ಕೊಲಂಬೊ: ಐದನೇ ಏಕದಿನ ಪಂದ್ಯದಲ್ಲೂ ಭಾರತ ಜಯಭೇರಿ ಭಾರಿಸುವ ಮೂಲಕ ಸಿಂಹಳಿಯರನ್ನು ಸದೆ ಬಡಿದಿದೆ. 


COMMERCIAL BREAK
SCROLL TO CONTINUE READING

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ಭಾರತಕ್ಕೆ 239 ರನ್ಗಳ ಸವಾಲು ನೀಡಿತು. ಸವಾಲನ್ನು ಎದುರಿಸಿದ ಭಾರತ ಆರಂಭಿಕ ಆಘಾತ ಅನುಭವಿಸಿದರೂ ನಂತರದಲ್ಲಿ ಚೇತರಿಸಿಕೊಂಡಿತು. ವಿರಾಟ್ ಕೊಹ್ಲಿ ಅವರ ಭರ್ಜರಿ ಆಟದ ಮೂಲಕ 46.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 239 ರನ್ ಗಳಿಸಿ ಲಂಕಾ ವಿರುದ್ಧ ಜಯ ಸಾಧಿಸಿತು.


ತಂಡದ ನಾಯಕ ವಿರಾಟ್ ಕೋಹ್ಲಿ ಈ ಪಂದ್ಯದಲ್ಲಿ 110 ರನ್ ಗಳಿಸುವ ಮೂಲಕ ಭರ್ಜರಿ ಆಟವಾಡಿ ತಂಡವನ್ನು ಮುನ್ನಡೆಸಿದರು. ಇದು ಅವರು ಗಳಿಸಿದ 30ನೇ ಶತಕವಾಗಿದೆ. ಇದೇ ಪಂದ್ಯದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 100ನೇ ಸ್ಟಂಪಿಂಗ್ ಮಾಡುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ.


ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಭುವನೇಶ್ವರ್ ಕುಮಾರ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು. ಜಸ್ಪ್ರಿತ್ ಬುಮ್ರಾ ಸರಣಿ ಶ್ರೇಷ್ಠ ಪ್ರಶಸ್ತಿ ಗಳಿಸಿದರು.


ಮತ್ತೆ ಸೆಪ್ಟೆಂಬರ್ 6 ರಂದು ಪ್ರೇಮದಾಸ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಟಿ 20 ಪಂದ್ಯದಲ್ಲಿ ಟೀಮ್ ಇಂಡಿಯಾ ತಂಡವನ್ನು ಎದುರಿಸಲಿದೆ.