ನವದೆಹಲಿ: ಶುಕ್ರವಾರದಿಂದ ಸೌತಾಂಪ್ಟನ್ನಲ್ಲಿ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ನಲ್ಲಿ ಆಡಲು ಟೀಮ್ ಇಂಡಿಯಾ ಗುರುವಾರ ಸಂಜೆ ಪ್ಲೇಯಿಂಗ್ ಇಲೆವನ್ ಘೋಷಿಸಿದೆ.
ರೋಹಿತ್ ಶರ್ಮಾ ಅವರು ಶುಬ್ಮನ್ ಗಿಲ್ ಜೊತೆಗೆ ಇನ್ನಿಂಗ್ಸ್ ತೆರೆಯಲು ಸಜ್ಜಾಗಿದ್ದರೆ, ಮಧ್ಯಮ ಕ್ರಮಾಂಕದ ಜವಾಬ್ದಾರಿಯನ್ನು ಚೇತೇಶ್ವರ ಪೂಜಾರ, ನಾಯಕ ವಿರಾಟ್ ಕೊಹ್ಲಿ (Virat Kohli) ಮತ್ತು ಅವರ ಉಪ ಅಜಿಂಕ್ಯ ರಹಾನೆ ನಡುವೆ ಹಂಚಿಕೊಳ್ಳಲಿದ್ದಾರೆ.ರಿಷಭ್ ಪಂತ್ ವಿಕೆಟ್ ಕೀಪರ್ ಜವಾಬ್ದಾರಿ ನಿರ್ವಹಿಸಲಿದ್ದರೆ, ಭಾರತ ಇಬ್ಬರು ಸ್ಪಿನ್ನರ್ಗಳಾದ ರವೀಂದ್ರ ಜಡೇಜಾ ಮತ್ತು ಆರ್ ಅಶ್ವಿನ್ ಅವರನ್ನು ಲೈನ್ ಅಪ್ನಲ್ಲಿ ಕಣಕ್ಕಿಳಿಯಲಿದ್ದಾರೆ.ವೇಗದ ಬೌಲಿಂಗ್ ನಲ್ಲಿ ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮಾ ಕಣಕ್ಕೆ ಇಳಿಯಲಿದ್ದಾರೆ.
ಇದನ್ನೂ ಓದಿ: Top 25 Global Instagram Influencer ಪಟ್ಟಿ ಸೇರಿದ ವಿರಾಟ್ - ಅನುಷ್ಕಾ
🚨 NEWS 🚨
Here's #TeamIndia's Playing XI for the #WTC21 Final 💪 👇 pic.twitter.com/DiOBAzf88h
— BCCI (@BCCI) June 17, 2021
ಏತನ್ಮಧ್ಯೆ, ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವಾದರೂ ಸಹ ಒಂದು ಟೆಸ್ಟ್ ಪಂದ್ಯವು ತನ್ನ ತಂಡದ ನಿಜವಾದ ಪ್ರತಿಬಿಂಬವಲ್ಲ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ಇದನ್ನು ಮತ್ತೊಂದು ಆಟವೆಂದು ಅವರು ಪರಿಗಣಿಸಿರುವುದಾಗಿ ಹೇಳಿದ್ದಾರೆ. "ಐದು ದಿನಗಳಲ್ಲಿ ಒಂದು ಆಟ. ಇದು ಯಾವುದನ್ನೂ ಪ್ರತಿಬಿಂಬಿಸುವುದಿಲ್ಲ ಮತ್ತು ಕಳೆದ ನಾಲ್ಕೈದು ವರ್ಷಗಳ ಅವಧಿಯಲ್ಲಿ ಏನು ನಡೆದಿದೆ ಎಂದು ಆಟವನ್ನು ಅರ್ಥಮಾಡಿಕೊಳ್ಳುವವರಿಗೆ ತಿಳಿದಿದೆ ಎಂದು ಫೈನಲ್ ಗೂ ಮುನ್ನ ಕೊಹ್ಲಿ ಹೇಳಿದರು.
'ನಾವು ಗೆದ್ದರೆ, ಕ್ರಿಕೆಟ್ ನಿಲ್ಲುವುದಿಲ್ಲ ಮತ್ತು ನಾವು ಸೋತರೂ ಕೂಡ ಕ್ರಿಕೆಟ್ ನಿಲ್ಲುವುದಿಲ್ಲ. ನಾವು ಶ್ರೇಷ್ಠತೆಯ ಅನ್ವೇಷಣೆಯಲ್ಲಿ ಆಡುತ್ತಿದ್ದೇವೆ ಮತ್ತು ತಂಡವಾಗಿ ನಾವು ಯಾರೆಂದು ಅರ್ಥಮಾಡಿಕೊಳ್ಳುತ್ತೇವೆ" ಎಂದು ಕೊಹ್ಲಿ ಹೇಳಿದರು.
ಇದನ್ನೂ ಓದಿ: Kohli-Dhoni ಇಬ್ಬರಲ್ಲಿ ಜೀನಿಯಸ್ ಕ್ಯಾಪ್ಟನ್ ಯಾರು? Michael Vaughan ಹೇಳಿದ್ದೇನು?
ಫೈನಲ್ ನಲ್ಲಿ ಆಡುವ ಭಾರತದ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ರಿಷಭ್ ಪಂತ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮಾ
ಇದನ್ನೂ ಓದಿ: Coronasomia: Covid-19 ಮಹಾಮಾರಿಯ ನಡುವೆಯೇ ಹೆಚ್ಚಾಗುತ್ತಿದೆ ಈ ನಿಗೂಢ ಕಾಯಿಲೆಯ ಅಪಾಯ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.