IND Vs ENG : ಭಾರತ ತಂಡ ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಸರಣಿ ಗೆಲ್ಲುವತ್ತ ದೃಷ್ಟಿ ನೆಟ್ಟಿದೆ. ಈ ಭಾರತವು ಬಹಳಷ್ಟು ಅನುಭವಿ ಆಟಗಾರರನ್ನು ಹೊಂದಿದೆ, ಆದರೆ ಕ್ಯಾಪ್ಟನ್ ರೋಹಿತ್ ಶರ್ಮಾ ಏಕದಿನ ಸರಣಿಯಲ್ಲಿ ಬಲಿಷ್ಠ ಆಟಗಾರನೊಬ್ಬನನ್ನು ಮಿಸ್ ಮಾಡಿಕೊಳ್ಳಿತ್ತಿದ್ದರೆ ಎಂದು ಹೇಳಿದ್ದಾರೆ. ಈ ಆಟಗಾರನ ಬೌಲಿಂಗ್ ನಿಂದ ಪಂದ್ಯದ ಹಾದಿಯನ್ನು ತಪ್ಪಿಸುವ ಕಲೆ ಇದೆ. ಹಾಗಿದ್ರೆ ಈ ಆಟಗಾರ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ..


COMMERCIAL BREAK
SCROLL TO CONTINUE READING

ಈ ಆಟಗಾರನನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ರೋಹಿತ್


ಟೀಂ ಇಂಡಿಯಾ ಸೂಪರ್ ಸ್ಟಾರ್ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಗಾಯದ ಸಮಸ್ಯೆಯಿಂದಾಗಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಆಡುತ್ತಿಲ್ಲ. ರಾಹುಲ್ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಯಾವುದೇ ಪಿಚ್‌ನಲ್ಲಿ ರನ್ ಗಳಿಸುವ ಸಾಮರ್ಥ್ಯ ರಾಹುಲ್ ಗಿದೆ. ರಾಹುಲ್ ತಮ್ಮ ಬ್ಯಾಟ್‌ನ ಬಲದಿಂದ ವಿಭಿನ್ನ ಹೆಸರು ಗಳಿಸಿದ್ದಾರೆ. ಟೀಂ ಇಂಡಿಯಾದ ಬಿಗ್ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.


ಇದನ್ನೂ ಓದಿ : ಭಾರತ-ಇಂಗ್ಲೆಂಡ್‌ ಪಂದ್ಯ: ನಾಲ್ವರು ಆಲ್‌ರೌಂಡರ್‌ಗಳಲ್ಲಿ ಯಾರಾಗ್ತಾರೆ ಮ್ಯಾಚ್‌ ವಿನ್ನರ್‌?


ರೋಹಿತ್ ಜೊತೆ ಮೋಡಿ ಮಾಡಿದ ಹಿಟ್ ಜೋಡಿ


ರೋಹಿತ್ ಶರ್ಮಾ ಜೊತೆ ಕೆಎಲ್ ರಾಹುಲ್ ಓಪನರ್ ಆಗಿ ಬಂದು  ಟೀಂ ಇಂಡಿಯಾಗೆ ಹಲವು ಪಂದ್ಯಗಳನ್ನು ಗೆದ್ದಿದ್ದಾರೆ. ಇಬ್ಬರೂ ಬ್ಯಾಟ್ಸ್‌ಮನ್‌ಗಳು ವಿಕೆಟ್‌ಗಳ ನಡುವೆ ಅದ್ಭುತವಾಗಿ ಪ್ರದರ್ಶನ ನೀಡುತ್ತಾರೆ. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಪರಸ್ಪರರ ಆಟವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ಚಾಣಾಕ್ಷತೆ ಹೊಂದಿದ್ದಾರೆ. ರಾಹುಲ್ ಟೀಂ ಇಂಡಿಯಾ ಪರವಾಗಿ ಎಲ್ಲಾ ಮೂರು ಸ್ವರೂಪಗಳಲ್ಲಿ ಹಿಟ್ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ. ಕೆಎಲ್ ರಾಹುಲ್ ಲಾಂಗ್ ಸಿಕ್ಸರ್ ಬಾರಿಸುವುದರಲ್ಲಿ ಫೇಮಸ್. ರೋಹಿತ್ ಶರ್ಮಾ ಅವರೊಂದಿಗೆ ಹಿಟ್ ಓಪನಿಂಗ್ ಜೋಡಿಯಾಗಿದ್ದಾರೆ, ಆದರೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ರೋಹಿತ್ ಜೊತೆಯಾಗಿ ರಾಹುಲ್ ನೋಡುವ ಅವಕಾಶ ಅಭಿಮಾನಿಗಳಿಗಿಲ್ಲ.


 ಪಂದ್ಯಗಳನ್ನು ಗೆದ್ದು ಬಿಗಿದ ಟೀಂ ಇಂಡಿಯಾ


ಕೆಎಲ್ ರಾಹುಲ್ ಭಾರತಕ್ಕಾಗಿ ಎಲ್ಲಾ ಮೂರು ಮಾದರಿಗಳನ್ನು ಆಡಿದ್ದಾರೆ. ಭಾರತದ ಪರ 43 ಟೆಸ್ಟ್ ಪಂದ್ಯಗಳಲ್ಲಿ 2547 ರನ್, 42 ODIಗಳಲ್ಲಿ 1634 ರನ್ ಮತ್ತು 56 ಟಿ20 ಪಂದ್ಯಗಳಲ್ಲಿ 1861 ರನ್ ಗಳಿಸಿದ್ದಾರೆ. ರಾಹುಲ್ ನಾಯಕತ್ವದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ಐಪಿಎಲ್ 2022 ರಲ್ಲಿ ಪ್ಲೇಆಫ್ ತಲುಪಿತ್ತು. ಐಪಿಎಲ್ 2022 ರಲ್ಲಿ ರಾಹುಲ್ ಮೂರು ಅತ್ಯುತ್ತಮ ಶತಕಗಳನ್ನು ಸಿಡಿಸಿದ್ದಾರೆ.


ಇದನ್ನೂ ಓದಿ : IND vs ENG, 1st ODI : ಮೊದಲ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ Playing 11 ನಲ್ಲಿ ಭಾರಿ ಬದಲಾವಣೆ!


3 ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ಪ್ಲೇಯಿಂಗ್ 11


ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ ಶಮಿ ಕೃಷ್ಣ, ಪ್ರಣಂದ್ ಕೃಷ್ಣ , ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