ನವದೆಹಲಿ: ಹಿಟ್‍ಮ್ಯಾನ್ ಖ್ಯಾತಿಯ  ರೋಹಿತ್ ಶರ್ಮಾ ಪ್ರಸ್ತುತ ಟೀಂ ಇಂಡಿಯಾದ ನಾಯಕತ್ವವನ್ನು ನಿರ್ವಹಿಸುತ್ತಿದ್ದಾರೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 2-ಪಂದ್ಯಗಳ ಟೆಸ್ಟ್ ಸರಣಿ (IND vs WI) ಜುಲೈ 12ರಿಂದ ಪ್ರಾರಂಭವಾಗಲಿದೆ. ಏತನ್ಮಧ್ಯೆ ರೋಹಿತ್ ನಂತರ ತಂಡದ ನಾಯಕತ್ವ ಯಾರಿಗೆ ಸಿಗುತ್ತದೆ ಅನ್ನೋದರ ಬಗ್ಗೆ ಭಾರತದ ಮಾಜಿ ಅನುಭವಿ ಆಟಗಾರ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಮೊದಲ ತಂಡ ಆಯ್ಕೆ ಮಾಡಿದ ಅಗರ್ಕರ್


ವೆಸ್ಟ್ ಇಂಡೀಸ್ ವಿರುದ್ಧ ಮುಂಬರುವ 5 ಪಂದ್ಯಗಳ ಟಿ-20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ಸರಣಿಯು ವೆಸ್ಟ್ ಇಂಡೀಸ್ ವಿರುದ್ಧ 2 ಟೆಸ್ಟ್ ಮತ್ತು 3 ಏಕದಿನ ಪಂದ್ಯಗಳ ನಂತರ ನಡೆಯಲಿದೆ. ಯುವ ಆಟಗಾರ ಯಶಸ್ವಿ ಜೈಸ್ವಾಲ್ ಮತ್ತು ತಿಲಕ್ ವರ್ಮಾ ಮೊದಲ ಬಾರಿಗೆ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಕುತೂಹಲಕಾರಿಯಾಗಿ ಹೊಸದಾಗಿ ನೇಮಕಗೊಂಡ ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ಹಾರ್ದಿಕ್ ಪಾಂಡ್ಯ ಅವರನ್ನು ಟಿ-20 ನಾಯಕರಾಗಿ ಉಳಿಸಿಕೊಂಡಿದ್ದಾರೆ. ಅಗರ್ಕರ್ ಅವರು ಮೊದಲ ತಂಡವನ್ನು ಮುಖ್ಯ ಆಯ್ಕೆಗಾರರಾಗಿ ಆಯ್ಕೆ ಮಾಡಿದರು.


ಇದನ್ನೂ ಓದಿ: T20 ಸ್ವರೂಪದಲ್ಲಿ ಹಿಂದೆಂದೂ ಕಂಡಿರದ ಬದಲಾವಣೆಗೆ ಮುಂದಾದ BCCI! ಮಹತ್ವದ ಹೆಜ್ಜೆಗೆ ಕಾರಣ…


ರೋಹಿತ್‌ಗೆ ವಿಶ್ರಾಂತಿ


ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಟಿ-20 ಸರಣಿಗೆ ವಿಶ್ರಾಂತಿ ನೀಡಲಾಗಿದೆ. 2022ರ T20 ವಿಶ್ವಕಪ್ ಟೂರ್ನಿಯ ನಂತರ ಈ ಇಬ್ಬರೂ ಆಟಗಾರರು ಟಿ-20 ಪಂದ್ಯಗಳಿಂದ ದೂರ ಉಳಿದ್ದಾರೆ. ಹಾರ್ದಿಕ್ T20ನಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ನಡುವೆ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ದೊಡ್ಡ ವಿಷಯವೊಂದನ್ನು ಹೇಳಿದ್ದಾರೆ.


ಆಕಾಶ್ ಚೋಪ್ರಾ ಭವಿಷ್ಯ?


ಭಾರತದ ಮಾಜಿ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ ಅವರು ಹಾರ್ದಿಕ್ ಪಾಂಡ್ಯ ದೀರ್ಘಕಾಲದವರೆಗೆ ಟಿ-20 ಮತ್ತು 2024ರಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ, ‘ಟಿ-20 ವಿಶ್ವಕಪ್ ನಂತರ ನಾಯಕತ್ವ ಹಸ್ತಾಂತರಿಸಲ್ಪಟ್ಟ ಹಾರ್ದಿಕ್ ಪಾಂಡ್ಯ ಈಗ ಅಂತಿಮ ನಿರ್ಧಾರದಂತೆ ತೋರುತ್ತಿದೆ. ಮುಂಬರುವ ದಿನಗಳಲ್ಲಿ ಅಂದರೆ ಮುಂಬರುವ ವಿಶ್ವಕಪ್‍ವರೆಗೆ ಹಾರ್ದಿಕ್ ಭಾರತ ಟಿ-20 ತಂಡವನ್ನು ಮುನ್ನಡೆಸಲಿದ್ದಾರೆ. ರೋಹಿತ್ ಮತ್ತು ವಿರಾಟ್ ಅವರನ್ನು ತಂಡದಿಂದ ಹೊರಗಿಡುವ ಬಗ್ಗೆ ಚೋಪ್ರಾ ಮಾತನಾಡಿದ್ದು, 'ಅವರು ಈಗಾಗಲೇ ಆ ದಿಕ್ಕಿನಲ್ಲಿ ಸಾಗಿದ್ದಾರೆಂದು ನಾನು ಭಾವಿಸುತ್ತೇನೆ. ಅದು ಈಗಲೂ ಹಾಗೆಯೇ ಇದ್ದು, ಏನೂ ಬದಲಾಗಿಲ್ಲ. ಯಾವುದೇ ಹಿರಿಯರನ್ನು ಆಯ್ಕೆ ಮಾಡಿಲ್ಲ. ಕೆ.ಎಲ್.ರಾಹುಲ್ ಅಲಭ್ಯರಿದ್ದು, ಟಿ-20 ವಿಶ್ವಕಪ್ ನಂತರ ರೋಹಿತ್ ಮತ್ತು ಕೊಹ್ಲಿ ಈ ಮಾದರಿಯಲ್ಲಿ ಆಡಿಲ್ಲವೆಂದು ಹೇಳಿದ್ದಾರೆ.


ಇದನ್ನೂ ಓದಿ: ವಿಶ್ವಕಪ್’ನಿಂದ ಈ ತಂಡಗಳು ಹೊರಕ್ಕೆ…! ಈ ದೇಶಗಳ ವಿರುದ್ಧ ಸೆಣಸಾಡಲಿದೆ ಭಾರತ-ವೇಳಾಪಟ್ಟಿ ಹೀಗಿದೆ


ಭಾರತ ಟಿ-20 ತಂಡ: ಹಾರ್ದಿಕ್ ಪಾಂಡ್ಯ (c), ಇಶಾನ್ ಕಿಶನ್ (wk), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (vc), ಸಂಜು ಸ್ಯಾಮ್ಸನ್ (wk), ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ರವಿ ಬಿಷ್ಣೋಯ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್, ಅವೇಶ್ ಖಾನ್ ಮತ್ತು ಮುಖೇಶ್ ಕುಮಾರ್.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.