Ind vs Eng: ಚೆನ್ನೈನಲ್ಲಿ ಇತಿಹಾಸ ರಚಿಸಲಿದೆಯೇ Team India

ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ 39 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡಿದೆ. ರೋಹಿತ್ ಶರ್ಮಾ 12 ರನ್ ಗಳಿಸಿದ ನಂತರ ಪೆವಿಲಿಯನ್‌ಗೆ ಮರಳಿದ್ದಾರೆ. ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ ಮತ್ತು ರಿಷಭ್ ಪಂತ್ ಅವರಂತಹ ಬ್ಯಾಟ್ಸ್‌ಮನ್‌ಗಳನ್ನು ಭಾರತ ಹೊಂದಿದ್ದು, ಭಾರತಕ್ಕೆ ಗೆಲ್ಲುವ ಶಕ್ತಿ ದಟ್ಟವಾಗಿದೆ.

Written by - Yashaswini V | Last Updated : Feb 9, 2021, 09:05 AM IST
  • ಇಂಗ್ಲೆಂಡ್ ತಂಡವನ್ನು ಸೋಲಿಸಲು ಭಾರತ ಇನ್ನೂ 381 ರನ್ ಗಳಿಸಬೇಕಾಗುತ್ತದೆ
  • ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಆಸಕ್ತಿದಾಯಕ ತಿರುವು ತಲುಪಿದೆ
  • ಟೀಮ್ ಇಂಡಿಯಾಕ್ಕೆ ಇತಿಹಾಸ ಸೃಷ್ಟಿಸಲು ಅವಕಾಶವಿದೆ
Ind vs Eng: ಚೆನ್ನೈನಲ್ಲಿ ಇತಿಹಾಸ ರಚಿಸಲಿದೆಯೇ Team India  title=
India vs England

ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಚೆನ್ನೈ (Chennai) ನಲ್ಲಿ ನಡೆಯುತ್ತಿರುವ ನಾಲ್ಕು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯ (Ind vs Eng) ಆಸಕ್ತಿದಾಯಕ ತಿರುವನ್ನು ತಲುಪಿದೆ. ಗೆಲುವು ಸಾಧಿಸಲು ಇಂಗ್ಲೆಂಡ್ ಭಾರತಕ್ಕೆ 420 ರನ್ ಗುರಿ ನೀಡಿದೆ. ಇಂಗ್ಲೆಂಡ್ ತಂಡವನ್ನು ಸೋಲಿಸಲು ಭಾರತ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 381 ರನ್ ಗಳಿಸಬೇಕಾಗುತ್ತದೆ, ಆದರೆ ಅದು ಅಷ್ಟು ಸುಲಭವಲ್ಲ.

ಚೆನ್ನೈ (Chennai) ನಲ್ಲಿರುವ ಪಿಚ್‌ನಿಂದ ಧೂಳು ಹೆಚ್ಚಾಗುತ್ತಿದೆ. ಹಾಗಾಗಿ ಈ ನೆಲದಲ್ಲಿ ಇಷ್ಟು ದೊಡ್ಡ ಗುರಿ ಸಾಧಿಸುವುದು ಸುಲಭದ ಮಾತಲ್ಲ. ನಾಲ್ಕನೇ ದಿನ 15 ವಿಕೆಟ್‌ಗಳು ಕುಸಿದಿದ್ದು, ಐದನೇ ದಿನ ಭಾರತಕ್ಕೆ 9 ವಿಕೆಟ್‌ಗಳನ್ನು ಉಳಿಸುವುದು ಸುಲಭವಲ್ಲ. ಆದರೆ, ಚೆನ್ನೈನಲ್ಲಿ ಭಾರತ 420 ರನ್ ಗಳಿಸುವ ಗುರಿಯನ್ನು ಸಾಧಿಸಿದರೆ, ಅದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿದೊಡ್ಡ ಚೇಸ್ ಆಗುತ್ತದೆ. ಈ ರೀತಿಯಾಗಿ ಭಾರತವು ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿದೊಡ್ಡ ಟಾರ್ಗೆಟ್ ಚೇಸಿಂಗ್ ತಂಡವಾಗಲಿದೆ, ಇದು ವೆಸ್ಟ್ ಇಂಡೀಸ್‌ನ 17 ವರ್ಷದ ದಾಖಲೆಯನ್ನು ಮುರಿಯಲಿದೆ.

ಇದನ್ನೂ ಓದಿ - WATCH: ಹರ್ಭಜನ್ ಸಿಂಗ್ ಬೌಲಿಂಗ್ ಆಕ್ಷನ್ ಅನುಕರಿಸಿದ ರೋಹಿತ್ ಶರ್ಮಾ !

