IND vs WI News : ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಹೊಸ ಇತಿಹಾಸ ಸೃಷ್ಟಿಸಿದೆ. 146 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಟೀಂ ಇಂಡಿಯಾ  ವಿಶ್ವದ ಯಾವುದೇ ದೇಶ ಮಾಡದಂತಹ ದಾಖಲೆಯನ್ನು ಮಾಡಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಕೂಡಾ ಇದುವರೆಗೆ ಈ ದಾಖಲೆ ಬರೆಯುವುದು ಸಾಧ್ಯವಾಗಿಲ್ಲ. 


COMMERCIAL BREAK
SCROLL TO CONTINUE READING

ಹೊಸ ಇತಿಹಾಸ ಸೃಷ್ಟಿಸಿದ ಭಾರತ : 
ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 7.54ರ ಬಿರುಸಿನ ರನ್ ರೇಟ್‌ನೊಂದಿಗೆ 2 ವಿಕೆಟ್‌ಗೆ 181 ರನ್ ಗಳಿಸಿದೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 44 ಎಸೆತಗಳಲ್ಲಿ 57 ರನ್ ಗಳಿಸಿದರೆ, ಯಶಸ್ವಿ ಜೈಸ್ವಾಲ್ 30 ಎಸೆತಗಳಲ್ಲಿ 38 ರನ್ ಬಾರಿಸಿದರು. 4 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್  ಮಾಡಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ 34 ಎಸೆತಗಳಲ್ಲಿ 52 ರನ್ ಗಳಿಸಿದರು. ಇಲ್ಲಿಯವರೆಗೆ, 146 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ, ವಿಶ್ವದ ಯಾವುದೇ ತಂಡವು ಅಂತಹ ಅದ್ಭುತ ಸ್ಟ್ರೈಕ್ ರೇಟ್‌ನೊಂದಿಗೆ ಇನ್ನಿಂಗ್ಸ್‌ನಲ್ಲಿ ವೇಗವಾಗಿ ರನ್ ಗಳಿಸುವುದು  ಸಾಧ್ಯವಾಗಿರಲಿಲ್ಲ. 2017 ರಲ್ಲಿ ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯದ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನದ ವಿರುದ್ಧ 7.53 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ ಆಸ್ಟ್ರೇಲಿಯಾ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.


ಇದನ್ನೂ ಓದಿ : ಧೋನಿಯೂ ಮಾಡಲು ಅಸಾಧ್ಯ ಎಂದ ಶ್ರೀಲಂಕಾ ದಿಗ್ಗಜನ ಈ ವಿಶ್ವದಾಖಲೆ ಮುರಿದ ರೋಹಿತ್ ಶರ್ಮಾ!


ಟೆಸ್ಟ್ ಪಂದ್ಯದ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ತಂಡಗಳು (ಕನಿಷ್ಠ 20 ಓವರ್‌ಗಳು) :
1. ಭಾರತ v/s ವೆಸ್ಟ್ ಇಂಡೀಸ್, ಪೋರ್ಟ್ ಆಫ್ ಸ್ಪೇನ್, 2023 - 181/2d (7.54 ರನ್ ರೇಟ್) 
2. ಆಸ್ಟ್ರೇಲಿಯಾ v/s  ಪಾಕಿಸ್ತಾನ, ಸಿಡ್ನಿ, 2017 - 241/2d 
(7.53 ರನ್ ರೇಟ್) 
3. ಇಂಗ್ಲೆಂಡ್ v/s ಪಾಕಿಸ್ತಾನ, ರಾವಲ್ಪಿಂಡಿ, 2022 - 264/7d 
(7.36 ರನ್ ರೇಟ್) 
4. ವೆಸ್ಟ್ ಇಂಡೀಸ್ v/s ಭಾರತ,  ಕಿಂಗ್ ಸ್ಟನ್,  1983 - 173 /6d 
(6.82 ರನ್ ರೇಟ್ )
5. ದಕ್ಷಿಣ ಆಫ್ರಿಕಾ v/s ಜಿಂಬಾಬ್ವೆ, ಕೇಪ್ ಟೌನ್, 2005 - 340/3d (6.80 ರನ್ ರೇಟ್ )


ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ದೇಶ :
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 100 ರನ್ ಗಳಿಸಿದ ವಿಶ್ವದಾಖಲೆಯನ್ನು ಟೀಂ ಇಂಡಿಯಾ ಮಾಡಿದೆ. ಪೋರ್ಟ್ ಆಫ್ ಸ್ಪೇನ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ಕೇವಲ 12.2 ಓವರ್ ಗಳಲ್ಲಿ 100 ರನ್ ಕಲೆ ಹಾಕಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದಕ್ಕಿಂತ ವೇಗವಾಗಿ 100 ರನ್ ಗಳಿಸಿದ ವಿಶ್ವದಾಖಲೆ ಮಾಡಲು ವಿಶ್ವದ ಯಾವುದೇ ತಂಡಕ್ಕೆ ಸಾಧ್ಯವಾಗಿಲ್ಲ. ಈ ಪಟ್ಟಿಯಲ್ಲಿ ಶ್ರೀಲಂಕಾ ತಂಡ ಎರಡನೇ ಸ್ಥಾನದಲ್ಲಿದೆ. ಶ್ರೀಲಂಕಾ 2001 ರ್ಲಿ ಬಾಂಗ್ಲಾದೇಶ ವಿರುದ್ಧ 13.2 ಓವರ್‌ಗಳಲ್ಲಿ 100 ರನ್ ಗಳಿಸುವ ಮೂಲಕ ವಿಶ್ವದಾಖಲೆ ಮಾಡಿತ್ತು.


ಇದನ್ನೂ ಓದಿ :  ಭಾರತದ ಪುರುಷರ ಕ್ರಿಕೆಟ್ ತಂಡಕ್ಕೆ ಮೊದಲ ಬಾರಿ ಮಹಿಳಾ ಕೋಚ್ ನೇಮಕ! ಕನ್ನಡತಿಗೆ ಮಣೆ ಹಾಕಿದ ಸಮಿತಿ


ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ 100 ರನ್ ದಾಖಲೆ  : 
1. ಭಾರತ v/s ವೆಸ್ಟ್ ಇಂಡೀಸ್, ವರ್ಷ 2023 - 12.2 ಓವರ್‌ಗಳಲ್ಲಿ 100 ರನ್
2. ಶ್ರೀಲಂಕಾv/s ಬಾಂಗ್ಲಾದೇಶ, ವರ್ಷ 2001 - 13.2 ಓವರ್‌ಗಳಲ್ಲಿ 100 ರನ್ 3.
3. ಇಂಗ್ಲೆಂಡ್ v/s ದಕ್ಷಿಣ ಆಫ್ರಿಕಾ, ವರ್ಷ 1994 - 13.3 ಓವರ್‌ಗಳಲ್ಲಿ 100 ರನ್ - 
4. ಬಾಂಗ್ಲಾದೇಶ v/s ವೆಸ್ಟ್ ಇಂಡೀಸ್  ವರ್ಷ 2012 -  ರನ್ 13.4
ಓವರ್‌ಗಳಲ್ಲಿ 100 ರನ್ 
5. ಇಂಗ್ಲೆಂಡ್ v/sಪಾಕಿಸ್ತಾನ, ವರ್ಷ 2022 - 13.4 ಓವರ್‌ಗಳಲ್ಲಿ 100 ರನ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.