ಭಾರತ-ಪಾಕ್ ಪಂದ್ಯದಲ್ಲಿ ಥರ್ಡ್ ಅಂಪೈರ್ ವೈಫಲ್ಯ! Team India ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಯ್ತು ಆ ಒಂದು ಎಸೆತ

Cricket News: ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಎಮರ್ಜಿಂಗ್ ಏಷ್ಯಾ ಕಪ್-2023 ರ ಫೈನಲ್‌ ನಲ್ಲಿ ಭಾರತ ತಂಡವು ಪಾಕಿಸ್ತಾನ ಎ ವಿರುದ್ಧ 128 ರನ್‌ ಗಳಿಂದ ಸೋಲನ್ನು ಎದುರಿಸಬೇಕಾಯಿತು

Last Updated : Jul 24, 2023, 07:21 AM IST
    • ಭಾರತ ಎ ತಂಡವು ಪಾಕಿಸ್ತಾನದ ವಿರುದ್ಧ 128 ರನ್‌ ಗಳ ಸೋಲನ್ನು ಎದುರಿಸಬೇಕಾಯಿತು
    • ಅಂಪೈರ್ ನಿರ್ಧಾರವೊಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
    • ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಎಮರ್ಜಿಂಗ್ ಏಷ್ಯಾ ಕಪ್-2023 ರ ಫೈನಲ್‌
ಭಾರತ-ಪಾಕ್ ಪಂದ್ಯದಲ್ಲಿ ಥರ್ಡ್ ಅಂಪೈರ್ ವೈಫಲ್ಯ! Team India ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಯ್ತು ಆ ಒಂದು ಎಸೆತ  title=

Umpire Decision in Emerging Asia Cup Final: ಭಾನುವಾರದಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವು ಉದಯೋನ್ಮುಖ ಏಷ್ಯಾಕಪ್ ಫೈನಲ್‌’ನಲ್ಲಿ ಭಾರಿ ಅಂತರದಿಂದ ಗೆದ್ದಾಗ ಭಾರತೀಯ ಅಭಿಮಾನಿಗಳು ನಿರಾಶೆಗೊಂಡಿದ್ದು ಎಲ್ಲರಿಗೂ ತಿಳಿದಿದೆ. ಉದಯೋನ್ಮುಖ ಏಷ್ಯಾಕಪ್ ಫೈನಲ್-2023 ರಲ್ಲಿ ಭಾರತ ಎ ತಂಡವು ಪಾಕಿಸ್ತಾನದ ವಿರುದ್ಧ 128 ರನ್‌ ಗಳ ಸೋಲನ್ನು ಎದುರಿಸಬೇಕಾಯಿತು. ಇದೀಗ ಇವೆಲ್ಲದರ ಮಧ್ಯೆ ಅಂಪೈರ್ ನಿರ್ಧಾರವೊಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

ಇದನ್ನೂ ಓದಿ: Team Indiaಗೆ ಎಂಟ್ರಿಯಾಗಿ 7 ವರ್ಷವಾದ್ರೂ 33ರ ಹರೆಯದ ಈ ಮಾಂತ್ರಿಕ ಸ್ಪಿನ್ನರ್’ಗೆ ಸಿಕ್ಕಿಲ್ಲ ಟೆಸ್ಟ್ ಆಡುವ ಅವಕಾಶ!

ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಎಮರ್ಜಿಂಗ್ ಏಷ್ಯಾ ಕಪ್-2023 ರ ಫೈನಲ್‌ ನಲ್ಲಿ ಭಾರತ ತಂಡವು ಪಾಕಿಸ್ತಾನ ಎ ವಿರುದ್ಧ 128 ರನ್‌ ಗಳಿಂದ ಸೋಲನ್ನು ಎದುರಿಸಬೇಕಾಯಿತು. ಈ ಪ್ರಶಸ್ತಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಗೆ ಆಹ್ವಾನಿಸಿದ ಪಾಕಿಸ್ತಾನ ತಂಡ 8 ವಿಕೆಟ್‌ ಗೆ 352 ರನ್ ಗಳಿಸಿತು. ಇದಾದ ಬಳಿಕ ಯಶ್ ಧುಲ್ ನಾಯಕತ್ವದ ತಂಡ 40 ಓವರ್ ಗಳಲ್ಲಿ 228 ರನ್ ಗಳಿಗೆ ಆಲೌಟ್ ಆಯಿತು.

ಅಂಪೈರ್ ನಿರ್ಧಾರಕ್ಕೆ ತೀವ್ರ ಟೀಕೆ!