ಟೆಸ್ಟ್ ಕ್ರಿಕೆಟ್‌ನಲ್ಲಿ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಇಲ್ಲಿಯವರೆಗೆ 418 ಕ್ಕೂ ಹೆಚ್ಚು ಗುರಿಯನ್ನು ಬೆನ್ನಟ್ಟಿಲ್ಲ. ವೆಸ್ಟ್ ಇಂಡೀಸ್ (West Indies) 2003 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೇಂಟ್ ಜಾನ್ಸ್‌ನಲ್ಲಿ ಇದನ್ನು ಮಾಡಿತು. ಭಾರತದ ಬಗ್ಗೆ ಹೇಳುವುದಾದರೆ, 1976 ರಲ್ಲಿ ಪೋರ್ಟ್ ಆಫ್ ಸ್ಪೇನ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 406 ರನ್ ಗಳಿಸಿದ ದಾಖಲೆಯನ್ನು ನಿರ್ಮಿಸಿದರು. ಚೆನ್ನೈನಲ್ಲಿ ಭಾರತದ ದಾಖಲೆಯನ್ನು ನೋಡಿದರೆ, ಅದು ಅವರ ಪರವಾಗಿರುವಂತೆ ತೋರುತ್ತಿದೆ.

2008 ರಲ್ಲಿ ಭಾರತವು ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ 387 ರನ್ ಗಳಿಸುವ ಗುರಿಯನ್ನು ಸಾಧಿಸಿತು. ಆ ಪಂದ್ಯದಲ್ಲಿ ಅನುಭವಿ ಸಚಿನ್ ತೆಂಡೂಲ್ಕರ್ (Sachin Tendulkar) ಒಂದು ಶತಕ ಬಾರಿಸಿದ್ದರು ಮತ್ತು ಈ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆಲ್ಲುವಲ್ಲಿ ಭಾರತೀಯ ತಂಡ ಯಶಸ್ವಿಯಾಗಿದೆ, ಆದರೆ ಈ ಸಮಯದಲ್ಲಿ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 39 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡಿದೆ. ರೋಹಿತ್ ಶರ್ಮಾ ಅವರನ್ನು ಇಂಗ್ಲೆಂಡ್ ಸ್ಪಿನ್ನರ್ ಜ್ಯಾಕ್ ಲೀಚ್ ಬೋಲ್ಡ್ ಮಾಡಿದರು. ರೋಹಿತ್ ಶರ್ಮಾ (Rohit Sharma) 12 ರನ್ ಗಳಿಸಿದ ನಂತರ ಪೆವಿಲಿಯನ್‌ಗೆ ಮರಳಿದ್ದಾರೆ. ವಿರಾಟ್ ಕೊಹ್ಲಿ (Virat Kohli), ಚೇತೇಶ್ವರ ಪೂಜಾರ ಮತ್ತು ರಿಷಭ್ ಪಂತ್ ಅವರಂತಹ ಬ್ಯಾಟ್ಸ್‌ಮನ್‌ಗಳನ್ನು ಭಾರತ ಹೊಂದಿದ್ದು, ಭಾರತಕ್ಕೆ ಗೆಲ್ಲುವ ಶಕ್ತಿ ಹೆಚ್ಚಿದೆ.

ಇದನ್ನೂ ಓದಿ - ಫೆಬ್ರವರಿ 20 ರಿಂದ ವಿಜಯ್ ಹಜಾರೆ ಟೂರ್ನಿಗೆ ಚಾಲನೆ

ಇಂಗ್ಲೆಂಡ್‌ ವಿರುದ್ಧ ಗೆಲುವು ಸಾಧಿಸಲು 90 ಓವರ್‌ಗಳಲ್ಲಿ ಭಾರತಕ್ಕೆ 9 ವಿಕೆಟ್‌ಗಳು ಬೇಕಾಗಿದ್ದವು. ಕೊನೆಯ ದಿನ ಭಾರತ ಪಂದ್ಯವನ್ನು ಗೆಲ್ಲಲು ಇನ್ನೂ 381 ರನ್ ಗಳಿಸಬೇಕಾಗಿದೆ. ಇದಲ್ಲದೆ ಭಾರತಕ್ಕೆ ಡ್ರಾ ಮಾಡಲು ಉತ್ತಮ ಆಯ್ಕೆ ಇರುತ್ತದೆ. ಈ ಪಂದ್ಯದಲ್ಲಿ, ಈ ಪಿಚ್‌ನಲ್ಲಿ 90 ಓವರ್‌ಗಳಲ್ಲಿ 381 ರನ್ ಗಳಿಸುವುದು ತುಂಬಾ ಕಷ್ಟಕರವಾಗಿರುತ್ತದೆ, ಆದ್ದರಿಂದ ಪಂದ್ಯವನ್ನು ಡ್ರಾ ಮಾಡುವುದು ಕೂಡ ಭಾರತಕ್ಕೆ ಉತ್ತಮ ಆಯ್ಕೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News