Jhulan Goswami Retirement: ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್ ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಆಟಗಾರ್ತಿ ಝೂಲನ್ ಗೋಸ್ವಾಮಿಯಿಂದ ನಿವೃತ್ತಿಯ ಘೋಷಣೆ

Jhulan Goswami Retirement:  ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಝೂಲನ್ ಗೋಸ್ವಾಮಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಝೂಲನ್ ತಮ್ಮ ಕೊನೆಯ ಪಂದ್ಯವನ್ನು ಎಲ್ಲಿ ಮತ್ತು ಯಾವಾಗ ಆಡಲಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Aug 20, 2022, 02:10 PM IST
  • ಕ್ರಿಕೆಟ್ ವೃತ್ತಿಬದುಕಿಗೆ ವಿದಾಯ ಘೋಷಿಸಿದ ಝೂಲನ್ ಗೋಸ್ವಾಮಿ
  • ಪ್ರಸ್ತುತ ಝೂಲನ್ ಭಾರತೀಯ ತಂಡದ ಹಿರಿಯ ಆಟಗಾರ್ತಿಯಾಗಿದ್ದಾರೆ
  • ಝೂಲನ್ ಲಾರ್ಡ್ ನಲ್ಲಿ ಸೆ.24 ರಂದು ಇಂಗ್ಲೆಂಡ್ ವಿರುದ್ಧ ತಮ್ಮ ಕೊನೆಯ ಪಂದ್ಯವನ್ನು ಆಡಲಿದ್ದಾರೆ.
Jhulan Goswami Retirement: ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್ ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಆಟಗಾರ್ತಿ ಝೂಲನ್ ಗೋಸ್ವಾಮಿಯಿಂದ ನಿವೃತ್ತಿಯ ಘೋಷಣೆ title=
Cricket News In Kannada

Jhulan Goswami Retirement:  ಭಾರತೀಯ ಮಹಿಳಾ ಕ್ರಿಕೆಟ್ ತಂಡದ ದಿಗ್ಗಜ ಆಟಗಾರ್ತಿ ಝೂಲನ್ ಗೋಸ್ವಾಮಿ ನಿವೃತ್ತಿ ಘೋಷಿಸಿದ್ದಾರೆ. ಝೂಲನ್ ತನ್ನ ಕೊನೆಯ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಸೆಪ್ಟೆಂಬರ್ 24 ರಂದು ಲಾರ್ಡ್ಸ್‌ ಮೈದಾನದಲ್ಲಿ ಆಡಲಿದ್ದಾರೆ. ಶುಕ್ರವಾರವೇ ಇಂಗ್ಲೆಂಡ್ ಪ್ರವಾಸದ ತಂಡದಲ್ಲಿ ಝೂಲನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಈ ವರ್ಷ ನಡೆದ ವಿಶ್ವಕಪ್‌ನಲ್ಲಿ ಝೂಲನ್ ತನ್ನ ಕೊನೆಯ ಪಂದ್ಯವನ್ನು ಆಡಿದ್ದರು ಮತ್ತು ಅಂದಿನಿಂದ ಅವರು ತಂಡದಿಂದ ಹೊರಗುಳಿದಿದ್ದರು. ಅವರನ್ನು ತಂಡದಿಂದ ಹೊರಗಿಡಲು ಗಾಯದ ಸಮಸ್ಯೆಯೂ ಕೂಡ ಒಂದು ಕಾರಣವಾಗಿತ್ತು.

ನಿವೃತ್ತಿ ಏಕೆ ಘೋಷಿಸಿದ್ದಾರೆ?
ಜೂಲನ್ ಅವರಿಗೆ ಪ್ರಸ್ತುತ 39 ವರ್ಷ ವಯಸ್ಸಾಗಿದ್ದು, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಾವು ಹೆಚ್ಚು ಕಾಲ ಉಳಿಯುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಇದರೊಂದಿಗೆ ಟೀಮ್ ಮ್ಯಾನೇಜ್ ಮೆಂಟ್ ಕೂಡ ಎಲ್ಲಾ ಮೂರೂ ಫಾರ್ಮ್ಯಾಟ್ ಗಳಲ್ಲಿ ಆಟವಾಡಲು ಸಿದ್ಧರಿರುವ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಲು ಬಯಸುತ್ತಿದೆ. ಝೂಲನ್ ನಿವೃತ್ತಿಯ ಹಿಂದೆ ಇದೇ ದೊಡ್ಡ ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ-ಚೊಚ್ಚಲ ಪ್ರವೇಶಕ್ಕಾಗಿ ಈ ಆಟಗಾರ ಕಾಯುತ್ತಿದ್ದರೆ ರಾಹುಲ್ ಹೀಗೆ ಮಾಡಬಹುದೇ?

