ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಸೋಮವಾರ ನಡೆದ ಜಿಂಬಾಬ್ವೆ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 13 ರನ್ಗಗಳಿಂದ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ಗೆಲುವು ಪಡೆದುಕೊಂಡಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Axar Patel : ಅಕ್ಷರ್ ಪಟೇಲ್‌ನಿಂದಾಗಿ ಹಾಳಾಗುತ್ತಿದೆ ಈ ಆಟಗಾರನ ವೃತ್ತಿಜೀವನ!


ಆತಿಥೇಯ ಜಿಂಬಾಬ್ವೆ ವಿರುದ್ಧ ಕಣಕ್ಕಿಳಿದಿದ್ದ ಭಾರತ ಮೂರನೇ ಪಂದ್ಯವನ್ನು ಸಹ ಕೈವಶ ಮಾಡಿಕೊಂಡು ಜಿಂಬಾಬ್ವೆಗೆ ಸೋಲಿನ ರುಚಿ ಉಣಿಸಲು ಕಾತುರರಾಗಿದ್ದರು. ಇಲ್ಲಿನ ಹರಾರೆ ಸ್ಪೋರ್ಟ್‌ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಭಾರತ ಕೇವಲ 84 ರನ್ಗಗಳಿಗೆ ಆರಂಭಿಕ ವಿಕೆಟ್ಗಳನ್ನು ಕಳೆದುಕೊಂಡಿತ್ತು. ಓಪನರ್‌ ಗಳಾದ ಕೆ.ಎಲ್ ರಾಹುಲ್‌ (30) ಮತ್ತು ಶಿಖರ್‌ ಧವನ್‌ (40) ಬಾರಿಸಿದ್ದರು.


ಆ ಬಳಿಕ ಕಣಕ್ಕಿಳಿದ ಶುಭ್ಮನ್ ಗಿಲ್ ಭರ್ಜರಿ ಆಟ ಪ್ರದರ್ಶಿಸಿದ್ದು, 97 ಎಸೆತಕ್ಕೆ 130 ರನ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ಲಯಕ್ಕೆ ತಂದರು.


ಇನ್ನೊಂದೆಡೆ ಜಿಂಬಾಬ್ವೆ ತಂಡದ ಸಿಕಂದರ್ ರಜಾ 95 ಎಸೆತಗಳಲ್ಲಿ 115 ರನ್ ಬಾರಿಸುವ ಮೂಲಕ ಮೂರನೇ ODI ನಲ್ಲಿ ಜಿಂಬಾಬ್ವೆಯನ್ನು ಅದ್ಭುತ ಗೆಲುವಿನ ಸಮೀಪಕ್ಕೆ ಕರೆದೊಯ್ದರು. ಬ್ರಾಡ್ ಇವಾನ್ಸ್ ಜತೆಗೆ ಒಂಬತ್ತನೇ ವಿಕೆಟ್‌ಗೆ 79 ಎಸೆತಗಳಲ್ಲಿ 104 ರನ್‌ಗಳ ಜೊತೆಯಾಟವನ್ನು ಆಡಿದ್ದಾರೆ.  


ಇದನ್ನೂ ಓದಿ: ಜಿಂಬಾಬ್ವೆ ಟೂರ್ ಬಳಿಕ ಈ ಆಟಗಾರನಿಗೆ ನಾಯಕತ್ವ ಪಟ್ಟ: ಶೀಘ್ರದಲ್ಲೇ ಮಹಾ ಘೋಷಣೆ!


ಒಟ್ಟಾರೆಯಾಗಿ ಭಾರತ ತಂಡ ಎಂಟು ವಿಕೆಟ್ ನಷ್ಟಕ್ಕೆ 289 ರನ್ ಕಲೆ ಹಾಕಿತ್ತು. ಟೀಂ ಇಂಡಿಯಾ ನೀಡಿದ್ದ ಗೆಲುವಿನ ಗುರಿ ಬೆನ್ನತ್ತಿದ ಜಿಂಬಾಬ್ವೆ 49.3 ಓವರ್ನಲ್ಲಿ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 276 ರನ್ ಗಳಿಸಲಷ್ಟೇ ಶಕ್ತವಾಯಿತು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.