ನಾಳೆ IND vs BAN ಮೊದಲ ಏಕದಿನ ಪಂದ್ಯ : ಟೀಂಗೆ ಮರಳಲಿದ್ದಾರೆ ಈ ಸ್ಪೋಟಕ ಬ್ಯಾಟ್ಸ್‌ಮನ್‌ಗಳು
IND vs BAN : ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ನಾಳೆ ಬಾಂಗ್ಲಾದೇಶ ವಿರುದ್ಧ ಮೊದಲ ಏಕದಿನ ಪಂದ್ಯವನ್ನು ಆಡಲಿದೆ. ಈ ಏಕದಿನ ಪಂದ್ಯವು ಮೀರ್‌ಪುರದಲ್ಲಿ ಬೆಳಿಗ್ಗೆ 11:30 ರಿಂದ ನಡೆಯಲಿದೆ. ಆರಂಭಿಕ ಜೋಡಿ ರೋಹಿತ್ ಮತ್ತು ಧವನ್ ಮೊದಲ 10 ಓವರ್‌ಗಳಲ್ಲಿ ತಂಡಕ್ಕೆ ತ್ವರಿತ ಆರಂಭವನ್ನು ನೀಡಬಹುದು ಮತ್ತು ಕೊಹ್ಲಿ ಏಕದಿನದಲ್ಲಿ ಟಿ20 ಫಾರ್ಮ್ ಅನ್ನು ಉಳಿಸಿಕೊಳ್ಳಬಹುದೇ ಅಥವಾ ಇಲ್ಲವೇ ಎಂಬುವುದನ್ನ ಕಾಡು ನೋಡಬೇಕಾಗಿದೆ.
IND vs BAN : ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ನಾಳೆ ಬಾಂಗ್ಲಾದೇಶ ವಿರುದ್ಧ ಮೊದಲ ಏಕದಿನ ಪಂದ್ಯವನ್ನು ಆಡಲಿದೆ. ಈ ಏಕದಿನ ಪಂದ್ಯವು ಮೀರ್‌ಪುರದಲ್ಲಿ ಬೆಳಿಗ್ಗೆ 11:30 ರಿಂದ ನಡೆಯಲಿದೆ. ಆರಂಭಿಕ ಜೋಡಿ ರೋಹಿತ್ ಮತ್ತು ಧವನ್ ಮೊದಲ 10 ಓವರ್‌ಗಳಲ್ಲಿ ತಂಡಕ್ಕೆ ತ್ವರಿತ ಆರಂಭವನ್ನು ನೀಡಬಹುದು ಮತ್ತು ಕೊಹ್ಲಿ ಏಕದಿನದಲ್ಲಿ ಟಿ20 ಫಾರ್ಮ್ ಅನ್ನು ಉಳಿಸಿಕೊಳ್ಳಬಹುದೇ ಅಥವಾ ಇಲ್ಲವೇ ಎಂಬುವುದನ್ನ ಕಾಡು ನೋಡಬೇಕಾಗಿದೆ. ಅಲ್ಲದೆ ಈ ಪಂದ್ಯಕ್ಕೆ ಟೀಂ ಇಂಡಿಯಾಗೆ ಕೆಲ ಸ್ಪೋಟಕ ಬ್ಯಾಟ್ಸ್‌ಮನ್‌ಗಳು ಎಂಟ್ರಿ ನೀಡುತ್ತಿದ್ದಾರೆ. ಅವುರು ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ...
ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ನಾಳೆ ಬಾಂಗ್ಲಾದೇಶ ವಿರುದ್ಧ ಮೊದಲ ಏಕದಿನ ಪಂದ್ಯವನ್ನು ಆಡಲಿದೆ. ಈ ಏಕದಿನ ಪಂದ್ಯವು ಮೀರ್‌ಪುರದಲ್ಲಿ ಬೆಳಿಗ್ಗೆ 11:30 ರಿಂದ ನಡೆಯಲಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ವಾಪಸಾತಿಯೊಂದಿಗೆ ಭಾನುವಾರ ಷೇರೆ ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆಯಲಿರುವ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ಸವಾಲೊಡ್ಡಲು ಭಾರತ ಸಜ್ಜಾಗಿದೆ.
ಇದನ್ನೂ ಓದಿ : IND vs BAN : 'ಹಿಟ್‌ಮ್ಯಾನ್'ನ ಹಳೆಯ ಈ ಸ್ನೇಹಿತ ಬಾಂಗ್ಲಾದೇಶದ ದೊಡ್ಡ ಶತ್ರು!
ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ಕೊಹ್ಲಿ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಿಂದ ಅಗ್ರ ಮೂರು ಬ್ಯಾಟ್ಸ್‌ಮನ್‌ಗಳಾಗಿ ಒಟ್ಟುಗೂಡಲಿದ್ದಾರೆ. 2019 ರ ವಿಶ್ವಕಪ್ ನಂತರ, ಈ ತ್ರಿಮೂರ್ತಿಗಳು ಕೇವಲ 12 ಏಕದಿನ ಪಂದ್ಯಗಳನ್ನು ಒಟ್ಟಿಗೆ ಆಡಿದ್ದಾರೆ. ಆರಂಭಿಕ ಜೋಡಿ ರೋಹಿತ್ ಮತ್ತು ಧವನ್ ಮೊದಲ 10 ಓವರ್‌ಗಳಲ್ಲಿ ತಂಡಕ್ಕೆ ತ್ವರಿತ ಆರಂಭವನ್ನು ನೀಡಬಹುದೇ ಮತ್ತು ಕೊಹ್ಲಿ ಏಕದಿನದಲ್ಲಿ ಟಿ20 ಫಾರ್ಮ್ ಅನ್ನು ಉಳಿಸಿಕೊಳ್ಳಬಹುದೇ ಎಂಬುದು ಕುತೂಹಲಕಾರಿಯಾಗಿದೆ.
ಈ ಪಂದ್ಯದಲ್ಲಿ ಎಲ್ಲರ ಗಮನ ಭಾರತದ ಮಧ್ಯಮ ಕ್ರಮಾಂಕದ ಮೇಲಿರುತ್ತದೆ, ಅದರಲ್ಲೂ ನಾಲ್ಕು, ಐದು ಮತ್ತು ಆರನೇ ಕ್ರಮಾಂಕದಲ್ಲಿ. ರಾಹುಲ್ ತಮ್ಮ ಅದ್ಭುತ ಪ್ರದರ್ಶನದಿಂದ ಮಧ್ಯಮ ಕ್ರಮಾಂಕದಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ ಮತ್ತು ಶ್ರೇಯಸ್ ಅಯ್ಯರ್ ತಮಗೆ ಸಿಕ್ಕ ಅವಕಾಶಗಳಲ್ಲಿ ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ.
ರಿಷಬ್ ಪಂತ್ ಮಧ್ಯಮ ಕ್ರಮಾಂಕದಲ್ಲಿ ಎಡಗೈ ಬ್ಯಾಟ್ಸ್‌ಮನ್ ಆಗಿ ಉತ್ತಮ ಆಯ್ಕೆಯನ್ನು ನೀಡುತ್ತಾರೆ, ಆದರೆ ಅವರ ಕಟ್ಟಾ ಬೆಂಬಲಿಗರು ಸಹ ಬಾಂಗ್ಲಾದೇಶದ ವಿರುದ್ಧ ಅವರ ಬ್ಯಾಟ್‌ನಿಂದ ರನ್ ಬರುವುದನ್ನು ನೋಡಲು ಬಯಸುತ್ತಾರೆ, ಏಕೆಂದರೆ ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಈ ಸರಣಿಯಲ್ಲಿ ಆಡುತ್ತಿಲ್ಲ.
ಬೌಲಿಂಗ್‌ಗೆ ಸಂಬಂಧಿಸಿದಂತೆ, ಸ್ಪಿನ್ ಜೋಡಿಗೆ ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಪ್ರಬಲ ಸ್ಪರ್ಧಿಗಳು. ವೇಗದ ಬೌಲಿಂಗ್‌ನಲ್ಲಿ ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್, ಕುಲದೀಪ್ ಸೇನ್ ಮತ್ತು ಉಮ್ರಾನ್ ಮಲಿಕ್ ಸ್ಪರ್ಧಿಗಳಾಗಿದ್ದಾರೆ. ಗಾಯಗೊಂಡಿರುವ ಮೊಹಮ್ಮದ್ ಶಮಿ ಬದಲಿಗೆ ಮಲಿಕ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಏಕದಿನ ಸರಣಿಯಲ್ಲಿ ಭಾರತ ಯಾವ ರೀತಿಯ ಬೌಲಿಂಗ್ ಆಯ್ಕೆಗಳನ್ನು ಆರಿಸಿಕೊಳ್ಳುತ್ತದೆ ಎಂಬುದು ಕುತೂಹಲಕಾರಿಯಾಗಿದೆ.
ಇದನ್ನೂ ಓದಿ : IND vs BAN: ರೋಹಿತ್ ಶರ್ಮಾ ನಾಯಕತ್ವದಲ್ಲಿ ಈ ಆಟಗಾರನ ಅದೃಷ್ಟ ಖುಲಾಯಿಸಲಿದೆ?!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.