ಕೋಲ್ಕತ್ತಾ: ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಿನ್ನೆ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಬೌಲರ್ ಗಳ ಅಮೋಘ ಸಾಮರ್ಥ್ಯದಿಂದಾಗಿ ಭಾರತ 50 ರನ್ ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು.


COMMERCIAL BREAK
SCROLL TO CONTINUE READING

ಐತಿಹಾಸಿಕ ಈಡನ್ ಗಾರ್ಡನ್ ನಲ್ಲಿ ಗುರುವಾರ ನಡೆದ 2ನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕೊಹ್ಲಿ ತಂಡ 252 ರನ್ಗಳ ಸಾಧಾರಣ ಮೊತ್ತಕ್ಕೆ ತನ್ನ ಎಲ್ಲಾ ವಿಕೆಟ್ ಕಳೆದು ಕೊಂಡಿತು. ಈ ಗುರಿಯನ್ನು ಬೆನ್ನತ್ತಿದ ಸ್ಟೀವನ್ ಸ್ಮಿತ್ ತಂಡ 202 ರನ್ ಗಳಿಸಿ ಆಲೌಟ್ ಆಯಿತು. 


ಈ ಪಂದ್ಯದಲ್ಲಿ ಬೌಲರ್ ಗಳ ಅಮೋಘ ಸಾಮರ್ಥ್ಯದಿಂದಾಗಿ ಟೀಂ ಇಂಡಿಯಾ ಜಯ ಸಾಧಿಸಿದೆ ಎಂದರೆ ಹುಸಿಯಾಗಲಾರದು. ಕುಲ್ದೀಪ್ ಯಾದವ್ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರೆ, ಭುವನೇಶ್ವರ್ ಕುಮಾರ್ ಮೂರು ವಿಕೆಟ್ ಹಾಗೂ ಹಾರ್ದಿಕ್ ಪಾಂಡ್ಯ & ಚಾಹಲ್ ತಲಾ 2 ವಿಕೆಟ್ ಕಬಳಿಸಿದರು.


ವಿಶ್ವ ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದವರಲ್ಲಿ ಕುಲದೀಪ್ ಯಾದವ್ 44ನೇ ಯವರು. ಏಕದಿನ ಕ್ರಿಕೆಟ್ ನಲ್ಲಿ ಇದು ಭಾರತದ ಮೂರನೇ ಸಾಧನೆ. ಈ ಹಿಂದೆ ಚೇತನ್ ಶರ್ಮಾ ಮತ್ತು ಕಪಿಲ್ ದೇವ್ ಈ ಸಾಧನೆ ಮಾಡಿದ್ದರು.