ಇಷ್ಟು ದಿನಗಳ ನಂತರ ತಂಡಕ್ಕೆ ಏಕೆ ಸೇರ್ಪಡೆ?
ಮಂಡಳಿಯು ಝೂಲನ್‌ಗೆ ಉತ್ತಮ ವಿದಾಯ ನೀಡಲು ಬಯಸಿದೆ ಎಂದು ಹೇಳಲಾಗುತ್ತಿದೆ. ನ್ಯೂಜಿಲೆಂಡ್ ನಲ್ಲಿಯೇ ವಿಶ್ವಕಪ್ ನಲ್ಲಿ ಅವಳು ವಿದಾಯ ಹೇಳಬೇಕಿತ್ತು. ಆದರೆ ಝೂಲನ್ ಗಾಯದ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಗುಂಪಿನ ಪಂದ್ಯದಲ್ಲಿ ಆಡಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಇದೀಗ ಇಂಗ್ಲೆಂಡ್ ವಿರುದ್ಧದ ತಂಡಕ್ಕೆ ಸೇರ್ಪಡೆಗೊಂಡಿದ್ದು, ಲಾರ್ಡ್ಸ್ ನಲ್ಲಿ ಝೂಲನ್ ಗೆ ಉತ್ತಮ ಫೇರ್ ವೆಲ್ ಹೇಳಬಹುದು.

ಇದನ್ನೂ ಓದಿ-Sachin Tendulkar : ಈ ಆಟಗಾರನನ್ನು ಸಚಿನ್ ತೆಂಡೂಲ್ಕರ್ ಗೆ ಹೋಲಿಸಿದ ಕಾಮೆಂಟೇಟರ್

ಅದ್ಭುತ ವೃತ್ತಿ ಜೀವನ
ಝೂಲನ್ ಗೋಸ್ವಾಮಿ  ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಅವರು ತಮ್ಮ ವೃತ್ತಿ ಜೀವನದಲ್ಲಿ ಒಟ್ಟು 352 ವಿಕೆಟ್ ಪಡೆದಿದ್ದಾರೆ. ಝೂಲನ್ 2002ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾಗೆ  ಪದಾರ್ಪಣೆ ಮಾಡಿದ್ದರು. 20 ವರ್ಷಗಳ ಸುದೀರ್ಘ ವೃತ್ತಿ ಜೀವನದಲ್ಲಿ ಅವರು ಹಲವು ಏರಿಳಿತಗಳನ್ನು ಕಂಡಿದ್ದಾರೆ. ತನ್ನ ವೃತ್ತಿಜೀವನದಲ್ಲಿ, ಝೂಲನ್ ಇದುವರೆಗೆ 12 ಟೆಸ್ಟ್, 201 ODI ಮತ್ತು 68 T20 ಪಂದ್ಯಗಳನ್ನು ಆಡಿದ್ದಾರೆ. ಇವುಗಳಲ್ಲಿ ಅವರು ಕ್ರಮವಾಗಿ 44, 252 ಮತ್ತು 56 ವಿಕೆಟ್‌ಗಳನ್ನು ಕಬಳಿಸಿದ್ದಾರೆ. T20 ಮತ್ತು ODI ನಲ್ಲಿ ಜೂಲನ್ ಅವರ ಸರಾಸರಿ ಕೂಡ ಅತ್ಯುತ್ತಮವಾಗಿದೆ. ಟಿ20ಯಲ್ಲಿ ಐದು ವಿಕೆಟ್‌ಗಳ ಸಾಧನೆ ಕೂಡ ಝೂಲನ್ ತನ್ನ ಹೆಸರಿನಲ್ಲಿ ಬರೆದಿದ್ದಾರೆ. ODIಗಳಲ್ಲಿ ಅವರ ಸರಾಸರಿ 21.98 ಆಗಿದ್ದರೆ, T20 ಗಳಲ್ಲಿ 21.94 ಆಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News