ಲಂಡನ್: ಭಾರತ ಮತ್ತು ಇಂಗ್ಲೆಂಡ್ ಸರಣಿಗೂ ಕೊರೊನಾ ಬಿಸಿ ತಟ್ಟಿದೆ. ಆಂಗ್ಲರ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಇಂಗ್ಲೆಂಡ್ ನಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿಂದೆ ಇಂಗ್ಲೆಂಡ್ ನ ಕೆಲ ಆಟಗಾರರಿಗೂ ಕೊರೊನಾ ಸೋಂಕು ದೃಢಪಟ್ಟಿತ್ತು. ಸಾಂಕ್ರಾಮಿಕ ರೋಗದ ಭೀತಿಯಲ್ಲಿಯೇ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಗೆ ತೆರಳಿರುವ ಟೀಂ ಇಂಡಿಯಾದ ಇಬ್ಬರು ಆಟಗಾರರಿಗೆ ಸೋಂಕು ದೃಢಪಟ್ಟಿತ್ತು.


ಸೋಂಕು ದೃಢಪಟ್ಟಿದ್ದ ಇಬ್ಬರೂ ಆಟಗಾರರ ಆರೋಗ್ಯವು ಚೆನ್ನಾಗಿದ್ದು, ಈಗಾಗಲೇ ಒಬ್ಬರ ವರದಿ ನೆಗಟಿವ್ ಬಂದಿದೆ. ಮತ್ತೊಬ್ಬ ಆಟಗಾರ ಜುಲೈ 18ಕ್ಕೆ 10 ದಿನಗಳ ಹೋಮ್ ಐಸೋಲೇಷನ್ ಪೂರೈಸಲಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಪ್ರಾರಂಭದಲ್ಲಿ ಇಬ್ಬರೂ ಆಟಗಾರರಲ್ಲಿ ಯಾವುದೇ ರೋಗಲಕ್ಷಣಗಳು ಕಂಡುಬಂದಿರಲಿಲ್ಲ. ಆದರೆ ಕೋವಿಡ್-19(COVID-19) ಪರೀಕ್ಷೆ ನಡೆಸಿದಾಗ ಸಣ್ಣದಾಗಿ ಕೆಮ್ಮು ಮತ್ತು ಶೀತವಿರುವುದು ಕಂಡುಬಂದಿತ್ತು. ಕೊರೊನಾ ದೃಢಪಟ್ಟ ಬಳಿಕ ಈಗಾಗಲೇ ಒಬ್ಬ ಆಟಗಾರನಿಗೆ ನೆಗಟಿವ್ ವರದಿ ಬಂದಿರುವುದರಿಂದ ಯಾವುದೇ ಸಮಸ್ಯೆಯಿಲ್ಲ. ಮತ್ತೊಬ್ಬ ಆಟಗಾರ ಐಸೋಲೇಷನ್ ನಲ್ಲಿದ್ದು ಅಗತ್ಯ ಚಿಕಿತ್ಸೆ ಪಡೆದಕೊಳ್ಳುತ್ತಿದ್ದಾರೆ. ಯಾವುದೇ ರೋಗಲಕ್ಷಣಗಳಿಲ್ಲದಿರುವುದರಿಂದ ಅವರು ಕೂಡ ಶೀಘ್ರವೇ ನೆಗಟಿವ್ ವರದಿಯೊಂದಿಗೆ ತಂಡ ಸೇರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.


ಒದನ್ನೂ ಓದಿ: Tokyo Olympics: ಟೋಕಿಯೋ ಒಲಂಪಿಕ್ಸ್ ನಿಂದ ಹಿಂದಕ್ಕೆ ಸರಿದ ರೋಜರ್ ಫೆಡರರ್


ನ್ಯೂಜಿಲ್ಯಾಂಡ್(New Zealand) ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಬಳಿಕ ವಿರಾಮದಲ್ಲಿರುವ ಟೀಂ ಇಂಡಿಯಾದ ಎಲ್ಲ ಆಟಗಾರರು ಚೆನ್ನಾಗಿದ್ದಾರೆ. ಅವರಿಗೆ ನಿಯಮಿತ ಪರೀಕ್ಷೆ ನಡೆಯುತ್ತಿದೆ. ಸದ್ಯದ ಮಟ್ಟಿಗೆ ಅವರಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದಿಲ್ಲ. ಆದರೆ ನಿಯಮಿತವಾಗಿ ಪರೀಕ್ಷೆ ನಡೆಸುವ ಮೂಲಕ ಅವರ ಆರೋಗ್ಯದ ಮೇಲೆ ನಿಗಾವಹಿಸಿದ್ದೇವೆ. ನಮಗೆ ಆಟಗಾರರ ಆರೋಗ್ಯದ ಸುರಕ್ಷತೆ ಮೊದಲ ಆದ್ಯತೆ. ಹೀಗಾಗಿ ಕಟ್ಟುನಿಟ್ಟಾದ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.


ಟೀಂ ಇಂಡಿಯಾ ಬಿಸಿಸಿಐ(BCCI) ಕೋರಿಕೆ ಮೇರೆಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ) ಏರ್ಪಡಿಸುತ್ತಿರುವ ಕೌಂಟಿ ಚಾಂಪಿಯನ್‌ಶಿಪ್ ಇಲೆವೆನ್ ತಂಡದ ವಿರುದ್ಧ ಜುಲೈ 20 ರಿಂದ 22ರವರೆಗೆ ಅಭ್ಯಾಸ ಪಂದ್ಯವನ್ನಾಡಲಿದೆ. ಈ ಅಭ್ಯಾಸ ಪಂದ್ಯವನ್ನು ನಡೆಸುವಂತೆ ಬಿಸಿಸಿಐ ಇಸಿಬಿಗೆ ವಿನಂತಿಸಿತ್ತು. ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಅಭ್ಯಾಸ ಪಂದ್ಯಗಳಲ್ಲಿ ಆಟಗಾರರು ತಮ್ಮ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಲು ಇದರಿಂದ ಸಹಕಾರಿಯಾಗುತ್ತದೆ ಎಂದು ಬಿಸಿಸಿಐ ಅಭಿಪ್ರಾಯಪಟ್ಟಿತ್ತು.


COMMERCIAL BREAK
SCROLL TO CONTINUE READING

ಒದನ್ನೂ ಓದಿ: Sourav Ganguly: ತೆರೆಗೆ ಬರಲಿದೆ ‘ದಾದಾ’ ಜೀವನಚರಿತ್ರೆ, ನಟ ಯಾರು ಗೊತ್ತಾ..?


ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಕೊನೆಯಲ್ಲಿ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ(Virat Kohli), ಇಂಗ್ಲೆಂಡ್ ವಿರುದ್ಧದ ಸರಣಿಗಿಂತ ಮುಂಚಿತವಾಗಿ ಪ್ರಥಮ ದರ್ಜೆ ಪಂದ್ಯಗಳನ್ನು ಆಡಬೇಕೆಂದು ಬಯಸಿದ್ದರು. ಆದರೆ ಅದಕ್ಕೆ ಅವಕಾಶ ದೊರೆತಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.