ಮೊದಲ ಟೆಸ್ಟ್: ಆಫ್ಘಾನಿಸ್ತಾನದ ವಿರುದ್ದ ಭಾರತಕ್ಕೆ ವಿಶ್ವದಾಖಲೆಯ ಗೆಲುವು
ಬೆಂಗಳೂರು: ಭಾರತ ತಂಡವು ನೀಡಿದ 474 ರನ್ ಗಳ ಮೊದಲ ಇನ್ನಿಂಗ್ಸ್ ನಲ್ಲಿನ ಸವಾಲನ್ನು ಬೆನ್ನತ್ತಿ ಬ್ಯಾಟಿಂಗ್ ಆರಂಭಿಸಿದ ಅಫ್ಘಾನಿಸ್ತಾನ್ ತಂಡವು ಕೇವಲ ಒಂದೇ ದಿನದಲ್ಲಿ ಎರಡು ಇನ್ನಿಂಗ್ಸ್ ನಲ್ಲಿ ಆಲೌಟ್ ಆಗಿದೆ. ಆ ಮೂಲಕ ಕೇವಲ ಎರಡೇ ದಿನದಲ್ಲಿ ಅಫ್ಘಾನಿಸ್ತಾನ ಸೋಲನ್ನುಭವಿಸಿದೆ.
ಮೊದಲ ಇನ್ನಿಂಗ್ಸ್ ನ ಬ್ಯಾಟಿಂಗ್ ಆರಂಭಿಸಿದ ಆಫ್ಗಾನಿಸ್ತಾನ್ ತಂಡವು 38.4 ಓವರ್ ಗಳಲ್ಲಿ ಆಲೌಟ್ ಆಯಿತು. ಆಫ್ಘಾನಿಸ್ತಾನದ ಪರ ಹಸಹ್ಮತುಲ್ಲಾ ಶಾಹಿದಿ(36) ಮತ್ತು ಅಸ್ಗರ್ ಸ್ಟ್ಯಾನಿಕ್ಸಿ (25) ಇಬ್ಬರನ್ನು ಹೊರತು ಪಡಿಸಿದರೆ ಯಾರು ಕೂಡ 20 ರ ಗಡಿ ದಾಟಲಿಲ್ಲ. ಭಾರತದ ಪರ ರವಿಂದ್ರ ಜಡೇಜಾ ಮತ್ತು ಉಮೇಶ್ ಯಾದವ್ ನಾಲ್ಕು ವಿಕೆಟ್ ಗಳನ್ನು ಪಡೆದುಕೊಂಡು ಆಫ್ಘಾನಿಸ್ತಾನದ ಬ್ಯಾಟಿಂಗ್ ಬೆನ್ನೆಲಬು ಮುರಿದರು.
ಫಾಲೋಆನ್ ಪಡೆದುಕೊಂಡ ಅಫ್ಘಾನಿಸ್ತಾನ್ ಎರಡೆನೇ ಇನ್ನಿಂಗ್ಸ್ ನಲ್ಲಿಯೂ ಕೂಡ ಕಳಪೆ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿತು.ಆ ಮೂಲಕ ಕೇವಲ 109 ರನ್ ಗಳಿಗೆ ಎಲ್ಲ ವಿಕೆಟ್ ಗಳನ್ನೂ ಕಳೆದುಕೊಂಡಿತು.ಎರಡೇ ಇನ್ನಿಂಗ್ಸ್ ನಲ್ಲಿ ಆರ್.ಅಶ್ವಿನ್ ಅವರು ನಾಲ್ಕು ವಿಕೆಟ್ ಪಡೆದರು.
ಆ ಮೂಲಕ ಇದೇ ಮೊದಲ ಬಾರಿಗೆ ಕೇವಲ ಎರಡು ದಿನದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿದೆ. ಒಟ್ಟು 141 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ 21 ಬಾರಿ ಕೇವಲ ಎರಡು ದಿನದಲ್ಲಿ ಟೆಸ್ಟ್ ಪಂದ್ಯ ಮುಗಿದುಹೋಗಿದೆ. ಇದೇ ಮೊದಲ ಬಾರಿಗೆ ತಂಡವೊಂದು ಕೇವಲ ಒಂದೇ ದಿನದಲ್ಲಿ 20 ವಿಕೆಟ್ ಪಡೆದ ಸಾಧನೆ ಮಾಡಿತು.