IND vs BAN : 'ಹಿಟ್‌ಮ್ಯಾನ್'ನ ಹಳೆಯ ಈ ಸ್ನೇಹಿತ ಬಾಂಗ್ಲಾದೇಶದ ದೊಡ್ಡ ಶತ್ರು!

India vs Bangladesh, 1st ODI : ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಏಕದಿನ ಪಂದ್ಯ ನಾಳೆ ಮೀರ್‌ಪುರದಲ್ಲಿ ಬೆಳಿಗ್ಗೆ 11:30 ರಿಂದ ನಡೆಯಲಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಡಲಿದ್ದಾರೆ, ಜೊತೆಗೆ ಹಿಟ್‌ಮ್ಯಾನ್‌ನ ಹಳೆಯ ಸ್ನೇಹಿತ ಕೂಡ ಬಾಂಗ್ಲಾದೇಶ ತಂಡಕ್ಕೆ ಶತ್ರುವಾಗಿ ಕಡಲು ಟೀಂಗೆ ಎಂಟ್ರಿ ನೀಡಲು ಸಿದ್ದರಾಗಿದ್ದಾರೆ.

Written by - Channabasava A Kashinakunti | Last Updated : Dec 3, 2022, 03:33 PM IST
  • ಬಾಂಗ್ಲಾದೇಶದ ದೊಡ್ಡ ಶತ್ರು 'ಹಿಟ್‌ಮ್ಯಾನ್'ನ ಹಳೆಯ ಈ ಸ್ನೇಹಿತ
  • ಬಾಂಗ್ಲಾದೇಶ ತಂಡವನ್ನು ಏಕಾಂಗಿಯಾಗಿ ಎದುರಿಸಲಿದ್ದಾರೆ
  • ಮೊದಲ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ಪ್ಲೇಯಿಂಗ್ 11 ಹೀಗಿದೆ
IND vs BAN : 'ಹಿಟ್‌ಮ್ಯಾನ್'ನ ಹಳೆಯ ಈ ಸ್ನೇಹಿತ ಬಾಂಗ್ಲಾದೇಶದ ದೊಡ್ಡ ಶತ್ರು! title=

India vs Bangladesh, 1st ODI : ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಏಕದಿನ ಪಂದ್ಯ ನಾಳೆ ಮೀರ್‌ಪುರದಲ್ಲಿ ಬೆಳಿಗ್ಗೆ 11:30 ರಿಂದ ನಡೆಯಲಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಡಲಿದ್ದಾರೆ, ಜೊತೆಗೆ ಹಿಟ್‌ಮ್ಯಾನ್‌ನ ಹಳೆಯ ಸ್ನೇಹಿತ ಕೂಡ ಬಾಂಗ್ಲಾದೇಶ ತಂಡಕ್ಕೆ ಶತ್ರುವಾಗಿ ಕಡಲು ಟೀಂಗೆ ಎಂಟ್ರಿ ನೀಡಲು ಸಿದ್ದರಾಗಿದ್ದಾರೆ. ಟೀಂ ಇಂಡಿಯಾದ ಈ ಅಪಾಯಕಾರಿ ಆಟಗಾರ ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡಕ್ಕೆ ದೊಡ್ಡ ಶತ್ರು ಕಾಡಿದ್ದರು. ಹಾಗಿದ್ರೆ, ಈ ಆಟಗಾರ ಯಾರು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

