ನವದೆಹಲಿ: ಮ್ಯಾಂಚೆಸ್ಟರ್‌(Manchester)ನಲ್ಲಿ ಶುಕ್ರವಾರ(ಸೆಪ್ಟೆಂಬರ್ 10) ನಡೆಯಬೇಕಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ 5ನೇ ಮತ್ತು ಅಂತಿಮ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಈ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ECB) ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.


COMMERCIAL BREAK
SCROLL TO CONTINUE READING

ಭಾರತದ ಸಹಾಯಕ(India National Cricket Team)ಭೌತಚಿಕಿತ್ಸಕ ಯೋಗೀಶ್ ಪರ್ಮಾರ್ ಅವರಿಗೆ ಗುರುವಾರ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ECB) ನಡುವೆ ತೀವ್ರ ಚರ್ಚೆ ನಡೆದು ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ಈಗಾಗಲೇ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ 2-1ರ ಸರಣಿ ಮುನ್ನಡೆಯಲ್ಲಿದೆ. 5ನೇ ಟೆಸ್ಟ್ ಪಂದ್ಯ ರದ್ದುಗೊಂಡಿರುವುದರಿಂದ ಕೊಹ್ಲಿ ಬಾಯ್ಸ್ ಸರಣಿ ಗೆಲುವು ದಾಖಲಿಸಿದಂತಾಗಿದೆ.


ಇದನ್ನೂ ಓದಿ: India vs England: ವಿರಾಟ್ ಕೊಹ್ಲಿ ಪ್ರದರ್ಶನದ ಬಗ್ಗೆ ಸಂಜಯ್ ಮಾಂಜ್ರೇಕರ್ ಹೇಳಿದ್ದೇನು ಗೊತ್ತಾ..?


India vs England 5th Test) ರದ್ದಾಗಿರುವುದಕ್ಕೆ ನಾವು ಅಭಿಮಾನಿಗಳು ಮತ್ತು ಪಾಲುದಾರರಿಗೆ ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇವೆ. ಇದು ಹೆಚ್ಚಿನ ನಿರಾಶೆ ಮತ್ತು ಅನಾನುಕೂಲತೆಯನ್ನು ಉಂಟುಮಾಡುತ್ತದೆ ಎಂದು ನಮಗೆ ತಿಳಿದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ’ ಎಂದು ಇಸಿಬಿ ಹೇಳಿದೆ.


ಇದನ್ನೂ ಓದಿ: Richest Indian Cricketer: ವಿರಾಟ್,ಧೋನಿ ಅಲ್ಲ ಈ ಕ್ರಿಕೆಟಿಗ ಭಾರತದ ಅತ್ಯಂತ ಶ್ರೀಮಂತ ಕ್ರಿಕೆಟಿಗ, ಒಂದೂ ಅಂತಾರಾಷ್ಟ್ರೀಯ ಪಂದ್ಯ ಆಡಿಲ್ಲ


ಟೀಂ ಇಂಡಿಯಾದ ಮುಖ್ಯ ಕೋಚ್ ರವಿಶಾಸ್ತ್ರಿಗೆ ಕೊರೊನಾ ದೃಢಪಟ್ಟ ಬೆನ್ನಲ್ಲೇ ಭಾರತದ ಬೌಲಿಂಗ್ ತರಬೇತುದಾರ ಭರತ್ ಅರುಣ್ ಮತ್ತು ಫೀಲ್ಡಿಂಗ್ ತರಬೇತುದಾರ ಆರ್.ಶ್ರೀಧರ್ ಗೆ ಕೊರೊನಾ ಸೋಂಕು ತಗುಲಿತ್ತು.  ಈ ಹಿನ್ನೆಲೆ ಭಾರತ ತಂಡದ ಎಲ್ಲಾ ಆಟಗಾರರಿಗೂ ಪರೀಕ್ಷೆ ನಡೆಸಲಾಗಿತ್ತು. ಗುರುವಾರ ಎಲ್ಲರಿಗೂ ನೆಗೆಟಿವ್ ವರದಿ ಬಂದಿದೆ. ಆದರೆ ಕೊರೊನಾ ಆತಂಕದ ನಡುವೆ ಮೈದಾನಕ್ಕಿಳಿಯುವುದು ಸರಿಯಲ್ಲವೆಂದು ಆಟಗಾರರು ಹಿಂದೇಟು ಹಾಕಿದ್ದಾರಂತೆ. ಹೀಗಾಗಿ ಬಿಸಿಸಿಐ ಮತ್ತು ತಂಡದ ಮ್ಯಾನೇಜ್‌ಮೆಂಟ್ ನಡುವೆ 5ನೇ ಪಂದ್ಯ ರದ್ದುಗೊಳಿಸುವ ಬಗ್ಗೆ ಮಾತುಕತೆಯಾಗಿದೆ ಎಂದು ತಿಳಿದುಬಂದಿದೆ.


ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳಲ್ಲಿ ಭಾರತ 2 ಪಂದ್ಯಗಳನ್ನು ಗೆದ್ದಿದ್ದು, 1 ಪಂದ್ಯದಲ್ಲಿ ಸೋಲು ಕಂಡಿದೆ. ಉಭಯ ತಂಡಗಳ ನಡುವಿನ ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು. ವಿರಾಟ್ ಕೊಹ್ಲಿ ಪಡೆ ಆಂಗ್ಲರ ನೆಲದಲ್ಲಿ ಸ್ಮರಣೀಯ ಸರಣಿ ಗೆಲುವು ದಾಖಲಿಸಿದ ಸಾಧನೆ ಮಾಡಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.