ಕ್ರಿಕೆಟ್ ನಲ್ಲಿ ಭಾರತ ಅದೆಷ್ಟೋ ದೇಶಗಳ ಜೊತೆ ಪಂದ್ಯಗಳನ್ನು ಆಡಿದೆ. ಆದರೆ ಪಾಕಿಸ್ತಾನ ತಂಡದ ಜೊತೆ ನಡೆಯುವ ಪಂದ್ಯ ಮಾತ್ರ ಅತ್ಯಂತ ಕುತೂಹಲಕಾರಿ ಹಾಗೂ ಹೈವೋಲ್ಟೇಜ್ ಪಂದ್ಯ ಎಂದರೆ ತಪ್ಪಾಗಲಾರದು. ಈ ಐತಿಹಾಸಿಕ ಪಂದ್ಯಕ್ಕೆ ಮೆಲ್ಬರ್ನ್‌ನ ಎಂಸಿಜಿ ಮೈದಾನ ಸಾಕ್ಷಿಯಾಗಲಿದೆ. ಇನ್ನು 2021ರ ಟಿ20 ವಿಶ್ವಕಪ್ ಬಳಿಕ ಐಸಿಸಿ ಟ್ರೋಫಿಗಾಗಿ ಭಾರತ-ಪಾಕ್ ತಂಡಗಳು ಮುಖಾಮುಖಿಯಾಗುತ್ತಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IND vs PAK: ಐತಿಹಾಸಿಕ ಇಂಡೋ-ಪಾಕ್ ಪಂದ್ಯಕ್ಕೂ ಮುನ್ನ ಅಭಿಮಾನಿಗಳಿಗೆ ಗುಡ್ ನ್ಯೂಸ್!


ಕಳೆದ ವಿಶ್ವಕಪ್‌ನಲ್ಲಿ ಅನುಭವಿಸಿದ ಕೆಟ್ಟ ಸೋಲಿಗೆ ಸೇಡು ತೀರಿಸಿಕೊಳ್ಳಲು ಇದೀಗ ಟೀಂ ಇಂಡಿಯಾ ರೆಡಿಯಾಗಿದೆ. ಇನ್ನೊಂದೆಡೆ ಕಳೆದ ಏಷ್ಯಾಕಪ್‌ನಲ್ಲಿ ಭಾರತದ ವಿರುದ್ಧ ನೀಡಿದ ಉತ್ತಮ ಪ್ರದರ್ಶನವನ್ನೇ ಮುಂದುವರಿಸಲು ಪಾಕ್ ಪಡೆ ಪ್ಲ್ಯಾನ್ ನಡೆಸಿದೆ,


ಈ ಹೈವೋಲ್ಟೆಜ್ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1.30ಕ್ಕೆ ಪ್ರಾರಂಭಗೊಳ್ಳಲಿದೆ. ಐತಿಹಾಸಿಕ ಪಂದ್ಯಕ್ಕೆ ಮೆಲ್ಬರ್ನ್ ನ ಎಂಸಿಜಿ ಮೈದಾನ ಸಾಕ್ಷಿಯಾಗಲಿದ್ದು, ಅಲ್ಲಿನ ಹವಾಮಾನ ವರದಿ, ಪಿಚ್ ರಿಪೋರ್ಟ್ ಮತ್ತು ಸಂಭಾವ್ಯ ಆಟಗಾರರ ಪಟ್ಟಿ ಹೀಗಿದೆ.


ಹವಾಮಾನ ವರದಿ:


ಅಕ್ಟೋಬರ್ 23ರಂದು ನಡೆಯಲಿರುವ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ಇಲ್ಲಿವರೆಗೆ ವಾತಾವರಣ ಉತ್ತಮವಾಗಿದೆ. ಇನ್ನು ಇಲ್ಲಿನ ಹ್ಯುಮಿಡಿಟಿ ಶೇಕಡಾ 83ರಷ್ಟಿರಲಿದ್ದು, ಗಾಳಿಯು 19/km ವೇಗದಲ್ಲಿ ಬೀಸಲಿದೆ. ಒಂದು ವೇಳೆ ಮಳೆಯಾದರೆ ಪಿಚ್ ಔಟ್‌ಫೀಲ್ಡ್ ತೇವಾಂಶದಿಂದ ಕೂಡಿರಲಿದೆ. ಇನ್ನೊಂದೆಡೆ ಎಂಸಿಜಿಯಲ್ಲಿ ಅಕ್ಟೋಬರ್ 24 ಮತ್ತು 25ರಂದು ಸಹ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಎಷ್ಟು ಓವರ್‌ಗಳನ್ನ ವೀಕ್ಷಿಸಲು ಸಾಧ್ಯವಿದೆ ಎಂಬುದು ತಿಳಿದುಬರಲಿದೆ.


ಪಿಚ್ ರಿಪೋರ್ಟ್‌:


ಮೆಲ್ಬರ್ನ್ ಎಂಸಿಜಿ ಕ್ರಿಕೆಟ್ ಮೈದಾನವು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಉತ್ತಮವಾಗಿದೆ. ಪೇಸರ್‌ಗಳು ಪಂದ್ಯದ ಆರಂಭದಲ್ಲಿ ಉತ್ತಮ ಬೌನ್ಸ್‌ ಸಹ ಕಾಣಬಹುದು. ಇನ್ನು ಈ ಪಿಚ್‌ ಸ್ಪಿನ್ನರ್‌ಗಳಿಗೆ ನೆರವಾಗುವುದು ತುಂಬಾ ಕಡಿಮೆ. ಮೊದಲ ಇನ್ನಿಂಗ್ಸ್‌ ಸ್ಕೋರ್ 150 ರನ್‌ಗಳಷ್ಟಿದ್ದು, ಎರಡನೇ ಬಾರಿಗೆ ಬ್ಯಾಟಿಂಗ್ ಮಾಡುವ ತಂಡವು ಉತ್ತಮ ದಾಖಲೆಯನ್ನು ಮಾಡಿದೆ, ಇವಿಷ್ಟು ಈ ಹಿಂದಿನ ಪಂದ್ಯದ ಆಧಾರವಾಗಿದೆ.


ಭಾರತ-ಪಾಕ್ ಸಂಭಾವ್ಯ ಆಟಗಾರರ ಪಟ್ಟಿ:


ಭಾರತ: ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ) , ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷ್‌ದೀಪ್ ಸಿಂಗ್, ಮೊಹಮ್ಮದ್ ಶಮಿ/ಹರ್ಷಲ್ ಪಟೇಲ್, ಯುಜವೇಂದ್ರ ಚಹಾಲ್


ಇದನ್ನೂ ಓದಿ: T20 World Cup: T20 ವಿಶ್ವಕಪ್ ನಲ್ಲಿ ಭಾರತದ ಸೂಪರ್ 12 ವೇಳಾಪಟ್ಟಿಯ ಸಂಪೂರ್ಣ ವಿವರ


ಪಾಕಿಸ್ತಾನ: ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್ (ನಾಯಕ), ಫಖಾರ್ ಜಮಾನ್, ಮೊಹಮ್ಮದ್ ನವಾಜ್, ಇಫ್ತಿಕರ್ ಅಹಮದ್, ಶಾನ್ ಮಸೂದ್, ಆಸಿಫ್ ಅಲಿ, ಶದಾಬ್ ಖಾನ್, ಶಾಹಿನ್ ಅಫ್ರಿದಿ, ನಾಸಿರ್ ಷಾ, ಹ್ಯಾರಿಸ್ ರೌಫ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.