ಮುಂಬೈ: ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯ  ಮುಂದಿನ ಸಭೆಯು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯಲಿದೆ. 2023 ರಲ್ಲಿ ನಡೆಯಲಿರುವ ಈ ವರ್ಷದ ಸಭೆ ಆತಿಥ್ಯಕ್ಕೆ ಸಂಬಂಧಿಸಿದಂತೆ ನಡೆದ ಮತದಾನದಲ್ಲಿ 76 ಮತಗಳ ಪ್ರಕಾರ 75 ಮತ ಭಾರತದ ಪರವಾಗಿ ಬಂದಿದೆ.


COMMERCIAL BREAK
SCROLL TO CONTINUE READING

ಭಾರಿ ಬಹುಮತದಿಂದ ಸಭೆಯ ಆತಿಥ್ಯ ವಹಿಸುವುದಕ್ಕೆ ಅವಕಾಶವನ್ನು ಪಡೆದುಕೊಂಡ ನಂತರದಲ್ಲಿ ಐಒಸಿ ಸದಸ್ಯೆ ಹಾಗೂ ರಿಲಾಯನ್ಸ್ ಫೌಂಡೇಶನ್ನ ಮುಖ್ಯಸ್ಥೆ ನೀತಾ ಅಂಬಾನಿ “ಇದೊಂದು ಹೆಮ್ಮೆಯ ಕ್ಷಣ”ಎಂದು ಸಂತಸ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Ind Vs WI : ಪಂದ್ಯದಲ್ಲಿ ಕ್ಯಾಚ್ ಬಿಟ್ಟ ಈ ಆಟಗಾರ! ಕೋಪಗೊಂಡು ರೋಹಿತ್ ಮಾಡಿದ ಈ ಕೆಲಸ


ಭಾರತದ ನಿಯೋಗದ ನೇತೃತ್ವ ವಹಿಸಿರುವ ನೀತಾ ಅಂಬಾನಿ, ಐಒಸಿಯ ಮುಂದಿನ ಭೇಟಿಯನ್ನು ಭಾರತದಲ್ಲಿ ನಡೆಸಲು ವಕಾಲತ್ತು ವಹಿಸಿದ್ದರು. “ಭವಿಷ್ಯದಲ್ಲಿ ಯೂತ್ ಒಲಿಂಪಿಕ್ ಹಾಗೂ ಒಲಿಂಪಿಕ್ ಗೇಮ್ಸ್ ಅನ್ನು ಭಾರತದಲ್ಲಿ ನಡೆಸುವುದು ನಮ್ಮ ಗುರಿ. ಜಗತ್ತಿನಲ್ಲೇ ಅತಿ ಹೆಚ್ಚು ಯುವ ಶಕ್ತಿಯನ್ನು ಭಾರತ ಹೊಂದಿದ್ದು, ಇದರಿಂದಾಗಿ ಒಲಿಂಪಿಕ್ನ ಮಹತ್ವ ಭಾರತದ ಯುವಕರಿಗೆ ಅರ್ಥವಾಗಲಿದೆ. ಈ ಪಾಲುದಾರಿಕೆಯನ್ನು ನಾವು ಇನ್ನಷ್ಟು ಬಲಪಡಿಸಬೇಕಿದೆ" ಎಂದು ಹೇಳಿದರು.


Team India Test ತಂಡಕ್ಕೆ ಸಿಕ್ಕ ಹೊಸ ಸಾರಥಿ, ಈ ಆಟಗಾರನಿಗೆ ಜವಾಬ್ದಾರಿ ವಹಿಸಿದ ಸೆಲೆಕ್ಟರ್ಸ್


ಭಾರತೀಯ ನಿಯೋಗದಲ್ಲಿ ನೀತಾ ಅಂಬಾನಿ, ಭಾರತೀಯ ಒಲಿಂಪಿಕ್ ಸಮಿತಿ (ಐಒಸಿ) ಅಧ್ಯಕ್ಷ ಡಾ. ನರಿಂದರ್ ಬಾತ್ರಾ, ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಹಾಗೂ ಶೂಟಿಂಗ್ನಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಅಭಿನವ ಬಿಂದ್ರಾ ಭಾಗವಹಿಸಿದ್ದರು. ಬೀಜಿಂಗ್ನಲ್ಲಿ ನಡೆಯುತ್ತಿರುವ ಐಒಸಿ ವಾರ್ಷಿಕ ಸಭೆಯಲ್ಲಿ ಮುಂದಿನ ಸಭೆಯನ್ನು ಭಾರತದಲ್ಲಿ ನಡೆಸುವಂತೆ ಆಗ್ರಹಿಸಲು ನಿಲುವಳಿಯನ್ನು ತೆಗೆದುಕೊಂಡಿತು.


ನಾಲ್ಕು ದಶಕಗಳ ನಂತರ ಭಾರತದಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸಭೆ ನಡೆಯಲಿದೆ. ಈ ಹಿಂದೆ 1983 ರಲ್ಲಿ ಸಭೆ ಭಾರತದಲ್ಲಿ ನಡೆದಿತ್ತು. ಐಒಸಿ ಸದಸ್ಯ ಒಲಿಂಪಿಕ್ ಚಾರ್ಟರ್ ಮತ್ತು ಒಲಿಂಪಿಕ್ ಆತಿಥ್ಯ ನಗರದ ಆಯ್ಕೆಯಂತಹ ಮಹತ್ವದ ವಿಷಯದ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ.


ಇದನ್ನೂ ಓದಿ: Virat Kohli : ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್ : ಟೀಂನಿಂದ ಕೊಹ್ಲಿ ಔಟ್!


ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಡಾ. ನರೀಂದರ್ ಬಾತ್ರಾ ಮಾತನಾಡಿ "ಶ್ರೀಮತಿ ನೀತಾ ಅಂಬಾನಿ ಅವರ ದೂರದೃಷ್ಟಿ, ನಾಯಕತ್ವ ಮತ್ತು ಅವರ ಬೆಂಬಲಕ್ಕಾಗಿ ಹಾಗೂ ನನ್ನ ಎಲ್ಲಾ ಐಒಸಿ ಸಹೋದ್ಯೋಗಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ಮುಂದಿನ ವರ್ಷ ಮುಂಬೈನಲ್ಲಿ ನಿಮ್ಮನ್ನು ಆಹ್ವಾನಿಸಲು ನಾನು ಎದುರು ನೋಡುತ್ತಿದ್ದೇನೆ. ಭಾರತೀಯ ಕ್ರೀಡೆಗಳಿಗೆ ಈಗ ಹೊಸ ಶಕೆ ಪ್ರಾರಂಭವಾಗುತ್ತಿದೆ. ನಮ್ಮ ಮುಂದಿನ ಪೀಳಿಗೆಗೆ ಉಜ್ವಲ ಭವಿಷ್ಯವನ್ನು ನಿರ್ಮಿಸುವಲ್ಲಿ ಒಲಂಪಿಕ್ ಆಂದೋಲನವು ಪ್ರಮುಖ ಪಾತ್ರವನ್ನು ವಹಿಸಬೇಕೆಂದು ನಾವು ಬಯಸುತ್ತೇವೆ. 


2023 ರಲ್ಲಿ ಮುಂಬೈನಲ್ಲಿ ಐಒಸಿ ಸಭೆಯನ್ನು ಸ್ಮರಣೀಯವಾಗಿಸುವುದು ಭಾರತದ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿರಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.