ಬಾಂಗ್ಲಾದೇಶದ ದೊಡ್ಡ ಶತ್ರು 'ಹಿಟ್‌ಮ್ಯಾನ್'ನ ಹಳೆಯ ಈ ಸ್ನೇಹಿತ 

ನಾಯಕ ರೋಹಿತ್ ಶರ್ಮಾ ಅವರ ಹಳೆಯ ಸ್ನೇಹಿತ ಮತ್ತು ಓಪನರ್ ಪಾರ್ಟ್ನರ್ ಶಿಖರ್ ಧವನ್ ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಓಪನರ್ ಆಗಿ ಆಡಲಿದ್ದಾರೆ. ಭಾರತದ ಬಿರುಸಿನ ಓಪನಿಂಗ್ ಬ್ಯಾಟ್ಸ್‌ಮನ್, 'ಗಬ್ಬರ್' ಎಂದು ಕರೆಯಲ್ಪಡುವ ಶಿಖರ್ ಧವನ್ ಕ್ರೀಸ್‌ನಲ್ಲಿ ಬ್ಯಾಟಿಂಗ್‌ಗೆ ಬಂದಾಗ, ಅವರು ತಮ್ಮ ಬಿರುಗಾಳಿಯ ಬ್ಯಾಟಿಂಗ್ ನಿಂದ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಲಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಜೋಡಿ ಬಿರುಗಾಳಿ ಸೃಷ್ಟಿಸಲು ಸಿದ್ಧವಾಗಿದೆ.

ಇದನ್ನೂ ಓದಿ : Dwayne Bravo Retirement : ಐಪಿಎಲ್‌ಗೆ ಗುಡ್ ಬೈ ಹೇಳಿದ ಡ್ವೇನ್ ಬ್ರಾವೋ..!

ಬಾಂಗ್ಲಾದೇಶ ತಂಡವನ್ನು ಏಕಾಂಗಿಯಾಗಿ ಎದುರಿಸಲಿದ್ದಾರೆ

ಶಿಖರ್ ಧವನ್ ತನ್ನ ಕಿಲ್ಲರ್ ಬ್ಯಾಟಿಂಗ್ ಮೂಲಕ ಬಾಂಗ್ಲಾದೇಶ ತಂಡವನ್ನು ಏಕಾಂಗಿಯಾಗಿ ಎದುರಿಸಲಿದ್ದಾರೆ. ಶಿಖರ್ ಧವನ್ ಎಡಗೈ ಬ್ಯಾಟ್ಸ್‌ಮನ್ ಆಗಿದ್ದು, ಅವರು ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಓಪನಿಂಗ್ ಮಾಡಲು ಸಿದ್ಧರಾಗಿದ್ದಾರೆ. ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಓಪನರ್ ಆಗಿದ್ದಾರೆ, ಕೆಎಲ್ ರಾಹುಲ್ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುತ್ತಾರೆ. ಟೀಂ ಇಂಡಿಯಾ ಪರ ಶಿಖರ್ ಧವನ್ 34 ಟೆಸ್ಟ್ ಪಂದ್ಯಗಳಲ್ಲಿ 2315 ರನ್, 164 ಏಕದಿನ ಪಂದ್ಯಗಳಲ್ಲಿ 6775 ರನ್ ಮತ್ತು 68 ಟಿ20 ಪಂದ್ಯಗಳಲ್ಲಿ 1759 ರನ್ ಗಳಿಸಿದ್ದಾರೆ.

ಮೊದಲ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ಪ್ಲೇಯಿಂಗ್ 11 ಹೀಗಿದೆ

ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ಉಪನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ದೀಪಕ್ ಚಹಾರ್.

ಭಾರತ vs ಬಾಂಗ್ಲಾದೇಶ ODI ಸರಣಿಯ ಪಂದ್ಯಗಳು (ಭಾರತೀಯ ಕಾಲಮಾನ):

1 ನೇ ODI, ಡಿಸೆಂಬರ್ 4, 11:30 am, ಢಾಕಾ

ಎರಡನೇ ODI, ಡಿಸೆಂಬರ್ 7, 11:30 am, ಢಾಕಾ

ಮೂರನೇ ODI, ಡಿಸೆಂಬರ್ 10, 11:30 am, ಢಾಕಾ

ಇದನ್ನೂ ಓದಿ : IND vs BAN: ರೋಹಿತ್ ಶರ್ಮಾ ನಾಯಕತ್ವದಲ್ಲಿ ಈ ಆಟಗಾರನ ಅದೃಷ್ಟ ಖುಲಾಯಿಸಲಿದೆ?!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News