India vs England 2nd Test: ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ (India vs England) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೇಗದ ಬೌಲರ್ ಜೋಫ್ರಾ ಆರ್ಚರ್ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಗುರುವಾರ ಈ ಮಾಹಿತಿಯನ್ನು ನೀಡಿದೆ. ಮೊಣಕೈ ಗಾಯದಿಂದಾಗಿ ಶನಿವಾರದಿಂದ ಚೆನ್ನೈನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಆರ್ಚರ್ ಆಡಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗಿದೆ.


COMMERCIAL BREAK
SCROLL TO CONTINUE READING

ಬಲ ಮೊಣಕೈ ನೋವಿನಿಂದಾಗಿ ಜೋಫ್ರಾ ಆರ್ಚರ್ ಶನಿವಾರದಿಂದ ಚೆನ್ನೈ (Chennai) ನಲ್ಲಿ ನಡೆಯಲಿರುವ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡುವುದಿಲ್ಲ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಗುರುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ಈ ಸ್ಥಳದಲ್ಲಿ ನಡೆದ ಮೊದಲ ಟೆಸ್ಟ್ ಸಮಯದಲ್ಲಿ ಜೋಫ್ರಾ ಆರ್ಚರ್ ನೋವಿಗೆ ಒಳಗಾಗಿದ್ದರು. ಪಂದ್ಯವನ್ನು ಇಂಗ್ಲೆಂಡ್ 227 ರನ್ಗಳಿಂದ ಗೆದ್ದುಕೊಂಡಿತು.


ಇಂಗ್ಲೆಂಡ್ (England) ಕ್ರಿಕೆಟ್ ಮಂಡಳಿಯ ಪ್ರಕಾರ, ಜೋಫ್ರಾ ಆರ್ಚರ್ (Jofra Archer) ಅವರನ್ನು ಬಲ ಮೊಣಕೈಗೆ ಹೆಚ್ಚಾಗಿ ನೋವಾಗಿದೆ. ಇದರಿಂದಾಗಿ ಅವರು ಶನಿವಾರದಿಂದ ಚೆನ್ನೈನಲ್ಲಿ ಆರಂಭವಾಗಲಿರುವ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡುವುದಿಲ್ಲ.


ಇದನ್ನೂ ಓದಿ - ಅಜಿಂಕ್ಯಾ ರಹಾನೆ ಬ್ಯಾಟಿಂಗ್ ಫಾರ್ಮ್ ಬಗ್ಗೆ ಪ್ರಶ್ನೆ ಎತ್ತಿದ ಸಂಜಯ್ ಮಂಜ್ರೇಕರ್


ಅದೇ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ನ 227 ರನ್‌ಗಳ ಗೆಲುವಿನ ಸಂದರ್ಭದಲ್ಲಿ, ಅನುಭವಿ ವೇಗದ ಬೌಲರ್ ಬಲ ಮೊಣಕೈಯಲ್ಲಿ ಸಮಸ್ಯೆಯನ್ನು ಅನುಭವಿಸಿದರು. ಜೋಫ್ರಾ ಅವರ ಈ ಸಮಸ್ಯೆ ಹಿಂದಿನ ಯಾವುದೇ ಗಾಯಕ್ಕೆ ಸಂಬಂಧಿಸಿಲ್ಲ ಎಂದು ಇಂಗ್ಲೆಂಡ್ ಹೇಳಿದೆ.ಈ ವೇಗಿ ಅಹಮದಾಬಾದ್‌ನಲ್ಲಿ ನಡೆಯುವ ಮೂರನೇ ಟೆಸ್ಟ್ ಪಂದ್ಯಕ್ಕೆ ಮರಳಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಮಂಡಳಿ ಆಶಿಸಿದೆ.


ಇದನ್ನೂ ಓದಿ - Ind vs Eng: ಚೆನ್ನೈನಲ್ಲಿ ಇತಿಹಾಸ ರಚಿಸಲಿದೆಯೇ Team India


ಆರ್ಚರ್ ನಿರ್ಗಮಿಸಿದ ನಂತರ ಅನುಭವಿ ಸ್ಟುವರ್ಟ್ ಬ್ರಾಡ್ ಅವರನ್ನು ಜೇಮ್ಸ್ ಆಂಡರ್ಸನ್ ಜೊತೆಗೆ ಹನ್ನೊಂದರಲ್ಲಿ ಆಡಲಿದ್ದಾರೆ. ಮೊದಲ ಟೆಸ್ಟ್ ಗೆದ್ದ ನಂತರ ಇಂಗ್ಲೆಂಡ್ ನಾಲ್ಕು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.