T20 World Cup: T20 ವಿಶ್ವಕಪ್ ನಲ್ಲಿ ಭಾರತದ ಸೂಪರ್ 12 ವೇಳಾಪಟ್ಟಿಯ ಸಂಪೂರ್ಣ ವಿವರ

2007 ರ T20 ವಿಶ್ವಕಪ್ ಚಾಂಪಿಯನ್‌ಗಳು ತಮ್ಮ ಅಭಿಯಾನವನ್ನು ಉತ್ತಮವಾಗಿ ಕಿಕ್‌ಸ್ಟಾರ್ಟ್ ಮಾಡಲು ಎದುರು ನೋಡುತ್ತಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದ ನಂತರ ತಂಡವು ನೆದರ್ಲೆಂಡ್ಸ್ ವಿರುದ್ಧ ಸೆಣಸಲಿದೆ. ನಂತರ ಅಕ್ಟೋಬರ್ 30 ರಂದು ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ.

Written by - Bhavishya Shetty | Last Updated : Oct 21, 2022, 06:23 PM IST
    • ಟಿ20 ವಿಶ್ವಕಪ್ 2022 ಸೂಪರ್ 12 ಹಂತ ಪ್ರಾರಂಭ
    • ಭಾರತದ ಸಂಪೂರ್ಣ ಸೂಪರ್ 12ರ ವೇಳಾಪಟ್ಟಿ ಇಲ್ಲಿದೆ
    • 2007ರ T20 ವಿಶ್ವಕಪ್ ಚಾಂಪಿಯನ್‌ಗಳು ತಮ್ಮ ಅಭಿಯಾನ ಶುರು ಮಾಡಲು ಕಾಯುತ್ತಿದ್ದಾರೆ
T20 World Cup: T20 ವಿಶ್ವಕಪ್ ನಲ್ಲಿ ಭಾರತದ ಸೂಪರ್ 12 ವೇಳಾಪಟ್ಟಿಯ ಸಂಪೂರ್ಣ ವಿವರ title=
World Cup

ಟಿ20 ವಿಶ್ವಕಪ್ 2022 ಸೂಪರ್ 12 ಹಂತವು ಶನಿವಾರ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ನ್ಯೂಜಿಲೆಂಡ್ ಎದುರಿಸುವ ಮೂಲಕ ಪ್ರಾರಂಭವಾಗಲಿದೆ. ಅದೇ ದಿನ ಇಂಗ್ಲೆಂಡ್ ತಂಡ ಮೊಹಮ್ಮದ್ ನಬಿ ನೇತೃತ್ವದ ಅಫ್ಘಾನಿಸ್ತಾನವನ್ನು ಎದುರಿಸಲಿದೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ತನ್ನ T20 ವಿಶ್ವಕಪ್ ಅಭಿಯಾನವನ್ನು ಭಾನುವಾರದಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಪ್ರಾರಂಭಿಸಲಿದೆ.

ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್‌ನಿಂದ ಹೊರಬಿದ್ದ ವೆಸ್ಟ್ ಇಂಡೀಸ್ ಟೀಂ!

2007 ರ T20 ವಿಶ್ವಕಪ್ ಚಾಂಪಿಯನ್‌ಗಳು ತಮ್ಮ ಅಭಿಯಾನವನ್ನು ಉತ್ತಮವಾಗಿ ಕಿಕ್‌ಸ್ಟಾರ್ಟ್ ಮಾಡಲು ಎದುರು ನೋಡುತ್ತಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದ ನಂತರ ತಂಡವು ನೆದರ್ಲೆಂಡ್ಸ್ ವಿರುದ್ಧ ಸೆಣಸಲಿದೆ. ನಂತರ ಅಕ್ಟೋಬರ್ 30 ರಂದು ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ.

ಭಾರತದ ಸಂಪೂರ್ಣ ಸೂಪರ್ 12ರ ವೇಳಾಪಟ್ಟಿ ಇಲ್ಲಿದೆ

ಅಕ್ಟೋಬರ್ 23 -- ಭಾರತ vs ಪಾಕಿಸ್ತಾನ -- 1:30 PM (ಮೆಲ್ಬೋರ್ನ್ ಕ್ರಿಕೆಟ್ ಮೈದಾನ)

ಅಕ್ಟೋಬರ್ 27 -- ಭಾರತ vs ನೆದರ್ಲ್ಯಾಂಡ್ಸ್ -- 12:30 PM (ಸಿಡ್ನಿ ಕ್ರಿಕೆಟ್ ಮೈದಾನ)

ಅಕ್ಟೋಬರ್ 30 -- ಭಾರತ vs ದಕ್ಷಿಣ ಆಫ್ರಿಕಾ -- 4:30 PM (ಆಪ್ಟಸ್ ಸ್ಟೇಡಿಯಂ, ಪರ್ತ್)

ನವೆಂಬರ್ 2 -- ಭಾರತ vs ಬಾಂಗ್ಲಾದೇಶ -- 1:30 PM (ಅಡಿಲೇಡ್ ಓವಲ್)

ನವೆಂಬರ್ 6 -- ಭಾರತ vs ಜಿಂಬಾಬ್ವೆ -- 1:30 PM (ಮೆಲ್ಬೋರ್ನ್ ಕ್ರಿಕೆಟ್ ಮೈದಾನ)

ಇದನ್ನೂ ಓದಿ: Roger Binny : 'ಟೀಂ ಇಂಡಿಯಾ ಪಾಕ್ ಪ್ರವಾಸ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬಿಟ್ಟದ್ದು'

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News