ಭಾರತ vs ಪಾಕ್ ಹೈವೋಲ್ಟೇಜ್ ಪಂದ್ಯ ಉಚಿತವಾಗಿ ವೀಕ್ಷಿಸಬೇಕೇ? ಹಾಗಾದ್ರೆ ಈ ಸಣ್ಣ ಕೆಲಸ ಮಾಡಿ...
India vs Pakistan Live Streaming: ಸೂಪರ್-4ರಲ್ಲಿ ಪಾಕಿಸ್ತಾನ ತಂಡದ ಎರಡನೇ ಪಂದ್ಯವಾಗಿದೆ. ಮೊದಲ ಪಂದ್ಯದಲ್ಲಿ ಬಾಬರ್ ಅಜಮ್ ತಂಡ ಬಾಂಗ್ಲಾದೇಶವನ್ನು ಹೀನಾಯವಾಗಿ ಸೋಲಿಸಿತ್ತು. ಸೂಪರ್-4ರಲ್ಲಿ ಭಾರತ ತಂಡದ ಮೊದಲ ಪಂದ್ಯ ಇದಾಗಿದೆ.
India vs Pakistan Live Streaming: 2023 ರ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಎರಡನೇ ಬಾರಿ ಮುಖಾಮುಖಿಯಾಗಲಿವೆ. ಈ ಹಿಂದೆ ಮುನ್ನ ಎರಡೂ ತಂಡಗಳು ಲೀಗ್ ಹಂತದಲ್ಲಿ ಮುಖಾಮುಖಿಯಾಗಿತ್ತು. ಆದರೆ ಮಳೆಯಿಂದಾಗಿ ಆ ಪಂದ್ಯವನ್ನು ರದ್ದು ಮಾಡಲಾಗಿತ್ತು. ಇನ್ನು ಇಂದು ರೋಹಿತ್ ಸೇನಾ ಹಾಗೂ ಬಾಬರ್ ಬ್ರಿಗೇಡ್ ನಡುವಿನ ಕದನ ಸೂಪರ್-4ರಲ್ಲಿ ನಡೆಯಲಿದೆ.
ಸೂಪರ್-4ರಲ್ಲಿ ಪಾಕಿಸ್ತಾನ ತಂಡದ ಎರಡನೇ ಪಂದ್ಯವಾಗಿದೆ. ಮೊದಲ ಪಂದ್ಯದಲ್ಲಿ ಬಾಬರ್ ಅಜಮ್ ತಂಡ ಬಾಂಗ್ಲಾದೇಶವನ್ನು ಹೀನಾಯವಾಗಿ ಸೋಲಿಸಿತ್ತು. ಸೂಪರ್-4ರಲ್ಲಿ ಭಾರತ ತಂಡದ ಮೊದಲ ಪಂದ್ಯ ಇದಾಗಿದೆ. ಭಾರತ ತಂಡ ಲೀಗ್ ಹಂತದಲ್ಲಿ ನೇಪಾಳ ವಿರುದ್ಧ ಅದ್ಭುತ ಜಯ ದಾಖಲಿಸಿತ್ತು.
ಇದನ್ನೂ ಓದಿ: ಜಗತ್ತೇ ಮೆಚ್ಚಿರುವ ‘ಕಿಂಗ್’ ವಿರಾಟ್ ಕೊಹ್ಲಿಯ ಫೇವರೇಟ್ ಕ್ರಿಕೆಟಿಗ ಯಾರು ಗೊತ್ತಾ?
ಭಾರತ-ಪಾಕಿಸ್ತಾನ ಪಂದ್ಯ ಯಾವಾಗ ಮತ್ತು ಎಲ್ಲಿ ನಡೆಯಲಿದೆ?
ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಸೂಪರ್-4 ಪಂದ್ಯ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ಟಾಸ್ 2:30 ಕ್ಕೆ ನಡೆಯಲಿದೆ.
ಭಾರತ-ಪಾಕಿಸ್ತಾನ ಪಂದ್ಯ ನೇರಪ್ರಸಾರ ಎಲ್ಲಿ ವೀಕ್ಷಿಸಬಹುದು?
ಏಷ್ಯಾ ಕಪ್ 2023 ರಲ್ಲಿ ಭಾರತ-ಪಾಕಿಸ್ತಾನ ಸೂಪರ್-4 ಪಂದ್ಯವನ್ನು ನೀವು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮೂಲಕ ವೀಕ್ಷಿಸಬಹುದು. ಸ್ಟಾರ್ ಸ್ಪೋರ್ಟ್ಸ್ ಹಿಂದಿಯಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನೇರ ಪ್ರಸಾರವಾಗಲಿದೆ. ಈ ಪಂದ್ಯವನ್ನು ಡಿಡಿ ಸ್ಪೋರ್ಟ್ಸ್ ಚಾನೆಲ್’ನಲ್ಲಿ ಫ್ರೀ ಡಿಶ್ ಮೂಲಕ ಕೂಡ ನೇರ ಪ್ರಸಾರ ಮಾಡಲಾಗುತ್ತದೆ.
ಉಚಿತವಾಗಿ ವೀಕ್ಷಿಸಲು ಹೀಗೆ ಮಾಡಿ…
2023 ರ ಏಷ್ಯಾ ಕಪ್’ನ ಸೂಪರ್-4 ಪಂದ್ಯವನ್ನು ನೀವು ಮೊಬೈಲ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದು. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್ ಮೂಲಕ ಈ ಟೂರ್ನಿಯ ಎಲ್ಲಾ ಪಂದ್ಯಗಳನ್ನು ಉಚಿತವಾಗಿ ಆನಂದಿಸಬಹುದು.
ಇದನ್ನೂ ಓದಿ: ವಾರಾಂತ್ಯದಲ್ಲಿ ಈ ರಾಶಿಗೆ ಸಿಗಲಿದೆ ಖಜಾನೆ, ಲಕ್ಷ್ಮೀ ಶ್ರೀರಕ್ಷೆಯಿಂದ ಹೊಡೆಯಲಿದೆ ಬಂಪರ್ ಲಾಟರಿ
ಇನ್ನು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮೀಸಲು ದಿನವನ್ನು ಇಡಲಾಗಿದೆ. ಸೆಪ್ಟೆಂಬರ್ 10 ರಂದು ಕೊಲಂಬೊದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಪಂದ್ಯಕ್ಕೆ ಮಾತ್ರ ಮೀಸಲು ದಿನವನ್ನು ಇಡಲು ನಿರ್ಧರಿಸಲಾಗಿದೆ. ಮಳೆಯಿಂದಾಗಿ ಸೆಪ್ಟೆಂಬರ್ 10 ರಂದು ಪಂದ್ಯ ನಡೆಯದಿದ್ದರೆ ಸೆಪ್ಟೆಂಬರ್ 11 ರಂದು ಪಂದ್ಯ ನಡೆಯಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