SuryaKumar Yadav Record: ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ. ಈ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ದೊಡ್ಡ ದಾಖಲೆ ಮಾಡುವ ಅವಕಾಶ ಪಡೆದಿದ್ದಾರೆ. ಸೂರ್ಯಕುಮಾರ್ ಈ ವರ್ಷ ಟಿ20 ಅಂತರಾಷ್ಟ್ರೀಯ 29 ಪಂದ್ಯಗಳಲ್ಲಿ 1040 ರನ್ ಗಳಿಸಿದ್ದಾರೆ. ಈ ಮೂಲಕ ಅವರು ಕ್ಯಾಲೆಂಡರ್ ವರ್ಷದಲ್ಲಿ ಹೆಚ್ಚು ರನ್ ದಾಖಲಿಸುವ ಅವಕಾಶವನ್ನು ಹೊಂದಿದ್ದಾರೆ.
ಇದನ್ನೂ ಓದಿ: IND vs NZ T20I: ಟೀಂ ಇಂಡಿಯಾಗೆ ಸಿಂಹಸ್ವಪ್ನವಾಗಬಹುದು ನ್ಯೂಜಿಲ್ಯಾಂಡ್ ನ ಈ ಮೂವರು ಆಟಗಾರರು!
ಒಂದು ಕ್ಯಾಲೆಂಡರ್ ವರ್ಷದಲ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಹೆಸರಿನಲ್ಲಿದೆ. ರಿಜ್ವಾನ್ 2021 ರಲ್ಲಿ 29 ಪಂದ್ಯಗಳಲ್ಲಿ 134.89 ಸ್ಟ್ರೈಕ್ ರೇಟ್ ಮತ್ತು 73.66 ರ ಸರಾಸರಿಯಲ್ಲಿ 1326 ರನ್ ಬಾರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ಈ ದಾಖಲೆಯನ್ನು ಸಾಧಿಸಲು ಕೇವಲ 286 ರನ್ಗಳ ಅಂತರದಲ್ಲಿದ್ದಾರೆ.
ವಿಶ್ವದ ನಂಬರ್ ಒನ್ ಟಿ20 ಬ್ಯಾಟ್ಸ್ ಮನ್ ಸೂರ್ಯಕುಮಾರ್ ಈ ವರ್ಷ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಸಾಧಾರಣ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಅವರು ಕೇವಲ 29 ಪಂದ್ಯಗಳಲ್ಲಿ 1040 ರನ್ ಗಳಿಸಿರುವುದು ಇಲ್ಲಿ ಗಮನಿಸಬೇಕಾದ ಸಂಗತಿ. ಅವರ ಸ್ಟ್ರೈಕ್ ರೇಟ್ 185.71 ಆಗಿತ್ತು. ಈ ವರ್ಷ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 43.33 ಸರಾಸರಿಯಲ್ಲಿ ಸ್ಕೋರ್ ಮಾಡಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಒಂಬತ್ತು ಅರ್ಧಶತಕಗಳು ಸೇರಿವೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸೂರ್ಯಕುಮಾರ್ ಇಂಗ್ಲೆಂಡ್ ವಿರುದ್ಧ ಸಿಡಿಸಿದ ಏಕೈಕ ಶತಕ ಅದಾಗಿತ್ತು. ಈ ವರ್ಷ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಕ್ಯಾಲೆಂಡರ್ ವರ್ಷದಲ್ಲಿ 1000 T20 ರನ್ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್ಮನ್:
ಒಂದು ಕ್ಯಾಲೆಂಡರ್ ವರ್ಷದಲ್ಲಿ ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 1000 ರನ್ ಪೂರೈಸಿದ ಭಾರತದ ಮೊದಲ ಬ್ಯಾಟ್ಸ್ಮನ್ ಕೂಡ ಸೂರ್ಯಕುಮಾರ್. ಸೂರ್ಯನ ನಂತರ, ಈ ವರ್ಷ T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಲ್ಲಿ ರಿಜ್ವಾನ್ ಹೆಸರು ಬಂದಿದೆ. ರಿಜ್ವಾನ್ ಈ ವರ್ಷ 25 ಪಂದ್ಯಗಳಲ್ಲಿ 45.27 ಸರಾಸರಿ ಮತ್ತು 122.96 ಸ್ಟ್ರೈಕ್ ರೇಟ್ನಲ್ಲಿ 996 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 10 ಅರ್ಧಶತಕಗಳನ್ನು ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಈ ವರ್ಷ 20 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 55.78 ಸರಾಸರಿ ಮತ್ತು 138.23 ಸ್ಟ್ರೈಕ್ ರೇಟ್ನಲ್ಲಿ 781 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಎಂಟು ಅರ್ಧ ಶತಕಗಳು ಸೇರಿವೆ.
