WTC Final Match : ಮೊದಲ ದಿನದ ಇಂಡಿಯಾ v/s ನ್ಯೂಜಿಲೆಂಡ್ WTC ಫೈನಲ್ ಮ್ಯಾಚ್ ರದ್ದು!
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದೃಢಪಡಿಸಿದೆ
ನವದೆಹಲಿ : ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (WTC) ಫೈನಲ್ ನ ಮೊದಲ ದಿನ ಮಳೆಯ ಕಾರಣ ಯಾವುದೇ ಆಟ ಇರುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದೃಢಪಡಿಸಿದೆ.
ಈ ಕುರಿತಂತೆ ಬಿಸಿಸಿಐ(BCCI) ಟ್ವೀಟ್ ಮಾಡಿದ್ದು, ದುರದೃಷ್ಟವಶಾತ್ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನ ಮೊದಲ ದಿನ ಮೊದಲ ಸೆಷನ್ ನಲ್ಲಿ ಯಾವುದೇ ಆಟ ಇರುವುದಿಲ್ಲ. ಮಳೆಯಿಂದಾಗಿ ಪಂದ್ಯಾವಳಿಯನ್ನು ರದ್ದು ಪಡಿಸಿರೋದಾಗಿ ತಿಳಿಸಿದೆ.
WTC Final: ಪ್ಲೇಯಿಂಗ್ ಇಲೆವನ್ ನಲ್ಲಿ ಸ್ಥಾನ ಪಡೆದ ರವೀಂದ್ರ ಜಡೇಜಾ, ಆರ್.ಆಶ್ವಿನ್
ಸೌತಾಂಪ್ಟನ್ ನ ಏಗಸ್ ಬೌಲ್ ನಲ್ಲಿ ಶುಕ್ರವಾರ ನಡೆದ ಡಬ್ಲ್ಯುಟಿಸಿ ಫೈನಲ್ ನಲ್ಲಿ ಭಾರತ ನ್ಯೂಜಿಲ್ಯಾಂಡ್(India vs New Zealand) ತಂಡವನ್ನು ಎದುರಿಸುತ್ತಿದೆ.
ಇದನ್ನೂ ಓದಿ : ಫೋಟೋ ಶೂಟ್ ಮೂಲಕ ಇಂಟರ್ನೆಟ್ ಗೆ ಕಿಚ್ಚು ಹಚ್ಚಿದ ರಾಹುಲ್-ಅತಿಯಾ ಜೋಡಿ
ಈಗಾಗಲೇ ಎಂ.ಎಸ್.ಧೋನಿ ನಾಯಕತ್ವದಲ್ಲಿ 2011ರ ಏಕದಿನ ವಿಶ್ವಕಪ್ ಗೆದ್ದಿರುವ ವಿರಾಟ್ ಕೊಹ್ಲಿ(Virat Kohli) ಟೀಮ್ ಇಂಡಿಯಾ ನಾಯಕನಾಗಿ ತಮ್ಮ ಮೊದಲ ಐಸಿಸಿ ಟ್ರೋಫಿಯನ್ನು ಗೆಲ್ಲುವ ಗುರಿ ಹೊಂದಿದ್ದಾರೆ. ಮತ್ತೊಂದೆಡೆ, ಕೇನ್ ವಿಲಿಯಮ್ಸನ್ ಕೂಡ ನ್ಯೂಜಿಲ್ಯಾಂಡ್ ನಾಯಕನಾಗಿ ಯಾವುದೇ ಟ್ರೋಫಿಯನ್ನು ಗೆದ್ದಿಲ್ಲ, 2019ರ ವಿಶ್ವಕಪ್ ಪ್ರಶಸ್ತಿಯನ್ನು ತಪ್ಪಿಸಿಕೊಂಡಿದ್ದಾರೆ.
ಇದನ್ನೂ ಓದಿ : Top 4 Batsman: ಈ 4 ಬ್ಯಾಟ್ಸ್‌ಮನ್‌ಗಳು ಎಂದಿಗೂ ಶೂನ್ಯಕ್ಕೆ ಔಟಾಗಿಲ್ಲ, ಈ ಪಟ್ಟಿಯಲ್ಲಿರುವ ಭಾರತೀಯ ಆಟಗಾರ ಯಾರು ಗೊತ್ತೇ?
2019ರ ವಿಶ್ವಕಪ್ ಸೆಮಿ ಫೈನಲ್ ನಲ್ಲಿ ಅವರನ್ನು ಹೊಡೆದುರುಳಿಸಿದ ಗೆಲುವನ್ನು ಭಾರತ ನಿರೀಕ್ಷಿಸಲಿದೆ. ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರ ಸಾಲಿಗೆ ಮರಳುವುದನ್ನು ಟೀಮ್ ಇಂಡಿಯಾ(Team India) ನೋಡಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.