ಇದೀಗ ಅಂಪೈರಿಂಗ್ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಇದಕ್ಕೆ ಸಂಬಂಧಿಸಿದ ಹಲವು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇಂಡಿಯಾ ಎ ಓಪನರ್ ಸಾಯಿ ಸುದರ್ಶನ್ ಅವರು ಇನಿಂಗ್ಸ್‌ ನ 9 ನೇ ಓವರ್‌ ನ ಮೂರನೇ ಎಸೆತದಲ್ಲಿ ಅರ್ಷದ್ ಇಕ್ಬಾಲ್‌ ಗೆ ಔಟ್ ಆದರು. ಮೊಹಮ್ಮದ್ ಹ್ಯಾರಿಸ್ ಕೈಗೆ ಸಾಯಿ ಸುದರ್ಶನ್ ಕ್ಯಾಚ್ ನೀಡಿ ಭಾರತ ತಂಡಕ್ಕೆ ಮೊದಲ ಪೆಟ್ಟು ನೀಡಿದರು. ಈ ಬಗ್ಗೆ ಥರ್ಡ್ ಅಂಪೈರ್ ಬಾಲ್ ಕಾನೂನುಬದ್ಧ ಎಂದು ಘೋಷಿಸಿದರು, ಆದರೆ ಕೆಲವು ಕ್ರಿಕೆಟ್ ಅಭಿಮಾನಿಗಳು ಅದನ್ನು ಟೀಕಿಸಿದ್ದಾರೆ. ನಿಜವಾಗಿ ಅರ್ಷದ್‌ ನ ಕಾಲು ರೇಖೆಯಿಂದ ಹೊರಗಿರುವಂತೆ ಕಾಣುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ಚೆಂಡನ್ನು ನೋ ಬಾಲ್ ಎಂದು ಘೋಷಿಸಬೇಕಿತ್ತು. ಆದರೆ ಹಾಗಾಗಲಿಲ್ಲ ಎಂದು ಹೇಳಲಾಗುತ್ತಿದೆ.

 

353 ರನ್‌ ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡದ ವಿಕೆಟ್‌ ಗಳು ಆಗಾಗ್ಗೆ ಮಧ್ಯಂತರದಲ್ಲಿ ಬೀಳುತ್ತಲೇ ಇದ್ದವು. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಹೊರತುಪಡಿಸಿ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಅಭಿಷೇಕ್ 51 ಎಸೆತಗಳಲ್ಲಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 61 ರನ್ ಗಳಿಸಿದರು. ಅವರಲ್ಲದೆ ನಾಯಕ ಯಶ್ ಧುಲ್ 41 ಎಸೆತಗಳಲ್ಲಿ 4 ಬೌಂಡರಿಗಳ ನೆರವಿನಿಂದ 39 ರನ್ ಸೇರಿಸಿದರು. ಆರಂಭಿಕರಾದ ಸಾಯಿ ಸುದರ್ಶನ್ 29 ರನ್ ಕೊಡುಗೆ ನೀಡಿದರು. ಪಾಕ್ ಪರ ಸುಫಿಯಾನ್ ಮುಕಿಮ್ 10 ಓವರ್ ಗಳಲ್ಲಿ 66 ರನ್ ನೀಡಿ 3 ವಿಕೆಟ್ ಪಡೆದರು. ಮೊಹಮ್ಮದ್ ವಾಸಿಂ ಜೂನಿಯರ್, ಅರ್ಷದ್ ಇಕ್ಬಾಲ್ ಮತ್ತು ಮೆಹ್ರಾನ್ ಮುಮ್ತಾಜ್ 2-2 ವಿಕೆಟ್ ಪಡೆದರು.

ಇದನ್ನೂ ಓದಿ: 13 ವರ್ಷಗಳ ವೃತ್ತಿಬದುಕು ಅಂತ್ಯ: ಟೆಸ್ಟ್ ಸರಣಿ ಮಧ್ಯೆ ಎಲ್ಲಾ ಸ್ವರೂಪದ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ ನಾಯಕ!

ತಾಹಿರ್ ಪಂದ್ಯ ಶ್ರೇಷ್ಠ:

ಇದಕ್ಕೂ ಮೊದಲು ಟಾಸ್ ಗೆದ್ದ ಭಾರತ ಎ ತಂಡದ ನಾಯಕ ಯಶ್ ಧುಲ್ ಪಾಕಿಸ್ತಾನವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಪಾಕಿಸ್ತಾನ ಎ ಪರ ತಯ್ಯಬ್ ತಾಹಿರ್ 71 ಎಸೆತಗಳಲ್ಲಿ 12 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 108 ರನ್ ಗಳಿಸಿದರು. ಈ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಆರಂಭಿಕರಾದ ಸ್ಯಾಮ್ ಅಯೂಬ್ (59) ಮತ್ತು ಸಾಹಿಬ್ಜಾದಾ ಫರ್ಹಾನ್ (65) ಕೂಡ ಅರ್ಧಶತಕ ಗಳಿಸಿದರು. ಇಬ್ಬರೂ ಸೇರಿ 121 ರನ್‌ ಗಳ ಆರಂಭಿಕ ಜೊತೆಯಾಟವನ್ನು ಕೂಡ ಆಡಿದರು. ಭಾರತ ಎ ಪರ ರಾಜವರ್ಧನ್ ಹಂಗೇಕರ್ ಮತ್ತು ರಿಯಾನ್ ಪರಾಗ್ ತಲಾ 2 ವಿಕೆಟ್ ಪಡೆದರು. ಹರ್ಷಿತ್ ರಾಣಾ, ಮಾನವ್ ಸುತಾರ್ ಮತ್ತು ನಿಶಾಂತ್ ಸಿಂಧು ತಲಾ 1 ವಿಕೆಟ್ ಪಡೆದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News