Team India Test ತಂಡಕ್ಕೆ ಸಿಕ್ಕ ಹೊಸ ಸಾರಥಿ, ಈ ಆಟಗಾರನಿಗೆ ಜವಾಬ್ದಾರಿ ವಹಿಸಿದ ಸೆಲೆಕ್ಟರ್ಸ್

Team India New Test Captain - ಶ್ರೀಲಂಕಾ ಸರಣಿಯಲ್ಲಿಯೇ ಭಾರತ ಟೆಸ್ಟ್ ತಂಡಕ್ಕೆ ನೂತನ ಸಾರಥಿ ಸಿಗಲಿದ್ದಾನೆ. ದೀರ್ಘ ಕಾಲದಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಇದಕ್ಕಾಗಿ ಕಾತರದಿಂದ ಕಾಯುತಿದ್ದರು.   

Written by - Nitin Tabib | Last Updated : Feb 19, 2022, 05:04 PM IST
  • ವಿರಾಟ್ ಕೊಹ್ಲಿ ಬಳಿಕ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ನೂತನ ಸಾರಥಿಯ ಘೋಷಣೆ
  • ಮುಂಬರುವ ಶ್ರೀಲಂಕಾ ಸರಣಿಗೆ ಟೀಂ ಇಂಡಿಯಾ ಘೋಷಣೆ
  • ರೋಹಿತ್ ಶರ್ಮಾ ಹೆಗಲಿಗೆ ನಾಯಕತ್ವ ಮತ್ತು ಬೂಮ್ರಾ ಹೆಗಲಿಗೆ ಉಪನಾಯಕತ್ವದ ಜವಾಬ್ದಾರಿವಹಿಸಿದ BCCI
Team India Test ತಂಡಕ್ಕೆ ಸಿಕ್ಕ ಹೊಸ ಸಾರಥಿ, ಈ ಆಟಗಾರನಿಗೆ ಜವಾಬ್ದಾರಿ ವಹಿಸಿದ ಸೆಲೆಕ್ಟರ್ಸ್  title=
Team India New Test Captain (File Photo)

ನವದೆಹಲಿ: New Test Captain - ವೆಸ್ಟ್ ಇಂಡೀಸ್ ನಂತರ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಸರಣಿ (IND vs SL) ಆಡಲಿದೆ. ಈ ಸರಣಿಯೊಂದಿಗೆ ಭಾರತ ತಂಡ ನೂತನ ಟೆಸ್ಟ್ ನಾಯಕನನ್ನು ಸಹ ಪಡೆಯಲಿದೆ. ಭಾರತದ ನೂತನ ಟೆಸ್ಟ್ ನಾಯಕ ಯಾರು? ಎಂಬ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳಲು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೂಡ ಬಹಳ ದಿನಗಳಿಂದ ಕಾಯುತ್ತಿದ್ದರು. ಆದರೆ ಇದೀಗ ಬಿಸಿಸಿಐ (BCCI) ಈ ಕುರಿತು ಘೋಷಣೆ ಮಾಡಿದೆ. ವಿರಾಟ್ ಕೊಹ್ಲಿ ಇತ್ತೀಚೆಗೆ ಭಾರತೀಯ ಟೆಸ್ಟ್ ತಂಡದ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಂಗತಿ ನಿಮ್ಮೆಲ್ಲರಿಗೂ ತಿಳಿದೇ ಇದೆ. 

ಇದನ್ನೂ ಓದಿ-CSK ತಂಡಕ್ಕೆ ಎದುರಾಗಿದೆ ಸಮಸ್ಯೆ! ಧೋನಿ ಆಟಗಾರನ ವಿರುದ್ಧ ವಂಚನೆ ಆರೋಪ

ಇದನ್ನೂ ಓದಿ-ರಣಜಿ ಟ್ರೋಫಿಯಲ್ಲಿ ಹೊಸ ಇತಿಹಾಸ ನಿರ್ಮಿಸಿದ ಸಕಿಬುಲ್ ಗನಿ..!

ಭಾರತ ಟೆಸ್ಟ್ ತಂಡಕ್ಕೆ ಸಿಕ್ಕ ನೂತನ ಸಾರಥಿ
ವಿರಾಟ್ ಕೊಹ್ಲಿ (Virat Kohli\i) ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಇದೀಗ ಟೀಂ ಇಂಡಿಯಾಗೆ ಹೊಸ ನಾಯಕನ ಆಯ್ಕೆಯನ್ನು ಮಾಡಲಾಗಿದೆ. ಪ್ರಸ್ತುತ ಭಾರತ T20 ತಂಡದ ನಾಯಕರಾಗಿರುವ ರೋಹಿತ್ ಶರ್ಮಾ (Rohit Sharma) ಅವರೇ ಭಾರತದ ಟೆಸ್ಟ್ ತಂಡದ (Team India Test Team) ನಾಯಕತ್ವದ ಜವಾಬ್ದಾರಿಯನ್ನು ಕೂಡ ಹೊತ್ತುಕೊಳ್ಳಲಿದ್ದಾರೆ. ಇದರೊಂದಿಗೆ ಮತ್ತೊಮ್ಮೆ ಟೀಂ ಇಂಡಿಯಾ ಕ್ರಿಕೆಟ್ ನ ಎಲ್ಲಾ ಮೂರು ಮಾದರಿಗಳಿಗೆ ಒಬ್ಬನೇ ನಾಯಕನನ್ನು ಹೊಂದಲಿದೆ. ಇನ್ನೊಂದೆಡೆ ತಂಡದ ಉಪನಾಯಕನ (Vice Captain) ಜವಾಬ್ದಾರಿ ಜಸ್ಪ್ರೀತ್ ಬೂಮ್ರಾ (Jasprit Bumrah). ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧವೂ ಬುಮ್ರಾ ಈ ಜವಾಬ್ದಾರಿಯನ್ನು ನಿಭಾಯಿಸಿದ್ದರು.

ಇದನ್ನೂ ಓದಿ-ಪುತ್ರನ ಆಟ ನೋಡಲು ಹೋಗದಿರುವುದಕ್ಕೆ ಸಚಿನ್ ನೀಡಿದ ಕಾರಣವೇನು ಗೊತ್ತೇ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News