ನವದೆಹಲಿ: ವಿಶಾಖ್ ಪಟ್ಟಣದ ವೈ.ಎಸ್.ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ಎರಡನೇ ಇನಿಂಗ್ಸ್ ನಲ್ಲಿ ಮೂರು ವಿಕೆಟ್ ನಷ್ಟಕ್ಕೆ 243 ರನ್ ಗಳಿಸಿದೆ.



COMMERCIAL BREAK
SCROLL TO CONTINUE READING

ಇನ್ನೊಂದೆಡೆ ಮಾಯಂಕ್ ಅಗರವಾಲ್ ಮೊದಲ ಇನಿಂಗ್ಸ್ ನಲ್ಲಿ ದ್ವಿಶತಕದ ಮೂಲಕ ಮಿಂಚಿದ್ದ ಎರಡನೇ ಇನ್ನಿಂಗ್ಸ್ ನಲ್ಲಿ ಕೇವಲ 7 ರನ್ ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ್ ನಿರಾಸೆ ಅನುಭವಿಸಿದರು. ಈ ನಡುವೆ ರೋಹಿತ್ ಶರ್ಮಾ ಮತ್ತು ಚೇತೆಶ್ವರ್ ಪೂಜಾರ್ ಅವರ ಭರ್ಜರಿ ಜೊತೆಯಾಟದಿಂದಾಗಿ ಬೃಹತ್ ಮುನ್ನಡೆಯತ್ತ ದಾಪುಗಾಲು ಹಾಕಿದೆ.ರೋಹಿತ್ ಶರ್ಮಾ ಅವರು ಕೇವಲ 149 ಎಸೆತಗಳಲ್ಲಿ 127 ರನ್ ಗಳನ್ನು ಗಳಿಸಿದರು, ಅದರಲ್ಲಿ 10 ಬೌಂಡರಿ ಹಾಗೂ 7 ಸಿಕ್ಸರ್ ಬಾರಿಸುವ ಮೂಲಕ ಏಕದಿನ ಪಂದ್ಯದ ಬ್ಯಾಟಿಂಗ್ ನೆನಪಿಸಿದರು.



ಇನ್ನೊಂದೆಡೆ ದಕ್ಷಿಣ ಆಫ್ರಿಕಾ ತಂಡವು ತನ್ನ ಮೊದಲ ಇನಿಂಗ್ಸ್ ನಲ್ಲಿ 431 ರನ್ ಗಳಿಗೆ ಸರ್ವ ಪತನವನ್ನು ಕಂಡಿತು. ಡೀನ್ ಎಲ್ಗರ್ 160  ಹಾಗೂ ಡಿಕಾಕ್ ಅವರ 111 ರನ್ ಗಳ ನೆರವಿನಿಂದ ಆರಂಭಿಕ ಶಾಕ್ ನಿಂದ ದಕ್ಷಿಣ ಆಫ್ರಿಕಾ ತಂಡವನ್ನು ಪಾರು ಮಾಡಿದರು.