IND vs NZ : ಮೊದಲ ಟಿ20 ರದ್ದು, ಆದರೂ ನ್ಯೂಜಿಲೆಂಡ್‌ಗೆ ಸವಾಲೆಸೆದ ಪಾಂಡ್ಯ!
ನಿಯಮಿತ ನಾಯಕ ರೋಹಿತ್ ಶರ್ಮಾ ಬದಲಿಗೆ ಮೂರು ಪಂದ್ಯಗಳ ಟಿ 20 ಸರಣಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವ ಹಾರ್ದಿಕ್ ಪಾಂಡ್ಯ, ಹಿಂದಿನ ಫಲಿತಾಂಶಗಳ ಬಗ್ಗೆ ಯೋಚಿಸುವುದರಲ್ಲಿ ಭಾರತ ತಂಡಕ್ಕೆ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ.
IND vs NZ, 1st T20 : ವೆಲ್ಲಿಂಗ್ಟನ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ 20 ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ನಿಯಮಿತ ನಾಯಕ ರೋಹಿತ್ ಶರ್ಮಾ ಬದಲಿಗೆ ಮೂರು ಪಂದ್ಯಗಳ ಟಿ 20 ಸರಣಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವ ಹಾರ್ದಿಕ್ ಪಾಂಡ್ಯ, ಹಿಂದಿನ ಫಲಿತಾಂಶಗಳ ಬಗ್ಗೆ ಯೋಚಿಸುವುದರಲ್ಲಿ ಭಾರತ ತಂಡಕ್ಕೆ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ.
ನ್ಯೂಜಿಲೆಂಡ್‌ಗೆ ಸವಾಲು ಹಾಕಿದ ಪಾಂಡ್ಯ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ, 'ನಮ್ಮ ಆಟಗಾರರು ವಯಸ್ಸಿನಲ್ಲಿ ಚಿಕ್ಕವರಾಗಿದ್ದರೂ ಅನುಭವದ ದೃಷ್ಟಿಯಿಂದಲ್ಲ. ಅವರು ಸಾಕಷ್ಟು ಐಪಿಎಲ್ ಆಡಿದ್ದಾರೆ ಮತ್ತು ಸಾಕಷ್ಟು ಅಂತಾರಾಷ್ಟ್ರೀಯ ಪಂದ್ಯಗಳನ್ನೂ ಆಡಿದ್ದಾರೆ. ನನ್ನ ಪ್ರಕಾರ ಇಂದಿನ ಯುವಕರು ಹೆಚ್ಚು ಕ್ರಿಕೆಟ್ ಆಡುವುದಿಲ್ಲ ಎಂಬ ಭಯವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : India-New Zealand T20I: ಭಾರತ-ನ್ಯೂಜಿಲ್ಯಾಂಡ್ ಟಿ20 ಮೊದಲ ಪಂದ್ಯವೇ ಮಳೆಗೆ ಆಹುತಿ!
ಹೊಸ ಆಟಗಾರರಿಗೆ ಅವಕಾಶ
ಇನ್ನು ಮುಂದುವರೆದು ಮಾತನಾಡಿದ ಪಾಂಡ್ಯ, "ಪರಿಸ್ಥಿತಿ ಅಗತ್ಯವಿದ್ದಲ್ಲಿ, ನಾನು ಮತ್ತು ನಮ್ಮ ಅತ್ಯಂತ ಅನುಭವಿ ಆಟಗಾರರು ವಿಭಿನ್ನ ಪಾತ್ರಗಳನ್ನು ನಿರ್ವಹಿಸಲು ಸಿದ್ಧರಿದ್ದಾರೆ, ಆದರೆ ಈ ಪ್ರವಾಸವು ಹೊಸ ಆಟಗಾರರಿಗೆ ಹೆಚ್ಚಿನ ಸ್ಪಷ್ಟತೆ, ಅವಕಾಶಗಳು ಮತ್ತು ತಮ್ಮನ್ನು ತಾವು ವ್ಯಕ್ತಪಡಿಸಲು ಅವಕಾಶವನ್ನು ನೀಡುತ್ತದೆ" ಎಂದು ಹೇಳಿದರು.
'ನಾವು ಈಗ ಎದುರು ನೋಡುತ್ತಿದ್ದೇವೆ'
ಇನ್ನೂ ಮುಂದುವರೆದು ಮಾತನಾಡಿದ ಹಾರ್ದಿಕ್, 'ಟಿ20 ವಿಶ್ವಕಪ್ ಮುಕ್ತಾಯವಾಗಿದೆ. ಇದರಿಂದ ನಮಗೆ ನಿರಾಶೆಯಾಗಿದೆ. ಆದರೆ, ಆಗಿ ಹೋಗಿರುವುದನ್ನ ಬದಲಾಯಿಸಲು ಸಾಧ್ಯವಿಲ್ಲ. ನಾವು ಈಗ ಭವಿಷ್ಯದ ಬಗ್ಗೆ, ಈ ಸರಣಿಯ ಬಗ್ಗೆ ಯೋಚಿಸುತ್ತಿದ್ದೇವೆ. ಮೂರು ಪಂದ್ಯಗಳ ಟಿ20 ಸರಣಿಯ ನಂತರ, ಅದೇ ಸಂಖ್ಯೆಯ ODI ಪಂದ್ಯಗಳನ್ನು ಆಡಲಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಮೊಹಮ್ಮದ್ ರಿಜ್ವಾನ್ ವಿಶ್ವ ದಾಖಲೆ ಮೇಲೆ SuryaKumar Yadav ಕಣ್ಣು! ಈ ರೆಕಾರ್ಡ್ ನಿರ್ಮಿಸ್ತಾರಾ ಮಿ.360?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.