ನವದೆಹಲಿ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯ ಅತ್ಯಂತ ರೋಚಕವಾಗಿ ನಡೆಯುತ್ತಿದೆ. ಮೊದಲ 3 ದಿನ ಭಾರತ ತಂಡ ಉತ್ತಮ ಆಟ ಪ್ರದರ್ಶಿಸಿತು. ಪಂದ್ಯದ 3ನೇ ದಿನದಂದು ವಿರಾಟ್ ಕೊಹ್ಲಿ ಮತ್ತು ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋ ನಡುವೆ ಮಾತಿನ ಚಕಮಕಿ ನಡೆದಿದ್ದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ. ಆಕ್ರಮಣಶೀಲತೆಗೆ ಹೆಸರುವಾಸಿಯಾಗಿರುವ ಕಿಂಗ್ ಕೊಹ್ಲಿ ಇಂಗ್ಲೆಂಡ್ ಆಟಗಾರನಿಗೆ ಬಾಯಿ ಮುಚ್ಕೊಂಡು ಆಡುವಂತೆ ಖಡಕ್ ಸೂಚನೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಲೈವ್‍ನಲ್ಲಿ ಮಾತಿನ ಚಕಮಕಿ ನಡೆದಿದೆ


ಪಂದ್ಯದ 32ನೇ ಓವರ್‍ನಲ್ಲಿ ಇಂಗ್ಲೆಂಡ್ 3 ವಿಕೆಟ್ ಕಳೆದುಕೊಂಡು 97 ರನ್ ಗಳಿಸಿತ್ತು. ಈ ವೇಳೆ ಜಾನಿ ಬೈರ್‌ಸ್ಟೋವ್ ಕೇವಲ 13 ರನ್ ಗಳಿಸಿ ಆಡುತ್ತಿದ್ದರು. ಈ ಹಂತದಲ್ಲಿಯೇ ವಿರಾಟ್ ಮತ್ತು ಬೈರ್‌ಸ್ಟೋವ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಇಬ್ಬರ ನಡುವಿನ ಮುಖಾಮುಖಿ ಮಾತುಕತೆ ಲವ್‍ನಲ್ಲಿ ಸೆರೆಯಾಗಿದೆ. ಬೈರ್‍ಸ್ಟೋವ್ ಬಳಿಗೆ ಹೋದ ವಿರಾಟ್ ಕೊಹ್ಲಿ ‘ಏನು ಮಾಡಬೇಕೆಂದು ನನಗೆ ಹೇಳಬೇಡ, ಬಾಯಿ ಮುಚ್ಕೊಂಡು ಬ್ಯಾಟ್ ಮಾಡು’ ಅಂತಾ ಹೇಳಿದ್ದಾರೆ.


ಇದನ್ನೂ ಓದಿ: MS Dhoni: ಎಂ.ಎಸ್.ಧೋನಿ ಮೊಣಕಾಲು ನೋವಿಗೆ 40 ರೂ. ಚಿಕಿತ್ಸೆ..!


ಈ ವೇಳೆ ಇಂಗ್ಲೆಂಡ್ ಆಟಗಾರನು ಸಹ ಕೊಹ್ಲಿ ಜೊತೆಗೆ ವಾಗ್ವಾದ ನಡೆಸಿದ್ದಾನೆ. ಬಳಿಕ ಅಂಪೈರ್ ಮಧ್ಯ ಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸಿದ್ದಾರೆ. ಉಭಯ ಆಟಗಾರರ ನಡುವಿನ ಮಾತಿನ ಚಕಮಕಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.


ಕೊಹ್ಲಿ ಅದ್ಭುತ ಕ್ಯಾಚ್ ಪಡೆದರು


IND vs ENG : ಟೀಂ ಇಂಡಿಯಾಗೆ ಮರಳಿದ ಈ ಲೆಜೆಂಡರಿ ಬ್ಯಾಟ್ಸ್‌ಮನ್!


ಸ್ಪಷ್ಟನೆ ನೀಡಿದ ಆಟಗಾರರು


ಪಂದ್ಯದ ಬಳಿಕ ಜಾನಿ ಬೈರ್‌ಸ್ಟೋವ್ ಅವರು ಕೊಹ್ಲಿಯನ್ನು ಡಿನ್ನರ್‌ಗೆ ಆಹ್ವಾನಿಸಲಿಲ್ಲವೆಂದು ಬಹಿರಂಗಪಡಿಸಿದ್ದಾರೆ. ಹೀಗಾಗಿ ಮೈದಾನದಲ್ಲಿ ನಮ್ಮಿಬ್ಬರ ನಡುವೆ ಚರ್ಚೆ ನಡೆದಿತ್ತು, ಆದರೆ ಈಗ ನಮ್ಮಿಬ್ಬರ ನಡುವೆ ಎಲ್ಲವೂ ಸರಿಯಿದೆ. ಕಳೆದ 10 ವರ್ಷಗಳಿಂದ ನಾವಿಬ್ಬರೂ ಪರಸ್ಪರ ವಿರುದ್ಧವಾಗಿ ಆಡುತ್ತಿದ್ದೇವೆ. ನಾವು ಶೀಘ್ರದಲ್ಲೇ ಒಟ್ಟಿಗೆ ಊಟ ಮಾಡುವುದನ್ನು ನೀವು ನೋಡುತ್ತೀರಿ. ಇದರ ಬಗ್ಗೆ ನೀವು ಚಿಂತಿಸಬೇಕಿಲ್ಲವೆಂದು ಕ್ರಿಕೆಟ್ ಅಭಿಮಾನಿಗಳಿಗೆ ಇಬ್ಬರು ಆಟಗಾರರು ಸ್ಪಷ್ಟನೆ ನೀಡಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