪತನದಿಂದಾಗಿ ಸೋಲನ್ನು ಅನುಭವಿಸಿತು. ಇದರಿಂದಾಗಿ ಭಾರತ ತಂಡವು ಟಿ-20 ಸರಣಿಯನ್ನು 5-0 ಅಂತರದಲ್ಲಿ ಗೆದ್ದಿತು. ಭಾರತ ತಂಡದ ಪರವಾಗಿ ಮಾರಕ ಬೌಲಿಂಗ್ ದಾಳಿ ನಡೆಸಿದ ಜಸ್ಪ್ರೀತ್ ಬುಮ್ರಾ ನಾಲ್ಕು ಓವರ್‌ಗಳ ಅವಧಿಯಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿ ಕೇವಲ 12 ರನ್‌ಗಳನ್ನು ನೀಡಿದರು.