Ravindra Jadeja Record: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿರುವ 2ನೇ ಟೆಸ್ಟ್‌ನ 4ನೇ ದಿನದ ಆಟ ಅಂತಿಮವಾಗಿ ಪ್ರಾರಂಭವಾಗಿದೆ. ಈ ಸರಣಿಯಲ್ಲಿ ಭಾರತೀಯ ಆಟಗಾರರು ಹೊಸ ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ. ಇಂದು ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾದ ಸ್ಟಾರ್ ಆಟಗಾರರಲ್ಲೊಬ್ಬರಾದ ರವೀಂದ್ರ ಜಡೇಜಾ ಕೇವಲ ಒಂದು ವಿಕೆಟ್ ಪಡೆದಿದ್ದು, ಈ ಮೂಲಕ ಹೊಸದೊಂದು ದಾಖಲೆ ಸೃಷ್ಟಿಸಿದ್ದಾರೆ. ಅವರು ಈಗ ಕಪಿಲ್ ದೇವ್ ಮತ್ತು ರವಿಚಂದ್ರನ್ ಅಶ್ವಿನ್ ಅವರ ಪಟ್ಟಿಗೆ ಸೇರಿದ್ದಾರೆ. 


COMMERCIAL BREAK
SCROLL TO CONTINUE READING

ಕಾನ್ಪುರದಲ್ಲಿ ಒಂದು ವಿಕೆಟ್ ಪಡೆದು ದಾಖಲೆ! 


ಕಾನ್ಪುರ ಟೆಸ್ಟ್ ಸೆಪ್ಟೆಂಬರ್ 27ರಂದು ಪ್ರಾರಂಭವಾಗಿತ್ತು, ಆದರೆ ಮೊದಲ ದಿನವೇ ಮಳೆಯಿಂದ ಪಂದ್ಯವನ್ನು ನಿಲ್ಲಿಸಬೇಕಾಯಿತು. ಇದಾದ ನಂತರ ಎರಡು ಮತ್ತು ಮೂರನೇ ದಿನ ಒಂದೇ ಒಂದು ಚೆಂಡನ್ನು ಆಡಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂದು ಅಂದರೆ ನಾಲ್ಕನೇ ದಿನ ನಿಗದಿತ ಸಮಯಕ್ಕೆ ಪಂದ್ಯ ಆರಂಭಗೊಂಡಿದ್ದು, ಇದಾದ ಬಳಿಕ ಎರಡನೇ ಸೆಷನ್‌ನಲ್ಲಿ ಭಾರತದ ಬೌಲರ್‌ಗಳು ಇಡೀ ಬಾಂಗ್ಲಾದೇಶ ತಂಡವನ್ನು ಔಟ್ ಮಾಡಿದರು. ಬಾಂಗ್ಲಾ ಕೇವಲ 233 ರನ್ ಗಳಿಸಲಷ್ಟೇ ಶಕ್ತವಾಯಿತು. ಇದೇ ವೇಳೆ ರವೀಂದ್ರ ಜಡೇಜಾ ಬಾಂಗ್ಲಾದೇಶದ ಇನಿಂಗ್ಸ್‌ನ ಕೊನೆಯ ವಿಕೆಟ್ ಪಡೆದರು. ಈ ಪಂದ್ಯದಲ್ಲಿ ಅವರು ಕೇವಲ ಒಂದು ವಿಕೆಟ್ ಪಡೆದರು, ಆದರೆ ಇದು ಅವರಿಗೆ ಐತಿಹಾಸಿಕ ಪಂದ್ಯವಾಗಿತ್ತು. ಏಕೆಂದರೆ ಇದು ಅವರ 300ನೇ ಟೆಸ್ಟ್ ವಿಕೆಟ್ ಆಗಿತ್ತು. ಇದೀಗ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್‌ಗಳನ್ನು ಪಡೆದ ಮತ್ತು ಮೂರು ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಭಾರತದ ಅಗ್ರ ಆಟಗಾರರ ಪಟ್ಟಿಗೆ ಸೇರಿಕೊಂಡಿದ್ದಾರೆ. 


ಇದನ್ನೂ ಓದಿ: Rohit Sharma: "ಈ ಕಾರಣದಿಂದಲೇ ನಿವೃತ್ತಿ ಘೋಷಿಸುತ್ತಿದ್ದೇನೆ".. ಸ್ಪಷ್ಟತೆ ನೀಡಿದ ಹಿಟ್ ಮ್ಯಾನ್!


ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಫಲಿತಾಂಶ ಪಡೆಯುವುದು ತುಂಬಾ ಕಷ್ಟದ ಕೆಲಸವಾಗಿದೆ, ಆದರೆ ಭಾರತ ತಂಡವು ಖಂಡಿತವಾಗಿಯೂ ಕೆಲವು ಹೊಸ ದಾಖಲೆಗಳನ್ನು ರಚಿಸುವ ಅವಕಾಶವನ್ನು ಹೊಂದಿದೆ. ಹೇಗಿದ್ದರೂ ಈಗ ಎರಡು ದಿನಗಳ ಆಟ ಮಾತ್ರ ಬಾಕಿ ಉಳಿದಿದೆ. ಇದರಲ್ಲಿ ನಾಲ್ಕು ಇನ್ನಿಂಗ್ಸ್‌ಗಳನ್ನು ಪೂರ್ಣಗೊಳಿಸುವುದು ಅಸಾಧ್ಯ, ಆದರೆ ಮುಂದಿನ ಸರಣಿಗೆ ಅಭ್ಯಾಸ ಮಾಡಲು ಖಂಡಿತವಾಗಿಯೂ ಅವಕಾಶವಿದೆ. ಈ ಪಂದ್ಯದ ಐದು ದಿನಗಳು ಪೂರ್ಣಗೊಂಡಾಗ ಯಾವ್ಯಾವ ಹೊಸ ದಾಖಲೆಗಳು ನಿರ್ಮಾಣವಾಗುತ್ತವೆ ಅನ್ನೋದನ್ನು ಕಾದು ನೋಡಬೇಕಿದೆ. 


ಇದನ್ನೂ ಓದಿ: ಚಿರತೆಯಂತೆ ಹಾರಿ ಒಂದೇ ಕೈಯಲ್ಲಿ ಕ್ಯಾಚ್‌ ಹಿಡಿದ ರೋಹಿತ್‌ ಶರ್ಮಾ...!‌ ಕಣ್ಣು-ಬಾಯಿ ಬಿಟ್ಟು ಶಾಕ್‌ನಲ್ಲಿ ನೋಡಿಯೇ ನಿಂತ ಕೊಹ್ಲಿ..! ವಿಡಿಯೋ ನೋಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.