Sri Lanka Tour Of India - ಶ್ರೀಲಂಕಾ ಮತ್ತು ಭಾರತ ನಡುವಿನ ಮುಂಬರುವ ಟಿ20 ಮತ್ತು ಟೆಸ್ಟ್ ಪಂದ್ಯಗಳಿಗೆ ಬಿಸಿಸಿಐ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈಗ ಮೊದಲು ಟಿ20 ಸರಣಿ (Ind Vs SL T20 Series) ಮತ್ತು ನಂತರ ಟೆಸ್ಟ್ ಪಂದ್ಯ ನಡೆಯಲಿದೆ. 2 ಟೆಸ್ಟ್ (Ind Vs SL Test Series 2022) ಪಂದ್ಯಗಳು ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021-23 ರ ಭಾಗವಾಗಿದೆ. ಈ ಸರಣಿಯು ಭಾರತದಲ್ಲಿ ಮಾತ್ರ ನಡೆಯಲಿದೆ. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ತಮ್ಮ 100ನೇ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ.


COMMERCIAL BREAK
SCROLL TO CONTINUE READING

ಟೆಸ್ಟ್ ನಡೆಯುವ ಸ್ಥಳದಲ್ಲಿ ಬದಲಾವಣೆ
ಹಿಂದಿನ ವೇಳಾಪಟ್ಟಿಯಂತೆ (Ind Vs SL Series New Time Table) ಮೊದಲ ಟೆಸ್ಟ್ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಆದರೆ, ಇದೀಗ ಈ ಪಂದ್ಯ ಮೊಹಾಲಿಯಲ್ಲಿ ಮಾರ್ಚ್ 4 ರಿಂದ 8 ರವರೆಗೆ ನಡೆಯಲಿದೆ. ಸರಣಿಯ ಎರಡನೇ ಪಂದ್ಯ ಬೆಂಗಳೂರಿನಲ್ಲಿ ಮಾರ್ಚ್ 12 ರಿಂದ 16 ರವರೆಗೆ ನಡೆಯಲಿದೆ. ಸ್ಥಳ ಬದಲಾವಣೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಹೊಸ ವೇಳಾಪಟ್ಟಿಯ ಪ್ರಕಾರ, ಟಿ20 ಸರಣಿಯ ಮೊದಲ ಪಂದ್ಯ ಫೆಬ್ರವರಿ 24 ರಂದು ಲಕ್ನೋದಲ್ಲಿ, ಎರಡನೇ ಪಂದ್ಯ 26 ರಂದು ಮತ್ತು ಮೂರನೇ ಪಂದ್ಯ ಫೆಬ್ರವರಿ 27 ರಂದು ಧರ್ಮಶಾಲಾದಲ್ಲಿ ನಡೆಯಲಿದೆ.


ಇದನ್ನೂ ಓದಿ-ಟಿ20 ಸರಣಿಗೆ ಗಾಯಾಳು ವಾಷಿಂಗ್ಟನ್ ಸುಂದರ್ ಔಟ್, ಕುಲದೀಪ್ ಯಾದವ್ ಇನ್


Virat Kohli) ಇದುವರೆಗೆ ಒಟ್ಟು 99 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು ಆಡಿದ ಕೊನೆಯ ಟೆಸ್ಟ್ ದಕ್ಷಿಣ ಆಫ್ರಿಕಾದಲ್ಲಿ ನಡೆದಿತ್ತು. ಬೆನ್ನು ನೋವಿನ ಕಾರಣ ಅವರು ಸರಣಿಯಲ್ಲಿ ಟೆಸ್ಟ್ ಆಡಿರಲಿಲ್ಲ. ಇದೀಗ ಕೊಹ್ಲಿ ಭಾರತದಲ್ಲಿ 100ನೇ ಟೆಸ್ಟ್ ಆಡಲಿದ್ದಾರೆ. ಭಾರತದಲ್ಲಿ ಅವರ 100 ನೇ ಟೆಸ್ಟ್ ಆಡುವುದು ಖಂಡಿತವಾಗಿಯೂ ಅಭಿಮಾನಿಗಳಿಗೆ ಪಾಲಿಗೆ ಅವಿಸ್ಮರಣೀಯವಾಗಿರಲಿದೆ.


ಇದನ್ನೂ ಓದಿ-IPL 2022: ಅನ್ ಸೋಲ್ಡ್ ಆದ ಬಳಿಕ ಧೋನಿ ಕುರಿತು ಸುರೇಶ್ ರೈನಾ ಮಾತನಾಡಿದ ವಿಡಿಯೋ ವೈರಲ್.!


ಕೊಹ್ಲಿಯ 100ನೇ ಟೆಸ್ಟ್‌ನಲ್ಲಿ ಅಬ್ಬರದ ನಿರೀಕ್ಷೆ
ವಿರಾಟ್ ಕೊಹ್ಲಿ ಅವರ ಬ್ಯಾಟ್ ಕಳೆದ ಕೆಲ ಸಮಯದಿಂದ ಮೌನವಾಗಿದೆ. ಆದರೆ ಅವರ ಅಭಿಮಾನಿಗಳು ಇನ್ನೂ ಅವರ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದಾರೆ. 100ನೇ ಟೆಸ್ಟ್‌ನಲ್ಲಿ ಶತಕ ಬಾರಿಸುವ ಮೂಲಕ ಕೊಹ್ಲಿ ಎರಡು ವರ್ಷಕ್ಕೂ ಹೆಚ್ಚು ಕಾಲದ ಬರ ನೀಗಿಸಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದಾರೆ.


ಇದನ್ನೂ ಓದಿ-IPL Mega Auction 2022: ಅನ್ ಸೋಲ್ಡ್ ಆಗದೇ ಉಳಿದ ಪ್ರಮುಖ 10 ಆಟಗಾರರಿವರು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.