ಸೂರ್ಯಕುಮಾರ್ ಈ ಸರಣಿಯಲ್ಲಿ 286 ರನ್ ಗಳಿಸಬೇಕಾಗಿದೆ. ಸದ್ಯ ಮೂರು ಅವಕಾಶಗಳು ಸೂರ್ಯ ಅವರಿಗೆ ಇದೆ. ಇದು ಭಾರತಕ್ಕೆ ಈ ವರ್ಷದ ಕೊನೆಯ ಟಿ20 ಸರಣಿಯಾಗಿದೆ. ಸೂರ್ಯಕುಮಾರ್ ಈ ಸರಣಿಯ ಸಂಪೂರ್ಣ ಲಾಭವನ್ನು ಪಡೆಯಲು ಬಯಸಿದ್ದಾರೆ.
ಇತ್ತೀಚೆಗಿನ ಟಿ20 ವಿಶ್ವಕಪ್ನಲ್ಲೂ ಸೂರ್ಯಕುಮಾರ್ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಅವರು ಆರು ಪಂದ್ಯಗಳಲ್ಲಿ 189.68 ಸ್ಟ್ರೈಕ್ ರೇಟ್ನಲ್ಲಿ 239 ರನ್ ಗಳಿಸಿದ್ದು, ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.
ವಿಶ್ವದ ನಂಬರ್ ಒನ್ ಟಿ20 ಬ್ಯಾಟ್ಸ್ ಮನ್ ಸೂರ್ಯಕುಮಾರ್ ಈ ವರ್ಷ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಸಾಧಾರಣ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಅವರು ಕೇವಲ 29 ಪಂದ್ಯಗಳಲ್ಲಿ 1040 ರನ್ ಗಳಿಸಿರುವುದು ಇಲ್ಲಿ ಗಮನಿಸಬೇಕಾದ ಸಂಗತಿ. ಅವರ ಸ್ಟ್ರೈಕ್ ರೇಟ್ 185.71 ಆಗಿತ್ತು. ಈ ವರ್ಷ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 43.33 ಸರಾಸರಿಯಲ್ಲಿ ಸ್ಕೋರ್ ಮಾಡಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಒಂಬತ್ತು ಅರ್ಧಶತಕಗಳು ಸೇರಿವೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸೂರ್ಯಕುಮಾರ್ ಇಂಗ್ಲೆಂಡ್ ವಿರುದ್ಧ ಸಿಡಿಸಿದ ಏಕೈಕ ಶತಕ ಅದಾಗಿತ್ತು. ಈ ವರ್ಷ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: IND vs NZ: ಭಾರತ-ನ್ಯೂಜಿಲೆಂಡ್ ಮೊದಲ ಟಿ20I: ಲೈವ್, ಪ್ಲೇಯಿಂಗ್ XI, ಪಿಚ್ ವರದಿ ಇಲ್ಲಿದೆ
ಇತ್ತೀಚೆಗಿನ ಟಿ20 ವಿಶ್ವಕಪ್ನಲ್ಲೂ ಸೂರ್ಯಕುಮಾರ್ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಅವರು ಆರು ಪಂದ್ಯಗಳಲ್ಲಿ 189.68 ಸ್ಟ್ರೈಕ್ ರೇಟ್ನಲ್ಲಿ 239 ರನ್ ಗಳಿಸಿದ್ದು, ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.